ಭಾರತದಲ್ಲಿ ಇಂದು 69,652 ಹೊಸ ಕೊರೋನವೈರಸ್ ಪ್ರಕರಣ
ಹೊಸದಿಲ್ಲಿ, ಅಗಸ್ಟ್ 20: ಭಾರತದಲ್ಲಿ ಗುರುವಾರ ಒಂದೇ ದಿನ 69,652 ಹೊಸ ಕೊರೋನವೈರಸ್ ಪ್ರಕರಣಗಳನ್ನು ದಾಖಲಾಗಿದೆ, ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ 28,36,925 ಕ್ಕೆ ತಲುಪಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ, ಕೋವಿಡ್ -19 ಕಾರಣದಿಂದಾಗಿ ಒಟ್ಟು 977 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಮೂಲಕ ಒಟ್ಟು ಸಾವಿನ ಪ್ರಮಾಣವನ್ನು 53,866 ಪ್ರಕರಣಗಳಿಗೆ ಏರಿಕೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ದೇಶಾದ್ಯಂತ ಒಟ್ಟು ಸಕ್ರಿಯ ಪ್ರಕರಣಗಳು 6,86,395. ಆಸ್ಪತ್ರೆಗಳು ಮತ್ತು ಗುಣಮುಖರಾಗಿ ಬಿಡುಗಡೆಯಾದ ಒಟ್ಟು ಜನರ ಸಂಖ್ಯೆ 20,96,664. ಕಳೆದ 24 ಗಂಟೆಗಳಲ್ಲಿ 58,794 ಜನರು ಚೇತರಿಸಿಕೊಂಡಿದ್ದಾರೆ ಮತ್ತು ಚೇತರಿಕೆ ದರವು 73.91 ಪ್ರತಿಶತದಷ್ಟಿದೆ.
ಆಗಸ್ಟ್ 19 ರವರೆಗೆ ಒಟ್ಟು 3,26,61,252 ಮಾದರಿಗಳನ್ನು ಪರೀಕ್ಷಿಸಲಾಗಿದೆ ಮತ್ತು ಆಗಸ್ಟ್ 19 ರಂದು 9,18,470 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಅತಿ ಹೆಚ್ಚು ಕೊರೋನಾ ಸೋಂಕಿತರಿರುವ ರಾಜ್ಯಗಳಲ್ಲಿ ಒಂದಾದ ಆಂಧ್ರಪ್ರದೇಶದಲ್ಲಿ ಇದುವರೆಗೆ 86,725 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ 8,061 ಮಾರಕ ವೈರಸ್‌ನಿಂದ ಚೇತರಿಸಿಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ 86 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದು, ಈ ಮೂಲಕ ರಾಜ್ಯದಲ್ಲಿ ಇದುವರೆಗೆ 2,906 ಸಾವುಗಳು ದಾಖಲಾಗಿವೆ.
ಕರ್ನಾಟಕದಲ್ಲಿ ಒಟ್ಟು 81,113 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ 7,201 ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ 126 ಸಾವುಗಳು ವರದಿಯಾಗಿದ್ದು, ಈ ಮೂಲಕ ಕೋವಿಡ್ -19 ಕಾರಣದಿಂದ ರಾಜ್ಯದಲ್ಲಿ ಒಟ್ಟು 4,327 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಮಹಾರಾಷ್ಟ್ರ ರಾಜ್ಯದಲ್ಲಿ 1,60,728 ಸಕ್ರಿಯ ಪ್ರಕರಣಗಳಿವೆ. ಕಳೆದ 4 ಗಂಟೆಗಳಲ್ಲಿ ಒಟ್ಟು 4,46,881 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ 346 ಸಾವುಗಳು ವರದಿಯಾಗಿದ್ದು, ರಾಜ್ಯದಲ್ಲಿ ಕೋವಿಡ್ -19 ಗೆ ಒಟ್ಟು 21,033 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 11,137 ಸಕ್ರಿಯ ಕೋವಿಡ್ -19 ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ 1,3,767 ಜನರು ಚೇತರಿಸಿಕೊಂಡಿದ್ದಾರೆ. ಕಳೆದ 24 ಗಂಟೆಗಳಲ್ಲಿ ಒಂಬತ್ತು ಜನರು ವೈರಸ್‌ಗೆ ತುತ್ತಾಗಿದ್ದು ರಾಜಧಾನಿಯು ಈವರೆಗೆ 4,235 ಸಾವುಗಳನ್ನು ವರದಿ ಮಾಡಿದೆ








