ಮಾಹಿ.. ಇಡೀ ವಿಶ್ವ ಕ್ರಿಕೆಟ್ ಲೋಕವೇ ನಿಮ್ಮ ಹೆಲಿಕಾಪ್ಟರ್ ಶಾಟ್ ಅನ್ನು ಮಿಸ್ ಮಾಡಲಿದೆ – ಅಮಿತ್ ಶಾ
ಹೊಸದಿಲ್ಲಿ, ಅಗಸ್ಟ್ 16: 39 ವರ್ಷದ ಕ್ರಿಕೆಟಿಗ, ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿ ಮಹೇಂದ್ರ ಸಿಂಗ್ ಧೋನಿ ನಿಮ್ಮ ಕೊಡುಗೆ ಅತ್ಯದ್ಭುತ ಎಂದು ಶ್ಲಾಘಿಸಿದ್ದಾರೆ.

ಭಾರತೀಯ ಕ್ರಿಕೆಟ್ಗೆ ಸರಿಸಾಟಿಯಿಲ್ಲದ ಕೊಡುಗೆ ನೀಡಿರುವುದಕ್ಕೆ ಎಂ.ಎಸ್. ಧೋನಿ ಅವರಿಗೆ ಧನ್ಯವಾದ ಅರ್ಪಿಸುತ್ತಿರುವ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳಲ್ಲಿ ನಾನು ಕೂಡ ಒಬ್ಬ . ಅವರ ಶಾಂತ ಸ್ವಭಾವದಿಂದ ಭಾರತ ತಂಡಕ್ಕೆ ಬಹಳಷ್ಟು ಸಹಾಯವಾಗಿದೆ. ಅವರ ನಾಯಕತ್ವದಲ್ಲಿ ಭಾರತವು ಎರಡು ಬಾರಿ ವಿಶ್ವ ಚಾಂಪಿಯನ್ಗಳಾಗಿ ಕಿರೀಟವನ್ನು ಧರಿಸಿದರು ಎಂದು ಶಾ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಎಂ.ಎಸ್.ಧೋನಿ ತಮ್ಮ ವಿಶಿಷ್ಟ ಶೈಲಿಯ ಕ್ರಿಕೆಟ್ ಮೂಲಕ ಲಕ್ಷಾಂತರ ಜನರನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಭಾರತೀಯ ಕ್ರಿಕೆಟ್ ಅನ್ನು ಬಲಪಡಿಸುವ ನಿಟ್ಟಿನಲ್ಲಿ ಸಹಕರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಅವರ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು. ಮಾಹಿ..ಇನ್ನು ಮುಂದೆ ನಿಮ್ಮ ಹೆಲಿಕಾಪ್ಟರ್ ಶಾಟ್ ಅನ್ನು ಇಡೀ ವಿಶ್ವ ಕ್ರಿಕೆಟ್ ಲೋಕವೇ ಮಿಸ್ ಮಾಡಿಕೊಳ್ಳಲಿದೆ ಎಂದು ಇತ್ತೀಚೆಗಷ್ಟೇ ಕೋವಿಡ್-19 ನಿಂದ ಚೇತರಿಸಿಕೊಂಡಿರುವ ಗೃಹಸಚಿವರು ಟ್ವೀಟ್ನಲ್ಲಿ ಪೋಸ್ಟ್ ಮಾಡಿದ್ದಾರೆ.








