ಮುಂದಿನ ತಿಂಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೊ ಅಬೆ ನಡುವಿನ ಭಾರತ-ಜಪಾನ್ ಶೃಂಗಸಭೆಯು ನಡೆಯಲಿದ್ದು, ಪ್ರಮುಖ ಮಿಲಿಟರಿ ಲಾಜಿಸ್ಟಿಕ್ ಒಪ್ಪಂದ, ಸ್ವಾಧೀನ ಮತ್ತು ಕ್ರಾಸ್ ಸರ್ವಿಂಗ್ ಒಪ್ಪಂದಗಳಿಗೆ ಉಭಯ ನಾಯಕರು ಸಹಿ ಮಾಡಲಿದ್ದಾರೆ ಎನ್ನಲಾಗಿದೆ.
ಇನ್ನೂ ವರ್ಚುವಲ್ ಶೃಂಗಸಭೆಯ ಅಂತಿಮ ದಿನಾಂಕಗಳು ಇನ್ನೂ ಚರ್ಚೆಯಲ್ಲಿದ್ದು, ಸೆಪ್ಟೆಂಬರ್‌ನಲ್ಲಿ ಕೆಲವು ದಿನಾಂಕಗಳನ್ನು ನಿಗದಿಪಡಿಸಲಾಗಿದೆ ಎನ್ನಲಾಗಿದೆ. ಈ ಹಿಂದೆ ಅಸ್ಸಾಂನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಿಂದಾಗಿ ಆರಂಭದಲ್ಲಿ ಡಿಸೆಂಬರ್ 15-17ರಂದು ಗುವಾಹಟಿಯಲ್ಲಿ ನಡೆಯಲು ಉದ್ದೇಶಿಸಿದ್ದ ಶೃಂಗಸಭೆಯನ್ನು ಮುಂದೂಡಲಾಗಿತ್ತು.







