ವಾಜಪೇಯಿ 2ನೇ ವರ್ಷದ ಪುಣ್ಯ ಸ್ಮರಣೆ- ಭಾವಪೂರ್ಣ ನಮನ ಸಲ್ಲಿಸಿದ ಸಚಿವ ಬಿ.ಸಿ. ಪಾಟೀಲ್
ಸೋಲೊಪ್ಪಲಾರೆ
ಜಗಳ ಕಾಯಲಾರೆ
ಸಮಯದ ಹಣೆಯ ಮೇಲೆ
ಬರೆದು ಅಳಿಸುವೆನು
ಹೊಸ ಹಾಡು ಹಾಡುವೆನು
ಹೊಸ ಹಾಡು ಹಾಡುವೆನು
ಸೋಲಲ್ಲಾಗಲೀ
ಗೆಲುವಿನಲ್ಲಾಗಲೀ
ಕಿಂಚಿತ್ತೂ ಹೆದರೆನು ನಾನು
ಕರ್ತವ್ಯ ಪಥದಲ್ಲಿ ಏನೇ ಸಿಗಲಿ
ಇದೂ ಸರಿಯೇ
ಅದೂ ಸರಿಯೇ”
…ಅಟಲ್ ಬಿಹಾರಿ ವಾಜಪೇಯಿ
ತನ್ನ ಬದುಕಿನುದ್ದಕ್ಕೂ ರಾಜಕಾರಣದ ಜೊತೆಜೊತೆಗೆ ಸಾಹಿತ್ಯವನ್ನು ತನೊಳಗಿರಿಸಿಕೊಂಡು ಶ್ರೇಷ್ಠತೆಯನ್ನು ಮೆರೆದು ಚೇತನವಾದ ಅಮರ ಜ್ಯೋತಿ ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ.
ರಾಜಕಾರಣಿ ಶ್ರೇಷ್ಠ ಸಂಸದೀಯ ಪಟು, ವಾಗ್ಮಿ,ಕವಿ, ನೇತಾರ ಹಾಗೂ ಜನನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಹಲವು ಪ್ರಥಮಗಳಿಗೆ ನಾಯಕರಾದವರು. ಅಜಾತಶತೃವಾಗಿ ಹಲವು ಪ್ರಥಮಗಳಿಗೆ ಕಾರಣರಾದ ಮುತ್ಸದ್ದಿ. ವಾಜಪೇಯಿಯೊಳಗೆ ಮಿಡಿಯುತ್ತಿದ್ದ ಕವಿಮನಸನ್ನು ಅವರ ಹಾರ್ ನಹೀ ಮಾನೂಂಗಾ(ಸೋಲೊಪ್ಪಲಾರೆ) ಕವಿತೆ ಎಳೆಎಳೆಯಾಗಿ ಬಿಚ್ಚಿಡುತ್ತದೆ.ಅಷ್ಟೇ ಅಲ್ಲ ಇದು ಅವರ ನೆಚ್ಚಿನ ಕವಿತೆಯೂ ಹೌದು.
ಇಂದು ರಾಜಕಾರಣದ ಜೊತೆಗೆ ಕವಿ ಭಾವವನ್ನೂ ತೆರೆದಿಟ್ಟ ವಾಜಪೇಯಿಯವರ ದ್ವಿತೀಯ ಪುಣ್ಯಸ್ಮರಣೆ.”ಮೇರಿ ಇಕ್ಯಾವನ್ ಕವಿತಾಯೇಂ” ಮೂಲಕ ಭಾವಲಹರಿಯನ್ನು ಅಭಿವ್ಯಕ್ತಪಡಿಸಿದ ಹಿರಿಯ ದಿವ್ಯಚೇತನರಿಗೊಂದು ಇದೋ ಭಾವಪೂರ್ಣ ಗೌರವ ನಮನ.
ಬಿ.ಸಿ.ಪಾಟೀಲ್
ಕೃಷಿ ಸಚಿವರು








