aಡಾಲಿ ಧನಂಜಯ್ ಹಾಗೂ ಅಗ್ನಿ ಶ್ರೀನಿವಾಸ್ ಅವರ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಹೊಸ ಚಿತ್ರ ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದು, ಇದೀಗ ಚಿತ್ರದ ಟೈಟಲ್ ಸಹ ಬಹಿರಂಗವಾಗಿದೆ. ಈ ಚಿತ್ರಕ್ಕೆ ಹೆಡ್ ಬುಷ್ ಎಂದು ಹೆಸರಿಡಲಾಗಿದ್ದು, ಟೈಟಲ್ ನಿಂದಲೇ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರದ ಟೈಟಲ್ ಅನಾವರಣಗೊಳಿಸಿದ್ದಾರೆ. ಹೆಡ್ ಬುಷ್ ಚಿತ್ರದ ಟೈಟಲ್ ಬಿಡುಗಡೆ ಮಾಡಿದ ಪವರ್ ಸ್ಟಾರ್, ಧನಂಜಯ್ ಮತ್ತು ಅಗ್ನಿ ಶ್ರೀಧರ್ ತಂಡಕ್ಕೆ ಶುಭ ಕೋರಿದ್ದಾರೆ. ಈ ಚಿತ್ರ ಮಾಜಿ ಡಾನ್ ಆಗಿದ್ದ ಎಂಪಿ ಜಯರಾಜ್ ಅವರ ಜೀವನ ಆಧಾರಿತ ಕಥೆಯಾಗಿದ್ದು, ಜಯರಾಜ್ ಅವರ ಪಾತ್ರಕ್ಕೆ ಡಾಲಿ ಬಣ್ಣ ಹಚ್ಚಲಿದ್ದಾರೆ. ಇನ್ನೂ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿ ಅಗ್ನಿ ಶ್ರೀಧರ್ ಅವರ ಮೇಲಿದ್ದು, ಈ ಚಿತ್ರ ಅವರ ‘ದಾದಾಗಿರಿ ದಿನಗಳು’ ಪುಸ್ತಕ ಆಧರಿತವಾಗಿದೆ.
ಚಿತ್ರಕ್ಕೆ ಅಶುಬೇದ್ರ ಬಂಡವಾಳ ಹೂಡಿದ್ರೆ ಈ ಸಿನಿಮಾಗೆ ಶೂನ್ಯ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಷ್ಟೇ ಅಲ್ಲ ಈ ಚಿತ್ರ ಆರು ಭಾಷೆಯಲ್ಲಿ ತೆರೆಕಾಣಲಿದೆ ಎನ್ನಲಾಗಿದೆ. ಕನ್ನಡ, ತೆಲುಗು, ತಮಿಳು, ಇಂಗ್ಲಿಷ್, ಮಲಯಾಳಂ ಹಾಗು ಹಿಂದಿಯಲ್ಲಿ ರಿಲೀಸ್ ಆಗಲಿದೆ ಹೆಡ್ ಬುಷ್.







