ಸಿಪಿಎಲ್ 2020- ಬಾರ್ಬೊಡಸ್ ಟ್ರಿಡೆಂಟ್ ಮತ್ತು ಸೇಂಟ್ ಲೂಸಿಯಾ ಝೌಕ್ಸ್ ಕಾದಾಟ
2020ರ ಕೆರೆಬಿಯನ್ ಲೀಗ್ ಕ್ರಿಕೆಟ್ ಟೂರ್ನಿಯ ಐದನೇ ಪಂದ್ಯದಲ್ಲಿ ಸೇಂಟ್ ಲೂಸಿಯಾ ಝೌಕ್ಸ್ ಮತ್ತು ಬಾರ್ಬೋಡಸ್ ಟ್ರಿಡೆಂಟ್ಸ್ ತಂಡಗಳು ಕಾದಾಟ ನಡೆಸಲಿವೆ.
ಹಾಲಿ ಚಾಂಪಿಯನ್ ಆಗಿರುವ ಬಾರ್ಬೊಡಸ್ ಟ್ರಿಡೆಂಟ್ಸ್ ತಂಡ ಈಗಾಗಲೇ ತನ್ನ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಸೇಂಟ್ ಕಿಟ್ಸ್ ನೆವಿಸ್ ಪೆಟ್ರಿಯೋಟ್ಸ್ ತಂಡವನ್ನು ಸೋಲಿಸಿರುವ ಬಾರ್ಬೊಡಸ್ ಟ್ರಿಡೆಂಟ್ಸ್ ತಂಡ ಈಗ ಮತ್ತೊಂದು ಗೆಲುವನ್ನು ಎದುರು ನೋಡುತ್ತಿದೆ.
ಹಾಗೇ ಸೇಂಟ್ ಲೂಸಿಯಾ ಝೌಕ್ಸ್ ತಂಡ ತನ್ನ ಮೊದಲ ಪಂದ್ಯದಲ್ಲಿ ಜಮೈಕಾ ತಲಾವಾಹ್ಸ್ ತಂಡದ ವಿರುದ್ದ ಸೋತಿತ್ತು. ಹೀಗಾಗಿ ಗೆಲುವಿನ ಲಯ ಕಂಡುಕೊಳ್ಳಲು ಸೇಂಟ್ ಲೂಸಿಯಾ ಝೌಕ್ಸ್ ತಂಡ ಕಾದಾಟ ನಡೆಸಲಿದೆ.
ಬಾರ್ಬೋಡಸ್ ಟ್ರಿಡೆಂಟ್ಸ್ ಸಂಭವನೀಯ ತಂಡ
ಶಾಯ್ ಹೋಪ್, ಜಾನ್ಸನ್ ಚಾಲ್ರ್ಸ್, ಕೋರಿ ಆಂಡರ್ಸನ್, ಕೈಲ್ ಮೆಯೇರ್ಸ್, ಜೋನಾಥನ್ ಕಾರ್ಟರ್, ಜೇಸನ್ ಹೋಲ್ಡರ್ (ನಾಯಕ), ರಶೀದ್ ಖಾನ್, ಆಶ್ಲೇ ನರ್ಸ್, ಮಿಟ್ಚೆಲ್ ಸ್ಯಾಂಟ್ನರ್, ರೇಮನ್ ರೇಫೇರ್, ಹೇಡನ್ ವಾಲ್ಸ್ಶ್ ಜ್ಯೂನಿಯರ್.
ಸೇಂಟ್ ಲೂಸಿಯಾ ಝೌಕ್ಸ್ ಸಂಭವನೀಯ ತಂಡ
ರಖೀಮ್ ಕಾರ್ನ್‍ವಾಲ್, ಆಂಡ್ರೆ ಫ್ಲೇಚರ್, ಮಾರ್ಕ್ ಡೇಯಲ್, ನಜೀಬುಲ್ ಝದ್ರಾನ್, ರೋಸ್ಟನ್ ಚೇಸ್, ಮಹಮ್ಮದ್ ನಭೀ, ಡರೆನ್ ಸಮಿ (ನಾಯಕ), ಸ್ಕಾಟ್ ಕುಗೇಲ್, ಚೇಮರ್ ಹೋಲ್ಡರ್, ಕೆಸ್ರಿಕ್ ವಿಲಿಯಮ್ಸ್, ಜಹೀರ್ ಖಾನ್, ಒಬೆಡ್ ಮೆಕ್ ಕಾಯ್.