ಪಶ್ಚಿಮ ಬಂಗಾಳ – ಲಾಕ್‌ಡೌನ್ ಉಲ್ಲಂಘನೆ ಆರೋಪದಲ್ಲಿ 2542 ಜನರ ಬಂಧನ
ಕೊಲ್ಕತ್ತಾ, ಅಗಸ್ಟ್ 21: ಕೊರೋನವೈರಸ್ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಗಟ್ಟುವ ಪ್ರಯತ್ನದಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಿದೆ. ಲಾಕ್‌ಡೌನ್ ಶುಕ್ರವಾರವೂ ಜಾರಿಯಲ್ಲಿರುತ್ತದೆ.
ಲಾಕ್‌ಡೌನ್ ಮಾರ್ಗಸೂಚಿಗಳ ಉಲ್ಲಂಘನೆ ಮತ್ತು ಸುರಕ್ಷತಾ ಮುನ್ನೆಚ್ಚರಿಕೆ ಆರೋಪದ ಮೇಲೆ ಕೋಲ್ಕತ್ತಾದಲ್ಲಿ 378 ಮಂದಿ ಸೇರಿದಂತೆ ರಾಜ್ಯದಾದ್ಯಂತ ಒಟ್ಟು 2542 ಜನರನ್ನು ಬಂಧಿಸಲಾಗಿದೆ.

ಕೋವಿಡ್-19 ಸೋಂಕನ್ನು ತಡೆಗಟ್ಟಲು ನಿಟ್ಟಿನಲ್ಲಿ ಜುಲೈ 23 ರಿಂದ ಪ್ರತಿ ವಾರ ಲಾಕ್ ಡೌನ್ ಜಾರಿಗೆ ತರುವ ರಾಜ್ಯ ಸರ್ಕಾರದ ಯೋಜನೆಯ ಭಾಗವಾಗಿ ಗುರುವಾರ ಸಂಪೂರ್ಣ ಲಾಕ್‌ಡೌನ್ ಆಗಿದೆ
ಎಲ್ಲಾ ಸಾರ್ವಜನಿಕ ಸಾರಿಗೆ, ಸರ್ಕಾರಿ ಮತ್ತು ಖಾಸಗಿ ಕಚೇರಿಗಳು, ಬ್ಯಾಂಕುಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳು, ಅಗತ್ಯ ಸೇವೆಗಳೊಂದಿಗೆ ವ್ಯವಹರಿಸುವವರನ್ನು ಹೊರತುಪಡಿಸಿ, ಉಳಿದೆಲ್ಲಾ ವ್ಯಾಪಾರ ವಹಿವಾಟುಗಳು ಮುಚ್ಚಿದ್ದವು.

ಈ ನಿಟ್ಟಿನಲ್ಲಿ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಲಾಕ್‌ಡೌನ್ ಕಾರಣ ದೂರದ ಪ್ರಯಾಣದ ರೈಲುಗಳನ್ನು ಸಹ ಮರು ನಿಗದಿಪಡಿಸಲಾಗಿದೆ.
ಔಷಧಿ ಅಂಗಡಿಗಳು ಮತ್ತು ಆರೋಗ್ಯ ಸಂಸ್ಥೆಗಳಂತಹ ಅಗತ್ಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದ್ದು,ಲಾಕ್ ಡೌನ್ ದಿನಗಳಲ್ಲಿ ಪೆಟ್ರೋಲ್ ಪಂಪ್‌ಗಳನ್ನು ತೆರೆದಿರಲು ಸಹ ಅನುಮತಿಸಲಾಗಿದೆ.








