ಮಣಿಪುರ ಅಗಸ್ಟ್ 31ರ ವರೆಗೆ ಸಂಪೂರ್ಣ ಲಾಕ್ ಡೌನ್ ವಿಸ್ತರಣೆ
ಇಂಪಾಲ್, ಅಗಸ್ಟ್ 16: ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಹಿನ್ನೆಲೆಯಲ್ಲಿ ಮಣಿಪುರ ಸರ್ಕಾರ ಆಗಸ್ಟ್ 31ರ ವರೆಗೆ ಸಂಪೂರ್ಣ ಲಾಕ್ ಡೌನ್ ವಿಸ್ತರಿಸಿದೆ ಎಂದು ಮಣಿಪುರ ಸರ್ಕಾರದ ಆದೇಶ ತಿಳಿಸಿದೆ.
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ, ಆಗಸ್ಟ್ 31 ರವರೆಗೆ ಇಡೀ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಅನ್ನು ವಿಸ್ತರಿಸಲು ಆದೇಶಿಸುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.

ರಾಜ್ಯದಲ್ಲಿ ಹೊರರಾಜ್ಯದ ಪ್ರಯಾಣದ ಇತಿಹಾಸವಿಲ್ಲದ ಜನರಲ್ಲಿ ಕೋವಿಡ್-19 ನ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಲಾಕ್ಡೌನ್ ಮತ್ತು ಅನುಮತಿಸಬಹುದಾದ ಚಟುವಟಿಕೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಮುಖ್ಯಮಂತ್ರಿ ಬೀರೆನ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಮಂತ್ರಿಮಂಡಲ ಸಭೆಯಲ್ಲಿ ಪರಿಗಣಿಸಲಾಗಿದೆ.
ರಾಜ್ಯದಲ್ಲಿ ಒಟ್ಟು 21 ಹೊಸ ಕೋವಿಡ್-19 ಪ್ರಕರಣಗಳೊಂದಿಗೆ, ಮಣಿಪುರದ ಕೋವಿಡ್-19 ಪ್ರಕರಣವು 4,189 ಸಕಾರಾತ್ಮಕ ಪ್ರಕರಣಗಳನ್ನು ತಲುಪಿದೆ, ಇದರಲ್ಲಿ 1,825 ಸಕ್ರಿಯ ಪ್ರಕರಣಗಳಿದ್ದು, 2,360 ಗುಣಮುಖರಾಗಿದ್ದಾರೆ. ಸಾಂಕ್ರಾಮಿಕ ವೈರಸ್‌ನಿಂದ ಇಲ್ಲಿಯವರೆಗೆ 13 ಜೀವಗಳು ಬಲಿಯಾಗಿವೆ.








