ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಎರಡನೇ ವರ್ಷದ ಪುಣ್ಯಸ್ಮರಣೆ – ಗೌರವ ಸಲ್ಲಿಸಿದ ನಾಯಕರು
ಹೊಸದಿಲ್ಲಿ, ಅಗಸ್ಟ್ 16: ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಎರಡನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಇಂದು ಗೌರವ ಸಲ್ಲಿಸಿದರು.
ದೆಹಲಿಯಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮೃತಿ ಸ್ಥಳ ‘ ಸದೇವ್ ಅಟಲ್’ ಗೆ ಆಗಮಿಸಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಾಜಪೇಯಿ ಅವರ ಪುತ್ರಿ ನಮಿತಾ ಕೌಲ್ ಭಟ್ಟಾಚಾರ್ಯ, ಮೊಮ್ಮಗಳು ನಿಹಾರಿಕಾ ಸೇರಿದಂತೆ ಗಣ್ಯರು ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರವನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಇಲ್ಲಿನ ಭಾರತೀಯ ಸಾಂಸ್ಕೃತಿಕ ಸಂಬಂಧ ಮಂಡಳಿಯಲ್ಲಿ ಉದ್ಘಾಟಿಸಿದರು. ವರ್ಚುವಲ್ ಉದ್ಘಾಟನೆಯಲ್ಲಿ ಮಾತನಾಡಿದ ಕೋವಿಂದ್, ವಾಜಪೇಯಿ ಅವರ ನಾಯಕತ್ವದಲ್ಲಿ ಭಾರತದ ಸ್ಥಾನಮಾನವು ಬೆಳೆದಿದೆ ಎಂದು ಹೇಳಿದರು.
#WATCH Delhi: President Ram Nath Kovind, Vice President M Venkaiah Naidu & Prime Minister Narendra Modi pay tribute to former PM #AtalBihariVajpayee, on his death anniversary today at 'Sadaiv Atal' – the memorial of Atal Bihari Vajpayee. pic.twitter.com/pIaYOZFIMZ
— ANI (@ANI) August 16, 2020
ನನ್ನ ಪ್ರೀತಿಯ ಅಟಲ್ ಜಿ ಅವರಿಗೆ ಅವರ ಪುಣ್ಯ ತಿಥಿಯಂದು ಗೌರವ ಸಲ್ಲಿಸುತ್ತಿದ್ದೇನೆ. ನಮ್ಮ ರಾಷ್ಟ್ರ ಪ್ರಗತಿಯತ್ತ ಸಾಗಲು ಅವರ ಅತ್ಯುತ್ತಮ ಸೇವೆ ಮತ್ತು ಪ್ರಯತ್ನಗಳನ್ನು ಭಾರತ ಯಾವಾಗಲೂ ನೆನಪಿಸಿಕೊಳ್ಳುತ್ತದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ವಾಜಪೇಯಿಗೆ ಗೌರವ ಸಲ್ಲಿಸಿದ್ದಾರೆ. ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಜಿ ಅವರು ದೇಶಭಕ್ತಿ ಮತ್ತು ಭಾರತೀಯ ಸಂಸ್ಕೃತಿಯ ಧ್ವನಿಯಾಗಿದ್ದರು. ಅವರು ಸಮರ್ಪಿತ ರಾಜಕಾರಣಿ ಮತ್ತು ನುರಿತ ಸಂಘಟಕರಾಗಿದ್ದರು, ಅವರು ಬಿಜೆಪಿಗೆ ಅಡಿಪಾಯ ಹಾಕಿದ ನಂತರ ಅದರ ವಿಸ್ತರಣೆಯಲ್ಲಿ ಪ್ರಮುಖ ಪಾತ್ರವಹಿಸಿದರು ಮತ್ತು ಲಕ್ಷಾಂತರ ಕಾರ್ಯಕರ್ತರನ್ನು ದೇಶದ ಸೇವೆ ಮಾಡಲು ಪ್ರೇರೇಪಿಸಿದರು ಎಂದು ಶಾ ಹೇಳಿದರು.