ಬಹುಭಾಷಾ ನಟಿ ತ್ರಿಷಾ ಕೃಷ್ಣನ್ ಅವರು ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ತ್ರಿಷಾ ಮದುವೆ ವಿಚಾರವಾಗಿ ಚರ್ಚೆಗಳು ವ್ಯಾಪಾಕವಾಗಿ ಹರಿದಾಡಿತ್ತು. ಇದೀಗ ತ್ರಿಷಾ ಸುದ್ದಿಯಲ್ಲಿರುವುದು ಬೇರೆಯ ವಿಚಾರಕ್ಕೆ. ಹೌದು ತ್ರಿಷಾ ಕೃಷ್ಣನ್ ಅವರು ತಮ್ಮ ಇನ್ಸಾಗ್ರಾಂ ಖಾತೆಯಲ್ಲಿರುವ ಎಲ್ಲಾ ಪೋಸ್ಟ್ ಗಳನ್ನು ಡಿಲೀಟ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಇತ್ತೀಚೆಗೆ ಸೋಷಿಯಲ್ ಮೀಡಿಯದಿಂದ ಕೊಂಚ ದೂರವೇ ಉಳಿದಿದ್ದ ನಟಿ ಇದೀಗ ಧಿಢೀರನೆ ಎಲ್ಲಾ ಪೋಸ್ಟ್ ಗಳನ್ನು ಡಿಲೀಟ್ ಮಾಡಿಕೊಂಡಿರುವ ವಿಚಾರ ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ. ತಮ್ಮ ಇನ್ಸ್ಟಾಗ್ರಾಂನಲ್ಲಿ ಕೇವಲ 7 ಫೋಟೋಗಳನ್ನು ಮಾತ್ರ ಉಳಿಸಿ ಉಳಿದೆಲ್ಲಾ ಪೋಸ್ಟ್ ಗಳನ್ನು ಏಕಾಏಕಿ ಡಿಲೀಟ್ ಮಾಡಿದ್ದಾರೆ. ಆದರೆ ತ್ರಿಷಾ ಈ ರೀತಿ ಮಾಡಲು ಕಾರಣವೇನೆಂದು ಸದ್ಯಕ್ಕೆ ದೊಡ್ಡ ಪ್ರಶ್ನೆಯಾಗಿದ್ದು, ಸಾಕಷ್ಟು ಊಹಾಪೋಹಗಳಿಗೂ ಎಡೆಮಾಡಿಕೊಟ್ಟಿದೆ.









