ಹೈದ್ರಾಬಾದ್ ನಲ್ಲಿ ಭರದಿಂದ ಸಾಗುತ್ತಿರುವ ಪ್ಯಾಂಟಮ್ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ದಿನಕಳೆದಂತೆಲ್ಲಾ ಕುತೂಹಲ ಹೆಚಚ್ಚಾಗುತ್ತಲೇ ಇದೆ. ಚಿತ್ರದ ನಿರ್ದೇಶಕರಾದ ಅನೂಪ್ ಭಂಡಾರಿ ಅವರು ಚಿತ್ರದ ಒಂದೊಂದೇ ಪಾತ್ರವನ್ನು ರಿವೀಲ್ ಮಾಡುತ್ತಿದ್ದು, ಚಿತ್ರದ ಕ್ರೇಜ್ ಹೆಚ್ಚಿಸುತ್ತಲೇ ಇದ್ದಾರೆ.
ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಅವರ ಪಾತ್ರ , ಅವರ ಲುಕ್ ಚಿತ್ರದಲ್ಲಿ ಹೇಗಿರಲಿದೆ ಎಂಬ ಸಣ್ಣ ಝಳಕ್ ರಿಲೀಸ್ ಮಾಡಿದ್ದ ಚಿತ್ರತಂಡ ಇದೀಗ ಸಿನೆಮಾದ ಪ್ರಮುಖ ಪಾತ್ರಧಾರಿ ಅಪರ್ಣ ಬಲ್ಲಾಳ್ ಅಂದರೆ ಪನ್ನಾ ಅವರ ಪಾತ್ರವನ್ನೂ ಅನಾವರಣಗೊಳಿಸಿದೆ.
ಕಿರುತೆರೆ ನಟಿ ನೀತಾ ಅಶೋಕ್ ಅವರು ಫ್ಯಾಂಟಮ್ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಒಂದಾದ ಅಪರ್ಣ ಬಲ್ಲಾಳ್ ಪಾತ್ರದಲ್ಲಿ ಕಾಣಿಸಿಕೊಳ್ಳಳ್ಳುತ್ತಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಬಿಗ್ ಸ್ಕ್ರೀಗ್ ಎಂಟ್ರಿ ಕೊಟ್ಟಿದ್ದಾರೆ. ವಿಶೇಷ ಅಂದರೆ ಚಿತ್ರದಲ್ಲಿ ಅಪರ್ಣ ಅಂದ್ರೆ ನೀತಾ ಅವರು ನೀರೂಪ್ ಭಂಡಾರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ.
ಕಿರುತೆರೆಯಲ್ಲಿ ಯಶೋಧೆ, ನಾ ನಿನ್ನ ಬಿಡಲಾರೆ ಮತ್ತು ನೀಲಾಂಬರಿ ಧಾರಾವಾಹಿ ಮೂಲಕ ಮನೆಮಾತಾಗಿ ಪ್ರೇಕ್ಷಕರ ಮನಗೆದ್ದಿದ್ದರು. ಇದೀಗ ಬೆಳ್ಳೆ ತೆರೆಗೆ ಮೊದಲ ಬಾರಿಗೆ ಎಂಟ್ರಿಕೊಟ್ಟಿದ್ದಾರೆ.