ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಧೋನಿ ನಿವೃತಿ ಬಗ್ಗೆ ಟ್ವಿಟ್

ಭಾರತ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಧೋನಿ ನಿವೃತಿ ಬಗ್ಗೆ ಟ್ವೀಟ್ ಮಾಡಿ ಧೋನಿಯ ಬಗ್ಗೆ ಗುಣಗಾನ ಮಾಡಿದ್ದಾರೆ. ಕೇವಲ ಒಬ್ಬ #MSDhoni ಮಾತ್ರ ಇರುವುದು . ನನ್ನ ವೃತ್ತಿಜೀವನದ ಅತಿದೊಡ್ಡ ಸ್ಫೂರ್ತಿ ಅಂದರೆ ಅದು ನನ್ನ ಸ್ನೇಹಿತ ಮತ್ತು ಹಿರಿಯ ಸಹೋದರನಾಗಿರುವ ಧೋನಿ. ಅವರಿಗೆ ನಾನು ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ನಿಮ್ಮ ಈ ನಿರ್ಧಾರ ಮುಂದೆ ನಿಮ್ಮೊಂದಿಗೆ ನೀಲಿ ಜರ್ಸಿಯಲ್ಲಿ ಆಟವಾಡುವುದನ್ನು ತಪ್ಪಿಸುತ್ತದೆ. ಆದರೆ ನೀವು ಯಾವಾಗಲೂ ನನಗಾಗಿ ಇರುತ್ತೀರಿ ಮತ್ತು ನನಗೆ ಮಾರ್ಗದರ್ಶನ ಮಾಡುತ್ತೀರಿ ಎಂದು ನನಗೆ ಖಾತ್ರಿಯಿದೆ, ಎಂದು ಹೇಳಿಕೊಂಡಿದ್ದಾರೆ.
ಭಾರತ ತಂಡದಲ್ಲಿ ಪ್ರತಿಯೊಬ್ಬ ಆಟಗಾರನಿಗೂ ಸದಾ ಮಾರ್ಗದರ್ಶನ ನೀಡುತಿದ್ದ, ಸದಾ ಶಾಂತ ಸ್ವರೂಪಿಯಾದ ಧೋನಿ ಇನ್ನು ಮೈದಾನದಲ್ಲಿ ಸಿಗುವುದಿಲ್ಲ . ಆದರೆ ಐಪಿಎಲ್ ನಲ್ಲಿ ಆಡಲಿದ್ದಾರೆ ಅನ್ನುವುದು ಸಮಾಧಾನದ ವಿಚಾರ








