ಬಿಸಿಯೂಟಕ್ಕೆ ಕಳಪೆ ಮಟ್ಟದ ತೊಗರಿಬೇಳೆ : ಕ್ರಮಕ್ಕೆ ಜಯಕರ್ನಾಟಕ ಸಂಘಟನೆ ಆಗ್ರಹ
ಕಾರವಾರ : ಏಪ್ರಿಲ್, ಮೇ, ಜೂನ್ ಜುಲೈ ಮತ್ತು ಆಗಸ್ಟ್ 2020 ಮಾಹೆಗೆ ಮಧ್ಯಾಹ್ನದ ಬಿಸಿಯೂಟದ ಯೋಜನೆಯಡಿ ಕಳಪೆ ಮಟ್ಟದ ತೊಗರಿಬೇಳೆಯನ್ನು ಉತ್ತಮ ಗುಣಮಟ್ಟದ ಬೇಳೆಯಂದು ವರದಿ ನೀಡುತ್ತಿರುವ ಎನ್.ಸಿ.ಎಮ್.ಎಲ್ ಲ್ಯಾಬ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಜಯಕರ್ನಾಟಕ ಸಂಘಟನೆ ಆಗ್ರಹಿಸಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಮುಖು ಕಾರ್ಯನಿರ್ವಾಹಕ ಅಧಿಕಾರಿಗೆ ಜಯಕರ್ನಾಟಕ ಸಂಘಟನೆಯ ಸದಸ್ಯರು ದೂರು ನೀಡಿದ್ದಾರೆ. ಎನ್ ಸಿ ಎಮ್ ಎಲ್ ಕಂಪನಿಯೂ ಕಳಪೆ ಗುಣಮಟ್ಟದ ಬೇಳೆಯನ್ನು ಉತ್ತಮ ಗುಣಮಟ್ಟದ ಬೇಳೆ ಎಂದು ವರದಿ ನೀಡುತ್ತಿದ್ದು, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಉಲ್ಲಂಘಿಸಿದೆ ಎಂದು ಜಯಕರ್ನಾಟಕ ಸಂಘಟನೆ ಆರೋಪಿಸಿದೆ.
ಅಲ್ಲದೆ ಬೇಳೆ ಸರಬರಾಜು ಮಾಡುತ್ತಿರುವ ದಾಸ್ತಾನು ಮುಟ್ಟುಗೋಲು ಹಾಕಿಕೊಂಡು, ಭ್ರಷ್ಟಚಾರದಲ್ಲಿ ತೊಡಗಿರುವ ಅಧಿಕಾರಿಗಳ, ಗುತ್ತಿಗೆದಾರರ, ಎನ್ ಸಿಎಂಎಲ್ ಲ್ಯಾಬ್ ಕಂಪನಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಜಯ ಕರ್ನಾಟಕ ಸಂಘಟನೆ ಒತ್ತಾಯಿಸಿದೆ. ಒಂದು ವೇಳೆ ಭ್ರಷ್ಟರ ಹಾಗೂ ಎನ್ ಸಿಎಂಎಲ್ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೇ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಸಂಘಟನೆ ಅಧ್ಯಕ್ಷರಾದ ಮನಮೋಹನ್ ಉಳ್ವೇಕರ್ ತಿಳಿಸಿದ್ದಾರೆ.









