ADVERTISEMENT
Thursday, August 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕ್ರಿಕೆಟ್ ಬದುಕಿಗೆ ಎರಡೇ ವಾಕ್ಯಗಳಲ್ಲಿ ನಿವೃತ್ತಿ ಘೋಷಿಸಿದ ಮಹೇಂದ್ರ ಸಿಂಗ್ ಧೋನಿ..!

admin by admin
August 15, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಕ್ರಿಕೆಟ್ ಬದುಕಿಗೆ ಎರಡೇ ವಾಕ್ಯಗಳಲ್ಲಿ ನಿವೃತ್ತಿ ಘೋಷಿಸಿದ ಮಹೇಂದ್ರ ಸಿಂಗ್ ಧೋನಿ..!
ಟೆಸ್ಟ್ ಕ್ರಿಕೆಟ್ ಗೆ 120 ಸೆಕೆಂಡುಗಳಲ್ಲಿ ವಿದಾಯ ಹೇಳಿದ್ದ ಮಾಹೀ…!
16 ವರ್ಷಗಳ ವರ್ಣರಂಜಿತ ಕ್ರಿಕೆಟ್ ಬದುಕಿನ ಏಳುಬೀಳುಗಳ ಸಂಪೂರ್ಣ ಚಿತ್ರಣ..!

ಮಹೇಂದ್ರ ಸಿಂಗ್ ಧೋನಿ…
ವಿಶ್ವ ಕ್ರಿಕೆಟ್ ಗೆ ಗ್ರೇಟ್ ಲೀಡರ್.. ಟೀಮ್ ಇಂಡಿಯಾದ ಶ್ರೇಷ್ಠ ನಾಯಕ, ಒಡನಾಡಿಗಳಿಗೆ ಕೂಲ್ ಕ್ಯಾಪ್ಟನ್.. ಅಭಿಮಾನಿಗಳಿಗೆ ಪಕ್ಕಾ ಎಂಟೈಟೇನರ್.. ಜಾಹೀರಾತು ಕಂಪೆನಿಗಳಿಗೆ ಸೂಪರ್ ಸ್ಟಾರ್.. ಎದುರಾಳಿ ತಂಡಗಳಿಗೆ ಗ್ಯಾಂಬ್ಲರ್..ಅಷ್ಟೇ ಅಲ್ಲ ಕ್ಲಾಸ್ ಗೂ ಸೈ, ಮಾಸ್ ಗೂ ಜೈ ಅನ್ನುವ ರಾಂಚಿ ರಾಂಬೋ ವಿಶ್ವ ಕ್ರಿಕೆಟ್‍ನ ಎವರ್ ಗ್ರೀನ್ ಹೀರೋ. ಅದಕ್ಕಾಗಿಯೇ ಧೋನಿಯವರನ್ನು ಎಂದಿಗೂ ಮಿಸ್ ಯೂ ಅನ್ನಲ್ಲ..!
ಹೌದು, ಎಂ.ಎಸ್. ಧೋನಿ ಈಗ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. ಇದು ಕ್ರಿಕೆಟ್ ಜಗತ್ತಿಗೆ ಬ್ರೆಕಿಂಗ್ ಸುದ್ದಿ. ಆದ್ರೆ ಮಹೇಂದ್ರ ಸಿಂಗ್ ಧೋನಿಗೆ ಇದು ಜಸ್ಟ್ ಸುದ್ದಿಯಷ್ಟೇ..ಯಾಕಂದ್ರೆ ಧೋನಿ ತುಂಬಾನೇ ಲೆಕ್ಕಾಚಾರ ಮಾಡಿಕೊಂಡು, ಕೂಲ್ ಆಗಿಯೇ ವಿದಾಯದ ಸುದ್ದಿ ಪ್ರಕಟಿಸಿದ್ದಾರೆ. ಅದು ಎಷ್ಟರ ಮಟ್ಟಿಗೆ ಅಂದ್ರೆ ತನ್ನ ಕ್ರಿಕೆಟ್ ಸ್ಟೈಲ್ ನಲ್ಲೇ ವಿದಾಯದ ಸುದ್ದಿಯನ್ನು ತಿಳಿಸಿದ್ದಾರೆ. ಅಭಿಮಾನಿಗಳಿಗೆ ಕೊನೆಯ ಕ್ಷಣದ ತನಕ ಉಸಿರುಕಟ್ಟಿಕೊಂಡು ಪಂದ್ಯ ನೋಡುವಂತೆ ಮಾಡುತ್ತಿದ್ದ ಧೋನಿ, ಟೆಸ್ಟ್ ಕ್ರಿಕೆಟ್ಗೆ ನಿಗೂಢವಾಗಿ ಗುಡ್ ಬೈ ಹೇಳಿದ್ರು. ಇದೀಗ ಏಕದಿನ ಮತ್ತು ಟಿ-ಟ್ವೆಂಟಿ ಕ್ರಿಕೆಟ್ ಗೂ ಯಾರು ಕೂಡ ಊಹೆ ಮಾಡದ ರೀತಿಯಲ್ಲಿ ತನ್ನ ನಿವೃತ್ತಿಯನ್ನು ಪ್ರಕಟಿಸಿದ್ದಾರೆ.

Related posts

ಶೋಷಿತರೇ ಎಚ್ಚರ, ನಿಮ್ಮಲ್ಲೇ ಬೆಂಕಿ ಹಚ್ಚುವವರಿದ್ದಾರೆ:ರಾಜಕೀಯ ನಿವೃತ್ತಿಯಾದರೂ ಹೋರಾಟ ನಿಲ್ಲದು- ಒಳ ಮೀಸಲಾತಿ ಜಾರಿಗೆ ನಾನು ಬದ್ಧ ಎಂದ ಸಿದ್ದರಾಮಯ್ಯ

ಶೋಷಿತರೇ ಎಚ್ಚರ, ನಿಮ್ಮಲ್ಲೇ ಬೆಂಕಿ ಹಚ್ಚುವವರಿದ್ದಾರೆ:ರಾಜಕೀಯ ನಿವೃತ್ತಿಯಾದರೂ ಹೋರಾಟ ನಿಲ್ಲದು- ಒಳ ಮೀಸಲಾತಿ ಜಾರಿಗೆ ನಾನು ಬದ್ಧ ಎಂದ ಸಿದ್ದರಾಮಯ್ಯ

August 27, 2026
ವಂದೇ ಮಾತರಂ ಸಂಪೂರ್ಣ ಹಾಡಲ್ಲ ಕೇವಲ ಮೊದಲ ಎರಡು ಚರಣಗಳಿಗಷ್ಟೇ ನಮ್ಮ ಸರ್ಕಾರ ಬದ್ಧ:ಪಕ್ಷದ ಸಿದ್ಧಾಂತವೇ ನಮಗೆ ಪರಮೋಚ್ಚ- ಸಿಎಂ ಡಿ ಕೆ ಶಿವಕುಮಾರ್

ವಂದೇ ಮಾತರಂ ಸಂಪೂರ್ಣ ಹಾಡಲ್ಲ ಕೇವಲ ಮೊದಲ ಎರಡು ಚರಣಗಳಿಗಷ್ಟೇ ನಮ್ಮ ಸರ್ಕಾರ ಬದ್ಧ:ಪಕ್ಷದ ಸಿದ್ಧಾಂತವೇ ನಮಗೆ ಪರಮೋಚ್ಚ- ಸಿಎಂ ಡಿ ಕೆ ಶಿವಕುಮಾರ್

August 27, 2026

120 ಸೆಕೆಂಡುಗಳಲ್ಲಿ ಟೆಸ್ಟ್ ಕ್ರಿಕೆಟ್‍ಗೆ ಗುಡ್ ಬೈ ಹೇಳಿದ್ದ ಧೋನಿ..!

ಡಿಸೆಂಬರ್ 30…2014. ಅದು ಮೂರನೇ ಟೆಸ್ಟ್ ಪಂದ್ಯದ ಕೊನೆಯ ದಿನ. ಮೆಲ್ಬರ್ನ್ ಕ್ರೀಡಾಂಗಣ ಇತಿಹಾಸಕ್ಕೆ ಸಾಕ್ಷಿಯಾಗುತ್ತಿದೆ ಎಂದು ಅಂದುಕೊಂಡಿರಲಿಲ್ಲ. ಯಾಕಂದ್ರೆ ಮೂರನೇ ಟೆಸ್ಟ್ ಪಂದ್ಯ ಆಗಲೇ ಮುಗಿದಿತ್ತು.. ಸೂರ್ಯ ತನ್ನ ಎಂದಿನ ದಿನಚರಿ ಮುಗಿಸಿದ್ದ. ಟೀಮ್ ಇಂಡಿಯಾ ಆಟಗಾರರು ಪಂದ್ಯವನ್ನು ಡ್ರಾ ಮಾಡಿಕೊಂಡ ಸಂತೃಪ್ತಿಯಲ್ಲಿದ್ರು. ಆಸ್ಟ್ರೇಲಿಯಾ ಆಟಗಾರರು ಸರಣಿ ಗೆದ್ದ ಖುಷಿಯಲ್ಲಿದ್ರು. ದಿನವಿಡಿ ಪಂದ್ಯ ನೋಡಿದ್ದ ಅಭಿಮಾನಿಗಳು ಮನೆ ದಾರಿ ಹಿಡಿದಿದ್ರು. ಮೆಲ್ಬರ್ನ್ ಕ್ರೀಡಾಂಗಣದ ಸಿಬ್ಬಂದಿಗಳು ಅಂಗಣವನ್ನು ಕ್ಲೀನ್ ಮಾಡುತ್ತಿದ್ರು. ಕ್ರೀಡಾಪತ್ರಕರ್ತರು ಪಂದ್ಯದ ವರದಿ ಸಿದ್ದಪಡಿಸುತ್ತಿದ್ರು.
ಆದ್ರೆ ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಹೊಟೇಲ್ ಕೊಠಡಿಯಲ್ಲಿ ಏಕಾಂಗಿಯಾಗಿ ಕುಳಿತು ಯೋಚನಾ ಲಹರಿಯಲ್ಲಿದ್ರು. ಅಷ್ಟರಲ್ಲೇ ತನ್ನ ಟೆಸ್ಟ್ ಕ್ರಿಕೆಟ್ ಭವಿಷ್ಯದ ನಿರ್ಧಾರಕ್ಕೆ ಅಂತಿಮ ಫುಲ್‍ಸ್ಟಾಪ್ ಹಾಕಿಬಿಟ್ಟಿದ್ರು. ಕಣ್ಣೀರಿನೊಂದಿಗೆ ತನ್ನ ಆಪ್ತಮಿತ್ರ ಸುರೇಶ್ ರೈನಾಗೆ ನಿರ್ಧಾರವನ್ನು ಮೊದಲು ಹೇಳಿದ್ರು. ಬಳಿಕ ದೂರವಾಣಿ ಮೂಲಕ ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ಗೆ ತನ್ನ ನಿರ್ಧಾರವನ್ನು ತಿಳಿಸಿದ್ರು. ಆಗ ಸಂಜಯ್ ಪಟೇಲ್ ಧೋನಿಯವರನ್ನು ವಿಚಾರಿಸಿಕೊಂಡು ನಿರ್ಧಾರದ ಬಗ್ಗೆ ಇನ್ನೊಂದು ಸಲ ಯೋಚನೆ ಮಾಡು ಅಂತ ಸಲಹೆ ನೀಡಿದ್ರು. ಎರಡೇ ಎರಡು ನಿಮಿಷಗಳಲ್ಲಿ ನನ್ನ ನಿರ್ಧಾರವನ್ನು ಹೇಳುತ್ತೇನೆ ಎಂದು ಧೋನಿ ಫೆÇೀನ್ ಇಟ್ರು. ತಕ್ಷಣವೇ ಹೊಟೇಲ್ ಕೊಠಡಿಗೆ ಸಹ ಆಟಗಾರರನ್ನು ಬರಮಾಡಿಕೊಂಡ್ರು. ಎಲ್ಲರೂ ಪಂದ್ಯದ ಬಗ್ಗೆ ನಾಯಕ ಏನು ಹೇಳುತ್ತಿರಬೇಕು ಎಂದು ಅಂದುಕೊಂಡಿದ್ರು. ಆದ್ರೆ ಎಲ್ಲರ ಲೆಕ್ಕಾಚಾರಗಳು ಬುಡಮೇಲು ಆಗಿದ್ದವು.

ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳುತ್ತಿದ್ದೇನೆ. ಟೆಸ್ಟ್ ಕ್ರಿಕೆಟ್ ನಲ್ಲಿ ಇನ್ನು ಮುಂದೆ ನಿಮ್ಮ ಜತೆ ಭಾಗಿಯಾಗಿರುವುದಿಲ್ಲ. ಏಕದಿನ ಮತ್ತು ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ ನಿಮ್ಮ ಜತೆ ಭಾಗಿಯಾಗಿರುತ್ತೇನೆ. ಆಲ್ ದಿ ಬೆಸ್ಟ್.. ಈ ಮಾತುಗಳನ್ನು ಹೇಳಿದಾಗ ಧೋನಿ ಗದ್ಗದಿತರಾಗಿದ್ರು. ಧೋನಿಯ ಮಾತುಗಳನ್ನು ಕೇಳಿದ ಸಹ ಆಟಗಾರರು ಒಂದು ಕ್ಷಣ ಆಘಾತಗೊಂಡ್ರು. ಜಸ್ಟ್ 120 ಸೆಕೆಂಡ್ಗಳಲ್ಲಿ ಧೋನಿ ತನ್ನ ನಿರ್ಧಾರವನ್ನು ಸಹ ಆಟಗಾರರಿಗೆ ಹೇಳಿದ್ರು. ಬಳಿಕ ಧೋನಿ ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಾಟೀಲ್ಗೆ ನನ್ನ ನಿರ್ಧಾರ ಅಚಲ ಎಂದಷ್ಟೇ ಹೇಳಿ ಫೆÇೀನ್ ಕಟ್ ಮಾಡಿದ್ರು. ಕೇವಲ ಹತ್ತು ಹದಿನೈದು ನಿಮಿಷಗಳಲ್ಲಿ ತನ್ನ ವರ್ಣ ರಂಚಿತ ಟೆಸ್ಟ್ ಕ್ರಿಕೆಟ್ ಬದುಕಿಗೆ ಧೋನಿ ವಿದಾಯ ಹೇಳುವ ಕೆಲಸವನ್ನು ಪೂರ್ಣಗೊಳಿಸಿದ್ರು. ಅಲ್ಲಿ ಯಾವುದೇ ನಟನೆ ಇರಲಿಲ್ಲ. ಒಲೈಕೆ ಇರಲಿಲ್ಲ. ಏನಿದ್ರೂ ನೇರ ನೇರ ಮಾತು… ಅಷ್ಟರ ಮಟ್ಟಿಗೆ ಧೋನಿ ಪರ್ಫೆಕ್ಟ್.

ಅಂದ ಹಾಗೇ, ಧೋನಿಯ ಈ ನಿರ್ಧಾರದ ಹಿಂದೆ ಹಲವಾರು ಕಾರಣಗಳಿವೆ. ಇದು ಏಕಾಏಕಿಯಾಗಿ ತೆಗೆದುಕೊಂಡ ನಿರ್ಧಾರವಲ್ಲ. ಬಹಳಷ್ಟು ಯೋಚನೆ ಮಾಡಿ ಕೈಗೊಂಡ ನಿರ್ಧಾರವಾಗಿದೆ. ಲೆಕ್ಕಾಚಾರ ಹಾಕಿಕೊಂಡೇ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ್ರು. ಮುಖ್ಯವಾಗಿ ಮಹೇಂದ್ರ ಸಿಂಗ್ ಧೋನಿ ಮಾನಸಿಕವಾಗಿ ವಿಚಲಿತರಾಗಿದ್ದರು. ವಿದೇಶಿ ನೆಲದಲ್ಲಿ ಸಾಲು ಸಾಲು ಸೋಲು ಕಂಗೆಡುವಂತೆ ಮಾಡಿತ್ತು. ಕೂಲ್ ಆಗಿ ತಂಡವನ್ನು ಮುನ್ನಡೆಸುತ್ತಿದ್ದ ಧೋನಿಗೆ ಎಲ್ಲೋ ಎಡವುತ್ತಿದ್ದೇನೆ ಎಂದು ಅನ್ನಿಸುತ್ತಿತ್ತು. ಅದ್ರಲ್ಲೂ ವಿರಾಟ್ ಕೊಹ್ಲಿಯ ಅಬ್ಬರ ಒಂದು ಕಡೆಯಾದ್ರೆ, ಟೀಮ್ ಇಂಡಿಯಾದ ಡ್ರೆಸಿಂಗ್ ರೂಂನ ವಾತಾವರಣ ಮೊದಲಿನಂತಿಲ್ಲ ಎಂಬುದನ್ನು ಧೋನಿ ಚೆನ್ನಾಗಿ ಅರಿತುಕೊಂಡಿದ್ರು.
ಅದ್ರಲ್ಲೂ ತರಬೇತುದಾರ ಡಂಕನ್ ಫ್ಲೇಚರ್ ಪವರ್ ಕೂಡ ಕಡಿಮೆಯಾಗುತ್ತಿತ್ತು. ತಂಡದ ನಿರ್ದೇಶಕರಾಗಿರುವ ರವಿಶಾಸ್ತ್ರಿ ವಿರಾಟ್ ಕೊಹ್ಲಿಗೆ ಹೆಚ್ಚು ಸಪೆÇೀರ್ಟ್ ಮಾಡುತ್ತಿದ್ರು. ಅಷ್ಟೇ ಅಲ್ಲ. ಬಿಸಿಸಿಐ ಅಧ್ಯಕ್ಷರಾಗಿದ್ದ ಶ್ರೀನಿವಾಸನ್ ಶ್ರೀರಕ್ಷೆ ಕೂಡ ಇರಲಿಲ್ಲ. ಜತೆಗೆ ಐಪಿಎಲ್ ಸ್ಟಾಟ್ ಫಿಕ್ಸಿಂಗ್, ಇಂಡಿಯನ್ ಸಿಮೆಂಟ್ ಉಪಾಧ್ಯಕ್ಷ ಹುದ್ದೆಯ ರಂಪಾಟ ಹೀಗೆ ಸಾಕಷ್ಟು ಆರೋಪಗಳು ಧೋನಿಯನ್ನು ಜರ್ಜರಿತಗೊಳಿಸುವಂತೆ ಮಾಡಿದ್ದವು. ಹಾಗೇ ಕಳಪೆ ಫಾರ್ಮ್, ಗಾಯದ ಸಮಸ್ಯೆ, ಫಿಟ್‍ನೆಸ್ ಸಮಸ್ಯೆ, ಸದಾ ಕಾಡುತ್ತಿದ್ದ ಬೆನ್ನುನೋವು ಹೀಗೆ ಧೋನಿಗೆ ಟೆಸ್ಟ್ ಕ್ರಿಕೆಟ್‍ಗೆ ತನ್ನ ದೇಹ ಸ್ಪಂದಿಸುತ್ತಿಲ್ಲ ಎಂಬ ಯೋಚನೆಯಲ್ಲೇ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ್ದರು.

ಮೂರು ಐಸಿಸಿ ಟ್ರೋಫಿ ಗೆದ್ದ ಚಾಣಕ್ಯ ನಾಯಕ ಧೋನಿ
ಅದೇನೇ ಇರಲಿ, ಧೋನಿಯ ಕ್ರಿಕೆಟ್ ಬದುಕು ಅರ್ಥಪೂರ್ಣವಾಗಿದೆ. ರಾಂಚಿಯ ಸಣ್ಣಪಟ್ಟಣದ ಹುಡುಗನೊಬ್ಬ ವಿಶ್ವ ಕ್ರಿಕೆಟ್ ಶ್ರೇಷ್ಠ ನಾಯಕನಾಗುತ್ತಾನೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ. ಫುಟ್ಬಾಲ್ ಪ್ರೇಮಿಯಾಗಿದ್ದ ಧೋನಿ ಅಕಸ್ಮಿಕವಾಗಿ ಕ್ರಿಕೆಟ್‍ನತ್ತ ಆಕರ್ಷಿತರಾಗಿದ್ರು. ಶಾಲಾ ಕ್ರಿಕೆಟ್ ತಂಡಕ್ಕೆ ವಿಕೆಟ್ ಕೀಪರ್ ಇರಲಿಲ್ಲ ಅನ್ನೋ ಕಾರಣಕ್ಕೆ ಫುಟ್ಬಾಲ್ ಗೋಲ್ ಕೀಪರ್ ಆಗಿದ್ದ ಧೋನಿ ಕ್ರಿಕೆಟ್ ನಲ್ಲಿ ವಿಕೆಟ್ ಕೀಪರ್ ಅದ್ರು. ನಂತರ ಹಿಂತಿರುಗಿ ನೋಡಲೇ ಇಲ್ಲ. 2004ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಧೋನಿ, ಟೀಮ್ ಇಂಡಿಯಾಗೆ ವಿಕೆಟ್ ಕೀಪರ್ ಕೊರತೆಯನ್ನು ನೀಗಿಸಿದ್ರು. ಹೊಡಿಬಡಿ ಆಟದ ಮೂಲಕವೇ ಗಮನ ಸೆಳೆದ ಧೋನಿ ಟೀಮ್ ಇಂಡಿಯಾದ ಖಾಯಂ ಅಟಗಾರನಾದ್ರು. ಮೊದಲ ನಾಯಕತ್ವದಲ್ಲೇ ಟಿ-ಟ್ವೆಂಟಿ ವಿಶ್ವಕಪ್ ಗೆದ್ದ ಧೋನಿಗೆ ತಾನಾಗಿಯೇ ಏಕದಿನ ಕ್ರಿಕೆಟ್ ಕಪ್ತಾನನಾಗುವ ಯೋಗವೂ ಬಂತು. ಹಾಗೇ ಹಿರಿಯ ಆಟಗಾರರ ಸಲಹೆಯಂತೆ ಟೆಸ್ಟ್ ಕ್ರಿಕೆಟ್ ಗೂ ನಾಯಕನಾದ್ರು. ಅಷ್ಟೇ ಅಲ್ಲ, ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಧೋನಿ ತಂಡವನ್ನು ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ 1 ಪಟ್ಟಕ್ಕೇರಿಸಿದ್ರು.

ಕಳೆದ ಹದಿನಾರು ವರ್ಷಗಳ ಕ್ರಿಕೆಟ್ ಬದುಕಿನಲ್ಲಿ ಧೋನಿ ಹತ್ತು ವರ್ಷ ಟೆಸ್ಟ್ ಕ್ರಿಕೆಟ್ ತಂಡದಲ್ಲಿದ್ದರು. 90 ಟೆಸ್ಟ್ ಪಂದ್ಯಗಳನ್ನು ಆಡಿರುವ ಧೋನಿ, 60 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. 27 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. 15 ಪಂದ್ಯಗಳನ್ನು ಡ್ರಾ ಮಾಡಿಕೊಂಡಿರುವ ಧೋನಿ, 18 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾದ ಶ್ರೇಷ್ಠ ನಾಯಕ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇನ್ನು ವಿದೇಶಿ ನೆಲದಲ್ಲಿ ಧೋನಿ ಸಾಧನೆ ಅಷ್ಟಕ್ಕಷ್ಟೇ. 30 ಪಂದ್ಯಗಳಲ್ಲಿ ಮುನ್ನಡೆಸಿರುವ ಧೋನಿ 6 ಪಂದ್ಯಗಳಲ್ಲಿ ಮಾತ್ರ ಜಯ ಸಾಧಿಸಿದ್ದಾರೆ. 15 ಪಂದ್ಯಗಳಲ್ಲಿ ಸೋಲು, 9 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ. ಒಟ್ಟಾರೆ, 90 ಟೆಸ್ಟ್ ಪಂದ್ಯಗಳನ್ನು ಆಡಿರುವ ಧೋನಿ, 4876 ರನ್ ಪೇರಿಸಿದ್ದಾರೆ. ಇದರಲ್ಲಿ ಆರು ಶತಕ ಹಾಗೂ 33 ಅರ್ಧಶತಕಗಳಿವೆ. 224 ರನ್ ದಾಖಲಿಸಿರುವುದು ಧೋನಿಯ ಗರಿಷ್ಠ ರನ್. ಇನ್ನು ವಿಕೆಟ್ ಕೀಪರ್ ಆಗಿ 38 ಸ್ಟಂಪ್ ಹಾಗೂ 256 ಕ್ಯಾಚ್ಗಳನ್ನು ಪಡೆದಿದ್ದಾರೆ.

ಲೈಫ್ ಸ್ಟೈಲ್ ಮತ್ತು ಬೈಕ್ ಪ್ರೇಮಿ ಮಾಹಿ…!

ಒಟ್ಟಿನಲ್ಲಿ ಮಹೇಂದ್ರ ಸಿಂಗ್ ಧೋನಿಗೆ ಕ್ರಿಕೆಟ್ ಎಲ್ಲವನ್ನು ಕೊಟ್ಟಿದೆ. ಎಲ್ಲವೂ ಬಯಸದೇ ಬಂದ ಭಾಗ್ಯ. ಅದನ್ನೆಲ್ಲಾ ಧೋನಿ ಸಮರ್ಥವಾಗಿ ಸದುಪಯೋಗಪಡಿಸಿಕೊಂಡಿದ್ದಾರೆ. ಯಶಸ್ಸಿನ ಉತ್ತುಗಕ್ಕೆರಿದ ಧೋನಿಗೆ ನೇಮ್, ಫೇಮ್, ದುಡ್ಡು ಎಲ್ಲವೂ ಸಿಕ್ಕಿದೆ. ಲೈಫ್ ಅನ್ನು ಬಿಂದಾಸ್ ಆಗಿ ಎಂಜಾಯ್ ಮಾಡುವ ಧೋನಿಗೆ ಅತೀಯಾದ ಆಸೆ ಇಲ್ಲ. ಈ ನಿಟ್ಟಿನಲ್ಲಿ ಧೋನಿ ಇತರೆ ಕ್ರಿಕೆಟಿಗರಿಗಿಂತ ಭಿನ್ನ , ವಿಭಿನ್ನ . ರಾಂಚಿ ರಾಂಬೋ ಎಂಬ ಅಡ್ಡ ಹೆಸರಿಗೆ ತಕ್ಕಂತೆ ಧೋನಿ ವಿಭಿನ್ನ ಹವ್ಯಾಸವನ್ನ ಹೊಂದಿದ್ದಾರೆ. ಹೌದು, ಧೋನಿಯ ಸ್ಟೈಲ್ಲೇ ಬೇರೆ.. ಲುಕ್ಕೇ ಬೇರೆ… ಎಲ್ಲವೂ ಡಿಫರೆಂಟ್.. ಅದಕ್ಕಾಗಿಯೇ ಎಮ್. ಎಸ್. ಧೋನಿ ಎಲ್ರಿಗೂ ಇಷ್ಟ. ಧೋನಿಗೆ ಬೈಕ್ ಅಂದ್ರೆ ಪಂಚ ಪ್ರಾಣ.. ಹೊಸ ಬೈಕ್ ಗಳ ಮೇಲೆ ಜಾಲಿ ರೈಡ್ ಮಾಡೋದು ಅಂದ್ರೆ ಏನೋ ಒಂಥರಾ ಖುಷಿ. ಹಾಗೇ, ಬೈಕ್ ಗಳ ಸಂಗ್ರಹದಲ್ಲೂ ಮಾಹಿ ಒಂದು ಹೆಜ್ಜೆ ಮುಂದು. ಈಗಾಗಲೇ ಈ ಕೂಲ್ ಕ್ಯಾಪ್ಟನ್ ಮನೆಯಲ್ಲಿ 40 ಕ್ಕೂ ಹೆಚ್ಚು ಬೈಕ್ ಗಳು ಸಾಲಾಗಿ ನಿಂತಿವೆ. ಇದ್ರಲ್ಲಿ ಯಮಹಾ, ಟಿವಿಎಸ್, ಹಾರ್ಲಿ ಡೇವಿಡ್ಸ್ನ್ ಬೈಕ್ಗಳು ಕೂಡ ಸೇರಿಕೊಂಡಿವೆ. ಇದಕ್ಕೆ ಈಗ ಟ್ರ್ಯಾಕ್ಟರ್ ಕೂಡ ಸೇರಿಕೊಂಡಿದೆ. ಬಿಡುವಿನ ವೇಳೆಯಲ್ಲಿ ಬೈಕ್ ಏರಿ ನೂರಾರು ಕಿಲೋ ಮೀಟರ್ ಸವಾರಿ ನಡೆಸುವುದು ಧೋನಿಯ ಹಾಬಿ. ವಿದೇಶಿ ಪ್ರವಾಸದ ವೇಳೆ ಬೈಕ್ಗಳ ಬಿಡಿ ಭಾಗಗಳನ್ನ ಪರ್ಚೆಸ್ ಮಾಡಿ ತನ್ನ ಬೈಕ್ಗಳನ್ನ ಶೃಂಗಾರ ಕೂಡ ಮಾಡ್ತಾರೆ. ಅಷ್ಟೇ ಅಲ್ಲ, ಪಂದ್ಯಗಳಲ್ಲಿ ಬಹುಮಾನವಾಗಿ ಯಾರೇ ಬೈಕ್ ಗೆದ್ರೂ ಅದನ್ನು ಮೊದಲು ಓಡಿಸುವುದು ಧೋನಿಯೇ…
ಇನ್ನು, ಧೋನಿ ಟೀಮ್ ಇಂಡಿಯಾಗೆ ಎಂಟ್ರಿಯಾದಾಗ ಹೆಚ್ಚು ಗಮನ ಸೆಳೆದದ್ದು ತನ್ನ ಉದ್ದನೆಯ ಕೂದಲಿನಿಂದ. ಧೋನಿಯ ಹೇರ್ ಸ್ಟೈಲ್ಗೆ ಯುವತಿಯರು ಕ್ಲೀನ್ ಬೌಲ್ಡಾದ್ರೆ, ಯುವಕರು ಧೋನಿಯ ಹೇರ್ ಸ್ಟೈಲ್ ಅನ್ನೇ ಅನುಕರಣೆ ಮಾಡಿದ್ರು. ಅಷ್ಟೇ ಯಾಕೆ, ಪಾಕ್ನ ಮಾಜಿ ಅಧ್ಯಕ್ಷ ಪರ್ವೇಜ್ ಮುಶ್ರರಫ್ ಕೂಡ ಧೋನಿಯ ಹೇರ್ ಸ್ಟೈಲ್ಗೆ ಕಾಂಪ್ಲಿಮೆಂಟರಿ ನೀಡಿದ್ರು. ಆದ್ರೆ ಧೋನಿಗೆ ಈ ಉದ್ದ ಕೂದಲು ಯಾಕೋ ಬೋರ್ ಹೊಡಿಸಿತ್ತು ಅನ್ಸುತ್ತೆ. ಅದ್ರಲ್ಲೂ ಟ್ವೆಂಟಿ ಟ್ವೆಂಟಿ ವಿಶ್ವಕಪ್ ಗೆದ್ದ ನಂತ್ರ ಧೋನಿ ತನ್ನ ಕೂದಲಿಗೆ ಕತ್ತರಿ ಹಾಕಿದ್ರು. ಟ್ರಿಮ್ ಮಾಡ್ಕೊಂಡ ಧೋನಿ ಮದುವೆಯ ಸಮಯದಲ್ಲೂ ಕೂದಲಿನ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ. ಆದ್ರೂ ಆಗಾಗ ಮಾಹಿ ತನ್ನ ಹೇರ್ ಸ್ಟೈಲ್ ಅನ್ನು ಚೆಂಚ್ ಮಾಡ್ತಾನೇ ಇರ್ತಾರೆ.

ಸೈನಿಕರ ಮೇಲೆ ಅಪಾರ ಗೌರವ..!
ಇನ್ನೊಂದೆಡೆ, ಧೋನಿಗೆ ದೇವ್ರ ಮೇಲೆ ಅಪಾರ ಭಕ್ತಿ. ಹಾಗೇ ದೇವಿಯ ಆರಾಧಕರು ಹೌದು. ಬಿಡುವಿನ ವೇಳೆಯಲ್ಲಿ ದೇವಸ್ಥಾನ, ಮಸೀದಿ, ಚರ್ಚ್‍ಗೆ ಎಲ್ಲಾ ಭೇಟಿ ನೀಡ್ತಾರೆ. ಆಟದಿಂದಲೇ ಜನಪ್ರಿಯತೆಯ ಉತ್ತುಂಗಕ್ಕೇರಿದ ಎಮ್. ಎಸ್.ಧೋನಿ ಜಾಹಿರಾತು ಪ್ರಪಂಚದ ಕಣ್ಮಣಿ. ಪೆಪ್ಸಿ, ಏರ್ ಸೆಲ್, ರಿಲಯಾನ್ಸ್, ಬೂಸ್ಟ್ , ವಿಡಿಯೋಕಾನ್, ಟಿವಿಎಸ್ ಸೇರಿದಂತೆ ಪ್ರತಿಷ್ಠಿತ ಕಂಪೆನಿಗಳಿಗೆ ಈ ಕೂಲ್ ಕ್ಯಾಪ್ಟನ್ ಬ್ರಾಂಡ್ ಅಂಬಾಸಿಡರ್. ಹಾಗೇ ಟಿವಿಎಸ್ ಜಾಹಿರಾತಿನಲ್ಲಿ ಧೋನಿ ಪತ್ನಿ ಸಾಕ್ಷಿ ಜತೆ ಕೂಡ ಕಾಣಿಸಿಕೊಂಡ್ರು. ಹೀಗೆ ಬಿಂದಾಸ್ ಆಗಿರುವ ಧೋನಿ ನಟನೆಯಲ್ಲೂ ಮುಂದಿದ್ದಾರೆ. ಮತ್ತೊಂದೆಡೆ, ಧೋನಿ ಸಾಹಸ ಕ್ರೀಡೆಗಳನ್ನ ಇಷ್ಟಪಡುತ್ತಾರೆ. ಕುದುರೆ ಸವಾರಿ ಮಾಡ್ತಾರೆ. ಮಿಲಿಟರಿ ಕ್ಯಾಂಪ್‍ಗೂ ಭೇಟಿ ನೀಡ್ತಾರೆ. ಸೈನಿಕರನ್ನ ಭೇಟಿ ಮಾಡಿ ಅವ್ರ ಜತೆ ಕಾಲ ಕಳೆಯುತ್ತಾರೆ. ಜತೆಗೆ ತನ್ನ ನೆಚ್ಚಿನ ಅಭಿಮಾನಿಯ ಮನೆಗೆ ಹೋಗಿ ಅಡುಗೆ ಮಾಡಿ, ಗಲ್ಲಿ ಕ್ರಿಕೆಟ್ ಕೂಡ ಆಡ್ತಾರೆ. ಧೋನಿಯ ಲೈಫೇ ಕಲರ್ಫುಲ್.. ಸೆಲೆಬ್ರಿಟಿ ಹಾಗೂ ಟೀಮ್ ಇಂಡಿಯಾದ ನಾಯಕನಾಗಿರುವುದರಿಂದ ಸಹಜವಾಗಿಯೇ ಚಿತ್ರರಂಗದ ನಂಟು ಇದ್ದೇ ಇರುತ್ತೆ. ಇದ್ರಿಂದ ಧೋನಿಯ ಹೆಸ್ರು ಹಲವು ನಟಿಯರ ಜತೆ ಕೇಳಿಬಂತು. ದೀಪಿಕಾ ಪಡುಕೋಣೆ, ಲಕ್ಷ್ಮಿ ರೈ, ಆಸಿನ್ ಮೊದಲಾದವರ ಹೆಸರುಗಳು ರಾಂಚಿ ರಾಂಬೋನ ಹೆಸರಿನ ಮುಂದೆ ಅಂಟಿಕೊಂಡಿದ್ದವು. ಅಷ್ಟರಲ್ಲೇ ಧೋನಿ ಸಾಕ್ಷಿಯ ಕೈ ಹಿಡಿದು ಎಲ್ಲಾ ಗಾಸಿಪ್ ಗಳಿಗೆ ತೆರೆ ಎಳೆದಿದ್ರು.

ಕೂಲ್ ಕ್ಯಾಪ್ಟನ್ ಮಾಹೀ ಬ್ರೈನ್ ಬಗ್ಗೆಯೇ ಸಂಶೋಧನೆ..!
ಅಂದ ಹಾಗೇ, ವಿಶ್ವ ಕ್ರಿಕೆಟ್ ನಲ್ಲಿ ಧೋನಿ ತನ್ನದೇ ಅದ ಚಾರ್ಮ್ ಅನ್ನು ಬೆಳೆಸಿಕೊಂಡಿದ್ದಾರೆ. ಪಂದ್ಯ ಸೋಲಲಿ.. ಗೆಲ್ಲಲಿ… ತಾಳ್ಮೆಯನ್ನ ಕಳೆದುಕೊಳ್ಳುವುದಿಲ್ಲ. ಇದಕ್ಕಾಗಿಯೇ ಕೂಲ್ ಕ್ಯಾಪ್ಟನ್ ಅಂತಲೂ ಬಿಂಬಿತವಾಗಿದ್ದಾರೆ. ಕಠಿಣ ಸಂದರ್ಭದಲ್ಲಿ ದಿಟ್ಟ ನಿರ್ಧಾರವನ್ನ ತೆಗೆದುಕೊಳ್ಳುವ ಧೋನಿ, ಒತ್ತಡಕ್ಕೆಲ್ಲಾ ಮಣಿಯುವುದಿಲ್ಲ. ಅದ್ರಲ್ಲೂ ಎದುರಾಳಿ ತಂಡದ ವೀಕ್ನೆಸ್ ಗಳನ್ನು ಬಲು ಬೇಗನೇ ಅರ್ಥಮಾಡಿಕೊಳ್ಳುವ ಮಾಹಿ, ಗ್ಯಾಂಬಲ್ ಮಾಡ್ಕೊಂಡು ಪಂದ್ಯದ ಗತಿಯನ್ನ ಬದಲಾಯಿಸುವ ಚಾಣಕ್ಯ ಕೂಡ ಹೌದು. ಧೋನಿ ತಂಡವನ್ನ ಮುನ್ನಡೆಸುವ ಪರಿಯೇ ಡಿಫರೆಂಟ್.. ವಿಕೆಟ್ ಕೀಪಿಂಗ್ ಜವಾಬ್ದಾರಿಯ ಜತೆಗೆ ಅಂಗಣದಲ್ಲಿ ಪ್ರಯೋಗ ಕೂಡ ನಡೆಸ್ತಾರೆ. ಇದ್ರಿಂದ ಎದುರಾಳಿ ತಂಡಕ್ಕೆ ಮಾಹಿಯ ಗೇಮ್ ಪ್ಲಾನ್ ಗಳನ್ನು ಅರ್ಥ ಮಾಡ್ಕೊಳ್ಳುವುದು ತುಸು ಕಷ್ಟ. ಹಾಗೇ, ಧೋನಿ ಸಹ ಆಟಗಾರರ ಮೇಲೆ ಅಪಾರ ನಂಬಿಕೆಯನ್ನಿಟ್ಟುಕೊಳ್ಳುತ್ತಾರೆ. ಇದ್ರಿಂದ ಆಟಗಾರರು ಕೂಡ ನಾಯಕನ ನಂಬಿಕೆಯನ್ನ ಹುಸಿಗೊಳಿಸಬಾರದು ಅನ್ನೋ ರೀತಿಯಲ್ಲೇ ಹೋರಾಟ ನಡೆಸ್ತಾರೆ. ಇದುವೇ ಧೋನಿಯ ಗೆಲುವಿನ ಸೂತ್ರ.

28 ವರ್ಷಗಳ ಬಳಿಕ ವಿಶ್ವಕಪ್ ತಂದುಕೊಟ್ಟ ಮಹಾ ನಾಯಕ ಧೋನಿ

ಇನ್ನು, 2011ರ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯವನ್ನಂತೂ ಮರೆಯೋಕೆ ಸಾಧ್ಯವಿಲ್ಲ. ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ನಾಯಕನ ಆಟವನ್ನಾಡಿದ ಧೋನಿಯ ಬ್ಯಾಟಿಂಗ್ ವೈಖರಿಗೆ ಸಲಾಂ ಅನ್ನಲೇಬೇಕು. ಸೋಲಿನ ಆತಂಕಕ್ಕೆ ಸಿಲುಕಿದ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಅಲ್ಲದೆ ಗೆಲುವಿನ ರನ್ ಗಾಗಿ ಸಿಕ್ಸರ್ ಬಾರಿಸಿ ಚೆಂಡನ್ನ ದಿಟ್ಟಿಸಿ ನೋಡುತ್ತಿದ್ದ ಧೋನಿಯ ಆ ಕಣ್ಣುಗಳು… ಬ್ಯಾಟ್ ಅನ್ನು ಗದೆಯಂತೆ ತಿರುಗಿಸಿಕೊಂಡು ಸಂಭ್ರಮಿಸಿದ ರೀತಿ. ಅಬ್ಬಾ…ಎಂಥ ಅದ್ಭುತ ಆಟ… ಎಂಥ ಬ್ಯಾಟಿಂಗ್ ವೈಖರಿ… ನಾಯಕ ಅಂದ್ರೆ ಹಿಂಗಿರಬೇಕು ಅಂತ ಕ್ರಿಕೆಟ್ ಪಂಡಿತರ ಜತೆ ಅಭಿಮಾನಿಗಳು ಉದ್ಗರಿಸಿದ್ರು.

ನಿಜ, ಧೋನಿ ನಾಯಕನಾದ ಮೇಲೆ ತುಂಬಾನೇ ಬದಲಾದ್ರು. ಆಟದಲ್ಲಿ ಮತ್ತು ವ್ಯಕ್ತಿತ್ವದಲ್ಲಿ ಪ್ರಬುದ್ಧತೆ ಸಾಧಿಸಿದ್ರು. ಜತೆಗೆ ಮೈದಾನ ಮತ್ತು ಮೈದಾನದ ಹೊರಗಡೆ ನಾಯಕನ ಘನತೆಯನ್ನ ಕಾಯ್ದುಕೊಂಡ್ರು. ಕಿರಿಯ ಆಟಗಾರರ ಮೇಲಿನ ಪ್ರೀತಿ ಮತ್ತು ಹಿರಿಯ ಆಟಗಾರರಿಗೆ ನೀಡುವ ಗೌರವದಿಂದ ಟೀಮ್ ಇಂಡಿಯಾವನ್ನ ಯಶಸ್ಸಿನ ಉತ್ತುಂಗಕ್ಕೇರಿದ್ರು. ಇನ್ನೊಂದೆಡೆ, ತನ್ನ ಬ್ಯಾಟಿಂಗ್ ನಲ್ಲಿ ಕಲಾತ್ಮಕತೆ ಇಲ್ಲದಿದ್ರೂ ಅಬ್ಬರದ ಬ್ಯಾಟಿಂಗ್ ಮೂಲಕ ಮಿಂಚು ಹರಿಸಿದ್ರು. ಅದ್ರಲ್ಲೂ ಧೋನಿಯ ಹೆಲಿಕಾಪ್ಟರ್ ಶಾಟ್ ಕ್ರಿಕೆಟ್ ಪ್ರಿಯರ ಮನ ಗೆದ್ದಿತ್ತು. ಈ ನಡುವೆ, ಧೋನಿಯ ನಾಯಕತ್ವದ ಬಗ್ಗೆ ಸಂಶೋಧನೆ ಕೂಡ ನಡೆಯಿತ್ತು. ಮುಖ್ಯವಾಗಿ ಧೋನಿಯ ಬ್ರೈನ್ ಹೇಗೆಲ್ಲಾ ವರ್ಕ್ ಆಗುತ್ತೆ ಎಂಬುದರ ಬಗ್ಗೆ ಸಂಶೋಧಕರು ಸಂಶೋಧನೆ ನಡೆಸಲು ಮುಂದಾಗಿದ್ರು. ಅಷ್ಟರ ಮಟ್ಟಿಗೆ ಧೋನಿಯ ಲೀಡರ್ಶಿಪ್ ಕ್ವಾಲಿಟಿ ಫೇಮಸ್ .
ಇನ್ನು 2019ರ ವಿಶ್ವಕಪ್ ಸೆಮಿಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಧೋನಿ ರನೌಟಾದಾಗ ಟೀಮ್ ಇಂಡಿಯಾದ ಫೈನಲ್ ಕನಸು ಕೂಡ ಭಗ್ನಗೊಂಡಿತ್ತು. ಆನಂತರ ಧೋನಿ ಎಲ್ಲೂ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಡಿರಲಿಲ್ಲ. ಕ್ರಿಕೆಟ್ ನಿಂದ ದೂರವೇ ಉಳಿದಿದ್ದ ಧೋನಿ 2020ರ ವಿಶ್ವಕಪ್ ಟೂರ್ನಿಯನ್ನು ಎದುರು ನೋಡುತ್ತಿದ್ದರು. ಆದ್ರೆ ಕೋವಿಡ್ ನಿಂದಾಗಿ ಟಿ-ಟ್ವೆಂಟಿ ವಿಶ್ವಕಪ್ ಮುಂದೂಡಲಾಗಿತ್ತು. ಹೀಗಾಗಿ ಐಪಿಎಲ್ ಟೂರ್ನಿಗೆ ರೆಡಿಯಾಗುತ್ತಿದ್ದರು.

ಹಳೆಯ ಚಿತ್ರದ ಒಂದು ಹಾಡು.. ಮೂರು ನಾಲ್ಕು ಪದಗಳಲ್ಲಿ ವಿದಾಯದ ಸುದ್ದಿ..

ಆಗಸ್ಟ್ 14ರಂದು ಧೋನಿ ಸಿಎಸ್‍ಕೆ ಕ್ಯಾಂಪ್ ಸೇರಿಕೊಂಡಿದ್ದರು. ಆಗಸ್ಟ್ 15ರಂದು ಸಿಎಸ್‍ಕೆ ತಂಡ ತರಬೇತಿ ಶಿಬಿರ ನಡೆಸಿತ್ತು. ಸಂಜೆಯ ತರಬೇತಿ ಮುಗಿಸಿದ್ದ ತಕ್ಷಣವೇ ಧೋನಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳುವ ನಿರ್ಧಾರ ತೆಗೆದುಕೊಂಡ್ರು. ಇನ್ ಸ್ಟಾಗ್ರಾಮ್ ನಲ್ಲಿ ವಿದಾಯದ ಪದಗಳನ್ನು ಬರೆದು ಮುಗಿಸಿದ್ರು. ಇದು ಕೂಡ ಅಚ್ಚರಿಯ ನಿರ್ಧಾರ. ಯಾಕಂದ್ರೆ ಧೋನಿ ಮನಸ್ಸು ಮಾಡಿದ್ರೆ 2021ರ ಟಿ-ಟ್ವೆಂಟಿ ವಿಶ್ವಕಪ್ ಆಡಬಹುದಿತ್ತು. ಆದ್ರೆ ತನ್ನಿಂದ ಯುವ ಆಟಗಾರರಿಗೆ ತೊಂದರೆಯಾಗಬಾರದು ಅನ್ನೋ ನಿರ್ಧಾರದಿಂದಲೇ ಧೋನಿ ತನ್ನ ವರ್ಣ ರಂಜಿತ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ.
350 ಏಕದಿನ ಪಂದ್ಯಗಳನ್ನು ಆಡಿರುವ ಧೋನಿ 10 ಶತಕ ಹಾಗೂ 73 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಒಟ್ಟು 10,773 ರನ್ ಪೇರಿಸಿದ್ದಾರೆ. ಇನ್ನು 98 ಟಿ-ಟ್ವಿಂಟಿ ಪಂದ್ಯಗಳಲ್ಲಿ 1617 ರನ್ ಹಾಗೂ ಎರಡು ಅರ್ಧಶತಕಗಳನ್ನು ದಾಖಲಿಸಿದ್ದಾರೆ.
ಏನೇ ಆದ್ರೂ, ಧೋನಿ ದಿ ಗ್ರೇಟ್ ಲೀಡರ್. ಲೀಡರ್ ಯಾವತ್ತೂ ತಲೆಬಾಗಲ್ಲ. ತಲೆಬಾಗುವುದು ಇಲ್ಲ. ತಾನು ನಡೆದದ್ದೇ ದಾರಿ. ಆದ್ರೆ ದಾರಿ ಸರಿ ಇಲ್ಲ ಅಂದಾಗ ಅಡ್ಡ ದಾರಿ ಹಿಡಿಯುವುದಲ್ಲ. . ದಾರಿ ಸರಿಪಡಿಸಿಕೊಂಡು ಮುನ್ನಡೆಯಬೇಕು. ಅದು ಆಗದಿದ್ರೆ ಬೇರೆಯವರಿಗೆ ನಡೆಯಲು ಅವಕಾಶ ಮಾಡಿಕೊಡಬೇಕು. ತನ್ನ ಕ್ರಿಕೆಟ್ ಬದುಕಿನಲ್ಲಿ ಧೋನಿ ಮಾಡಿದ್ದು ಅದನ್ನೇ.. ಯಾಕಂದ್ರೆ ಅದು ಅದು ಮಹಿ ಸ್ಟೈಲ್ ಕೂಡ ಹೌದು.

ಸನತ್ ರೈ

Tags: #saakshatv.combccicskIndian cricketIPLM.S DhoniMahendra Singh DhoniRanchiSuresh Rainateam india
ShareTweetSendShare
Join us on:

Related Posts

ಶೋಷಿತರೇ ಎಚ್ಚರ, ನಿಮ್ಮಲ್ಲೇ ಬೆಂಕಿ ಹಚ್ಚುವವರಿದ್ದಾರೆ:ರಾಜಕೀಯ ನಿವೃತ್ತಿಯಾದರೂ ಹೋರಾಟ ನಿಲ್ಲದು- ಒಳ ಮೀಸಲಾತಿ ಜಾರಿಗೆ ನಾನು ಬದ್ಧ ಎಂದ ಸಿದ್ದರಾಮಯ್ಯ

ಶೋಷಿತರೇ ಎಚ್ಚರ, ನಿಮ್ಮಲ್ಲೇ ಬೆಂಕಿ ಹಚ್ಚುವವರಿದ್ದಾರೆ:ರಾಜಕೀಯ ನಿವೃತ್ತಿಯಾದರೂ ಹೋರಾಟ ನಿಲ್ಲದು- ಒಳ ಮೀಸಲಾತಿ ಜಾರಿಗೆ ನಾನು ಬದ್ಧ ಎಂದ ಸಿದ್ದರಾಮಯ್ಯ

by Shwetha
August 27, 2026
0

ಬೆಂಗಳೂರು : ಅಧಿಕಾರ ಇರಲಿ, ಬಿಡಲಿ ಶೋಷಿತರ ಮತ್ತು ಅವಕಾಶ ವಂಚಿತರ ಪರವಾದ ನನ್ನ ಧ್ವನಿ ಸದಾ ಮೊಳಗುತ್ತಲೇ ಇರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು...

ವಂದೇ ಮಾತರಂ ಸಂಪೂರ್ಣ ಹಾಡಲ್ಲ ಕೇವಲ ಮೊದಲ ಎರಡು ಚರಣಗಳಿಗಷ್ಟೇ ನಮ್ಮ ಸರ್ಕಾರ ಬದ್ಧ:ಪಕ್ಷದ ಸಿದ್ಧಾಂತವೇ ನಮಗೆ ಪರಮೋಚ್ಚ- ಸಿಎಂ ಡಿ ಕೆ ಶಿವಕುಮಾರ್

ವಂದೇ ಮಾತರಂ ಸಂಪೂರ್ಣ ಹಾಡಲ್ಲ ಕೇವಲ ಮೊದಲ ಎರಡು ಚರಣಗಳಿಗಷ್ಟೇ ನಮ್ಮ ಸರ್ಕಾರ ಬದ್ಧ:ಪಕ್ಷದ ಸಿದ್ಧಾಂತವೇ ನಮಗೆ ಪರಮೋಚ್ಚ- ಸಿಎಂ ಡಿ ಕೆ ಶಿವಕುಮಾರ್

by Shwetha
August 27, 2026
0

ಬೆಂಗಳೂರು: ರಾಷ್ಟ್ರೀಯ ಗೀತೆ ವಂದೇ ಮಾತರಂ ಗಾಯನದ ಕುರಿತು ನಡೆಯುತ್ತಿರುವ ರಾಜಕೀಯ ಜಟಾಪಟಿಯ ನಡುವೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ರಾಜ್ಯ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ....

ಪರಮೇಶ್ವರ್ ಗೆ ಡಿಸಿಎಂ ಪಟ್ಟ ಸಿಕ್ಕಿದ್ದರ ಹಿಂದೆ ನಾನಿದ್ದೆ ಗಾಂಧಿ ಭವನದಲ್ಲಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ

ಪರಮೇಶ್ವರ್ ಗೆ ಡಿಸಿಎಂ ಪಟ್ಟ ಸಿಕ್ಕಿದ್ದರ ಹಿಂದೆ ನಾನಿದ್ದೆ ಗಾಂಧಿ ಭವನದಲ್ಲಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ

by Shwetha
August 27, 2026
0

ಬೆಂಗಳೂರು: ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಒಳ ಮೀಸಲಾತಿ ಕುರಿತ ವಿಚಾರ ಸಂಕಿರಣದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಒಂದು ಹೇಳಿಕೆ ಇದೀಗ ಕರ್ನಾಟಕ ರಾಜಕಾರಣದ...

ಆರೆಸ್ಸೆಸ್ ವಿರುದ್ಧ ಒಂದೂ ಪ್ರಕರಣವಿಲ್ಲ ಎಂದು ಒಪ್ಪಿಕೊಂಡ ಸಚಿವ ಪ್ರಿಯಾಂಕ್ ಖರ್ಗೆ :ಹಗಲಿನಲ್ಲಿ ದ್ವೇಷದ ಮಾತು ಸದನದಲ್ಲಿ ಸತ್ಯದ ಉತ್ತರ ಆರೆಸ್ಸೆಸ್ ವಿಚಾರದಲ್ಲಿ ಕಾಂಗ್ರೆಸ್ ಬಣ್ಣ ಬಯಲು ಮಾಡಿದ್ರಾ ಸುನೀಲ್ ಕುಮಾರ್!?

ಆರೆಸ್ಸೆಸ್ ವಿರುದ್ಧ ಒಂದೂ ಪ್ರಕರಣವಿಲ್ಲ ಎಂದು ಒಪ್ಪಿಕೊಂಡ ಸಚಿವ ಪ್ರಿಯಾಂಕ್ ಖರ್ಗೆ :ಹಗಲಿನಲ್ಲಿ ದ್ವೇಷದ ಮಾತು ಸದನದಲ್ಲಿ ಸತ್ಯದ ಉತ್ತರ ಆರೆಸ್ಸೆಸ್ ವಿಚಾರದಲ್ಲಿ ಕಾಂಗ್ರೆಸ್ ಬಣ್ಣ ಬಯಲು ಮಾಡಿದ್ರಾ ಸುನೀಲ್ ಕುಮಾರ್!?

by Shwetha
August 27, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ ಅಥವಾ ಆರೆಸ್ಸೆಸ್ ವಿರುದ್ಧ ಸದಾ ವಾಗ್ದಾಳಿ ನಡೆಸುವ ಕಾಂಗ್ರೆಸ್ ನಾಯಕರಿಗೆ ಇದೀಗ ಸದನದಲ್ಲೇ ಮುಖಭಂಗವಾಗಿದೆ. ಆರೆಸ್ಸೆಸ್ ಸಂಘಟನೆಯು ಯಾವುದೇ ಗಲಭೆ ಅಥವಾ...

ಕನ್ನಡಿಗರ ದಬ್ಬಾಳಿಕೆ ಸಹಿಸಲ್ಲ ಎಂದು ಗುಡುಗಿದ ಟೈಗರ್ ಆಫ್ ಜಸ್ಟೀಸ್ ಅಧ್ಯಕ್ಷ ಗಡಿ ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸಲು ಬಿಗ್ ಸ್ಕೆಚ್

ಕನ್ನಡಿಗರ ದಬ್ಬಾಳಿಕೆ ಸಹಿಸಲ್ಲ ಎಂದು ಗುಡುಗಿದ ಟೈಗರ್ ಆಫ್ ಜಸ್ಟೀಸ್ ಅಧ್ಯಕ್ಷ ಗಡಿ ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸಲು ಬಿಗ್ ಸ್ಕೆಚ್

by Shwetha
August 27, 2026
0

ಚಾಮರಾಜನಗರ: ಹನೂರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳಿಂದ ನಡೆದ ಮೂವರು ಶಂಕಿತ ಬೇಟೆಗಾರರ ಎನ್‌ಕೌಂಟರ್ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಘಟನೆಯನ್ನು ಮುಂದಿಟ್ಟುಕೊಂಡು ರಾಜ್ಯದ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram