ಕೊರೊನಾಕ್ಕೆ ಭಯಬೇಡ ಆತ್ಮವಿಶ್ವಾಸ ಕಾಳಜಿ ಸಾಕು- ಸಚಿವ ಬಿ.ಸಿ.ಪಾಟೀಲ್
ಕೊರೊನಾಕ್ಕೆ ಭಯಬೇಡ ಆತ್ಮವಿಶ್ವಾಸ ಕಾಳಜಿ ಸಾಕು ಎಂದು ಜಾಗೃತಿ ಮೂಡಿಸುತ್ತಿರುವ ಕೃಷಿ ಸಚಿವರೂ ಆಗಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಇಂದು ಮತಕ್ಷೇತ್ರ ಹಿರೇಕೆರೂರಿನ ಜನತೆಗೆ ಉಚಿತವಾಗಿ 2.5ಲಕ್ಷ ಮುಖಗವಸು(ಮಾಸ್ಕ್ ) ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ತಾವು ಮತ್ತುಕುಟುಂಬದ ಸದಸ್ಯರು ಇತ್ತೀಚೆಗೆ ಕೋವಿಡ್-19ಸೋಂಕಿಗೊಳಪಟ್ಟಿದ್ದೇವಾದರೂ ವೈದ್ಯರ ಸಲಹೆ ಮೇರೆಗೆ ಹೋಮ್ ಐಸೋಲೇಷನ್‌ನಲ್ಲಿದ್ದು ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿದ್ದೇವೆ.ಕೊರೊನಾ ಬಗ್ಗೆ ಯಾವುದೇ ಭಯಬೇಡ.ಸಾಮಾಜಿಕ ಅಂತರ ಕಾಯ್ದುಕೊಂಡು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಈ ನಿಟ್ಟಿನಲ್ಲಿ ಜನರಿಗೆ ಅನುಕೂಲವಾಗಲೆಂದು ಮಾಸ್ಕ್‌ಗಳನ್ನು ವಿತರಿಸಲಾಗಿದೆ. ಎಂದರು.
ಕ್ಷೇತ್ರದ ಎಲ್ಲಾ ವರ್ಗ,ಸಮುದಾಯದವರು ಮಾಸ್ಕ್ ಧರಿಸಲಾಗಲೀ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಾಗಲೀ ಹಿಂದೇಟು ಹಾಕಬಾರದು.ಆರೋಗ್ಯದ ಬಗ್ಗೆ ನಿರ್ಲಕ್ಷ್ಯತೋರಬಾರದು.ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೇ ಹೊರತು ಮಾನವೀಯತೆ ಸಹಕಾರ ಭಾವ ಮರೆಯುವುದಲ್ಲ ಎಂದು ಕರೆ ನೀಡಿದರು.