ಮಡಿಕೇರಿ : ಜಿಲ್ಲೆಯಾದ್ಯಂತ ಮತ್ತೆ ವರುಣನ ಆರ್ಭಟ ಶುರುವಾಗಿದೆ. ಭಾಗಮಂಡಲ, ತಲಕಾವೇರಿ, ನಾಪೋಕ್ಲು, ಮಡಿಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ. ಭಾರಿ ವರ್ಷಧಾರೆಯಿಂದಾಗಿ ಜಿಲ್ಲೆಯ ಜನರು ಆತಂಕಕ್ಕೆ ಒಳಲಾಗಿದ್ದಾರೆ. ಮತ್ತೆ ಭೂ ಕುಸಿತ ಸಂಭವಿಸಿದರೆ ಏನು ಗತಿ ಎಂಬ ಜನ ಹೆದರಿಕೆ ಎಲ್ಲರಲ್ಲು ಮನೆ ಮಾಡಿದೆ.
ಜಿಲ್ಲೆಯಲ್ಲಿ ಮಳೆ ಮತ್ತೆ ಬಿರುಸುಗೊಂಡಿರುವುದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿದ್ದು ಪರದಾಡುವಂತಾಗಿದೆ. ಇಷ್ಟು ದಿನ ಧಾರಕಾರವಾಗಿ ಸುರಿದ ಮಳೆಗೆ ಅನಾಹುತಗಳು ಸಂಭವಿಸಿದ್ದು, ಈ ಪ್ರಕರಣಗಳು ಮಾಸುವ ಮುನ್ನವೇ ಮತ್ತೆ ವರಣನ ಅಬ್ಬರ ಜೋರಾಗಿದೆ.









