ADVERTISEMENT
Wednesday, October 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ನವೀನ ಕೃಷಿ ತಂತ್ರಜ್ಞಾನ ರೈತರ ಸಮಸ್ಯೆಗಳಿಗೆ ಪರಿಹಾರ : ಬಿ.ಸಿ.ಪಾಟೀಲ್

admin by admin
August 21, 2020
in Newsbeat, Samagra karnataka, ರಾಜ್ಯ
BC Patil
Share on FacebookShare on TwitterShare on WhatsappShare on Telegram

ಬೆಂಗಳೂರು : ನವೀನ ಕೃಷಿ ತಂತ್ರಜ್ಞಾನ ರೈತರ ಸಮಸ್ಯೆಗಳನ್ನು ಪರಿಹರಿಸಬಲ್ಲದು ಹಾಗೂ ತಂತ್ರಜ್ಞಾನ ಕೃಷಿ ಕ್ಷೇತ್ರದಲ್ಲಿ ಯುವ ಸಮುದಾಯಕ್ಕೆ ಅವಕಾಶವನ್ನು ಸೃಷ್ಟಿಸಬಲ್ಲದು ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ವಿಕಾಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ “ಕೃಷಿ ನವೋದ್ಯಮ” (ಅಗ್ರಿ ಸ್ಟಾರ್ಟಪ್) ಸಮ್ಮೇಳನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದ ಬಿ.ಸಿ.ಪಾಟೀಲ್, ಪ್ರಧಾನಿ ನರೇಂದ್ರ ಮೋದಿ ಅವರು 2014 ರಿಂದ ಕೇಂದ್ರ ಸರ್ಕಾರವನ್ನು ಮುನ್ನಡೆಸುತ್ತಿದ್ದು, ಮೋದಿಯವರಿಂದಾಗಿ ದೇಶದಲ್ಲಿ ಸ್ಟಾರ್ಟಪ್ ಗಳ ಯುಗ ಆರಂಭವಾಯಿತು. 2018 ರ ಹೊತ್ತಿಗೆ ದೇಶದಲ್ಲಿ 50 ಸಾವಿರ ನವೋದ್ಯಮಗಳು, ಹಾಗೂ ಬಳಿಕ 9,300 ಸ್ಟಾರ್ಟಪ್ ಗಳು ಪ್ರಾರಂಭವಾದವು. ಇವುಗಳ ಪೈಕಿ 474 ಕೃಷಿ ಉದ್ಯಮಗಳು ಆರಂಭವಾಗಿವೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕೃಷಿ ಕ್ಷೇತ್ರಕ್ಕೆ ನವಚೈತನ್ಯವನ್ನು ಒದಗಿಸಲು ಕೃಷಿ ಸ್ಟಾರ್ಟಪ್ ಗಳನ್ನು ಆರಂಭಿಸಿ ರೈತರು ಹಾಗೂ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ವೇದಿಕೆ ಸೃಷ್ಟಿಸಲಾಗಿದೆ ಎಂದರು.

Related posts

ದೀದಿ ಅಂಗಳದಿಂದ ಹೊರಬಂದಿದ್ದೇ ತಡ ಪಠಾಣ್ ಪಾಲಿಗೆ ಅದೃಷ್ಟ: ಯೂಸುಫ್ ಪಠಾಣ್ ಗೆ ಬಿಜೆಪಿ ಸರ್ಕಾರದಿಂದ ಕೋಟಿ ಕೋಟಿ ಮೌಲ್ಯದ ಭೂಮಿ ಗಿಫ್ಟ್

ದೀದಿ ಅಂಗಳದಿಂದ ಹೊರಬಂದಿದ್ದೇ ತಡ ಪಠಾಣ್ ಪಾಲಿಗೆ ಅದೃಷ್ಟ: ಯೂಸುಫ್ ಪಠಾಣ್ ಗೆ ಬಿಜೆಪಿ ಸರ್ಕಾರದಿಂದ ಕೋಟಿ ಕೋಟಿ ಮೌಲ್ಯದ ಭೂಮಿ ಗಿಫ್ಟ್

October 21, 2026
ಕಾಂಗ್ರೆಸ್ ಅಂಗಳಕ್ಕೆ ಕೇಸರಿ ಕಲಿ ರಘುಪತಿ ಭಟ್?ಗುರು ಶಿಷ್ಯರ ಹಣಾಹಣಿಗೆ ಅಣಿಯಾಗುತ್ತಿದೆಯೇ ಉಡುಪಿ ಅಖಾಡ: ಕಮಲದ ಭದ್ರಕೋಟೆ ಭೇದಿಸಲು ಡಿ ಕೆ ಶಿವಕುಮಾರ್ ಮಾಸ್ಟರ್ ಪ್ಲಾನ್

ಕಾಂಗ್ರೆಸ್ ಅಂಗಳಕ್ಕೆ ಕೇಸರಿ ಕಲಿ ರಘುಪತಿ ಭಟ್?ಗುರು ಶಿಷ್ಯರ ಹಣಾಹಣಿಗೆ ಅಣಿಯಾಗುತ್ತಿದೆಯೇ ಉಡುಪಿ ಅಖಾಡ: ಕಮಲದ ಭದ್ರಕೋಟೆ ಭೇದಿಸಲು ಡಿ ಕೆ ಶಿವಕುಮಾರ್ ಮಾಸ್ಟರ್ ಪ್ಲಾನ್

October 21, 2026

ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ 4 ಸಾವಿರ ಸ್ಟಾರ್ಟಪ್ ಗಳನ್ನು ಆರಂಭಿಸಲಾಗುತ್ತಿದೆ. ದೇಶದ ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ಆರಂಭಿಕ ನೀತಿಗಳನ್ನು ಹೊರತಂದಿದೆ. ಇದರಿಂದಾಗಿ ವಾರ್ಷಿಕವಾಗಿ 4,000 ನವೋದ್ಯಮ ಸೃಷ್ಟಿಸಲು ಅನುಕೂಲವಾಗಿದೆ. ಸ್ಟಾರ್ಟಪ್ ಗಳು ಯುವಕರಿಗೆ 1.7 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಿದೆ. ಭಾರತದಲ್ಲಿ ಕೃಷಿ ನವೋದ್ಯಮ ಪ್ರಾರಂಭದ ಹಂತದಲ್ಲಿಯೇ ಆಕರ್ಷಿತವಾಗಿರುವುದು ಹೆಮ್ಮೆಯ ವಿಚಾರ. ಅಂಕಿಅಂಶಗಳ ಪ್ರಕಾರ ಪ್ರತಿದಿನ 2 ರಿಂದ 3 ಸ್ಟಾರ್ಟ್ಅಪ್ಗಳು ಭಾರತದಲ್ಲಿ ಸ್ಥಾಪನೆಯಾಗುತ್ತಿವೆ.ಅಕ್ಸೆಂಚರ್ ಕಂಪನಿಯು ಮಾಡಿದ ಸಮೀಕ್ಷೆಯ ಅಂದಾಜಿನ ಪ್ರಕಾರ, ನಮ್ಮ ದೇಶದಲ್ಲಿ ಅಗ್ರಿ ಸ್ಟಾರ್ಟ್ಅಪ್‌ಗಳಿಂದ 4.5 ಬಿಲಿಯನ್ ಡಾಲರ್ ಮಾರುಕಟ್ಟೆಯ ಸೃಷ್ಟಿ ಆಗಲಿದೆ ಎಂದು ಅಂದಾಜಿಸಲಾಗಿದೆ ಎಂದರು.

ಸ್ಟಾರ್ಟಪ್ ವ್ಯವಸ್ಥೆಗಳನ್ನು ಹೊಂದಿರುವ ವಿಶ್ವದ 20 ಅಗ್ರ ದೇಶಗಳಲ್ಲಿ ಬೆಂಗಳೂರು 15 ನೇ ಸ್ಥಾನವನ್ನು ಪಡೆದುಕೊಂಡಿದೆ. ಅಲ್ಲದೇ ಏಷ್ಯಾ ಖಂಡದಲ್ಲಿ ಸಿಂಗಾಪೂರ್ ಬಳಿಕ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವೆಂದು ಸಹ ಬೆಂಗಳೂರು ಗುರುತಿಸಲ್ಪಟ್ಟಿದೆ. ಕರ್ನಾಟಕ ರಾಜ್ಯ ಜೈವಿಕ ಹಾಗೂ ಸಿರಿಧಾನ್ಯಗಳ ಹಬ್ ಎಂದು ಕರೆಯಲ್ಪಟ್ಟಿದೆ. ಮಧ್ಯಾಹ್ನದ ಬಿಸಿಯೂಟದಲ್ಲಿ ಸಿರಿಧಾನ್ಯವನ್ನು ಪರಿಚಯಿಸಲು ಸರ್ಕಾರ ಚಿಂತನೆ ನಡೆಸಿದೆ. ಇದರಿಂದಾಗಿ ಕೃಷಿಕರಿಗೆ ಇನ್ನಷ್ಟು ಅನುಕೂಲವಾಗಲಿದೆ. ರಾಜ್ಯದಲ್ಲಿ ಜೀವರ್ಗಿ, ಹಿರಿಯೂರು, ಮಾಲೂರು ಹಾಗೂ ಬಾಗಲಕೋಟೆಯಲ್ಲಿ ಈಗಾಗಲೇ ಮೆಗಾಫುಡ್ ಪಾರ್ಕ್ ಗಳಿದ್ದು, ಕೇಂದ್ರ ಸರ್ಕಾರದಡಿ ಕೆ.ಆರ್.ಪೇಟೆ ಹಾಗೂ ತುಮಕೂರಿನಲ್ಲಿಯೂ ಮೆಗಾಫುಡ್ ಪಾರ್ಕ್ ಆರಂಭಿಸಲಾಗಿದೆ. ಆ ಮೂಲಕ ಕೃಷಿ ಉತ್ಪಾದನಾ, ಆಹಾರ ಉತ್ಪಾದನಾ ಕ್ಷೇತ್ರಗಳಿಗೆ ರಾಜ್ಯದಲ್ಲಿ ಆದ್ಯತೆ ಕಲ್ಪಿಸಲಾಗಿದೆ. ಆತ್ಮ ನಿರ್ಭರ್ ಯೋಜನೆಯಡಿ ಆಹಾರ ಉತ್ಪಾದನಾ ಕೈಗಾರಿಕೆಗಳಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ವೆಬಿನಾರ್ ನಲ್ಲಿ ಸಚಿವರು ಮಾಹಿತಿ ಹಂಚಿಕೊಂಡರು.

ಕೃಷಿ ನವೋದ್ಯಮದಲ್ಲಿ ಕೃಷಿ ಉತ್ಪಾದನ ಉದ್ಯಮಿಗಳು ದೇಶಾದ್ಯಂತ ಸಕ್ರಿಯವಾಗಿ ಭಾಗವಹಿಸಿರುವುದು ಖುಷಿ ತಂದಿದೆ. ಕೊರೊನಾ ವೈರಸ್‌ನಿಂದಾಗಿ ಬಿಕ್ಕಟ್ಟಿನ ಅವಧಿಯಲ್ಲಿ ರೈತರು ಬೆಳೆದ ತರಕಾರಿ ಹಣ್ಣು ಸೇರಿದಂತೆ ಕೃಷಿ ಫಸಲುಗಳು ನಾಶವಾಗದಂತೆ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕೋಲ್ಡ್ ಸ್ಟೋರೇಜ್ ಗಳನ್ನು ಆರಂಭಿಸಲಾಯಿತು.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬೆಂಬಲ ಸಹಕಾರ ಸೂಚನೆಯಡಿ ಕೃಷಿಕ್ಷೇತ್ರದಲ್ಲಿ ರೈತರಿಗೆ ಇನ್ನಷ್ಟು ಅನುಕೂಲ ಕಲ್ಪಿಸುವ ಹೊಸಹೊಸ ಯೋಜನೆಗಳನ್ನು ಜಾರಿಗೊಳಿಸಲಾಗುವುದು.ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಜ್‌ಕುಮಾರ್ ಕತ್ರಿ ಅವರ ಮೇಲ್ವಿಚಾರಣೆಯಲ್ಲಿ ಕೃಷಿ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿ ವರ್ಗಗಳು ಉದ್ಯಮಿಗಳಿಗಾಗಿ ಕೃಷಿ ನವೋದ್ಯಮ ವೇದಿಕೆ ಆಯೋಜಿಸಿರುವುದು ಸಂತಸ ಹಾಗೂ ಹೆಮ್ಮೆಯ ವಿಚಾರ ಎಂದರು.

Tags: #Saaksha TVAgricultural TechnologyB.C.Patelbangalorekarnataka
ShareTweetSendShare
Join us on:

Related Posts

ದೀದಿ ಅಂಗಳದಿಂದ ಹೊರಬಂದಿದ್ದೇ ತಡ ಪಠಾಣ್ ಪಾಲಿಗೆ ಅದೃಷ್ಟ: ಯೂಸುಫ್ ಪಠಾಣ್ ಗೆ ಬಿಜೆಪಿ ಸರ್ಕಾರದಿಂದ ಕೋಟಿ ಕೋಟಿ ಮೌಲ್ಯದ ಭೂಮಿ ಗಿಫ್ಟ್

ದೀದಿ ಅಂಗಳದಿಂದ ಹೊರಬಂದಿದ್ದೇ ತಡ ಪಠಾಣ್ ಪಾಲಿಗೆ ಅದೃಷ್ಟ: ಯೂಸುಫ್ ಪಠಾಣ್ ಗೆ ಬಿಜೆಪಿ ಸರ್ಕಾರದಿಂದ ಕೋಟಿ ಕೋಟಿ ಮೌಲ್ಯದ ಭೂಮಿ ಗಿಫ್ಟ್

by Shwetha
October 21, 2026
0

ವಡೋದರ: ಭಾರತೀಯ ಕ್ರಿಕೆಟ್ ನ ದೈತ್ಯ ಆಟಗಾರ ಹಾಗೂ ಇತ್ತೀಚಿನವರೆಗೂ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಾಳೆಯದಲ್ಲಿ ಗುರುತಿಸಿಕೊಂಡಿದ್ದ ಯೂಸುಫ್ ಪಠಾಣ್ ಅವರ ಬದುಕಿನಲ್ಲಿ ದೊಡ್ಡ...

ಕಾಂಗ್ರೆಸ್ ಅಂಗಳಕ್ಕೆ ಕೇಸರಿ ಕಲಿ ರಘುಪತಿ ಭಟ್?ಗುರು ಶಿಷ್ಯರ ಹಣಾಹಣಿಗೆ ಅಣಿಯಾಗುತ್ತಿದೆಯೇ ಉಡುಪಿ ಅಖಾಡ: ಕಮಲದ ಭದ್ರಕೋಟೆ ಭೇದಿಸಲು ಡಿ ಕೆ ಶಿವಕುಮಾರ್ ಮಾಸ್ಟರ್ ಪ್ಲಾನ್

ಕಾಂಗ್ರೆಸ್ ಅಂಗಳಕ್ಕೆ ಕೇಸರಿ ಕಲಿ ರಘುಪತಿ ಭಟ್?ಗುರು ಶಿಷ್ಯರ ಹಣಾಹಣಿಗೆ ಅಣಿಯಾಗುತ್ತಿದೆಯೇ ಉಡುಪಿ ಅಖಾಡ: ಕಮಲದ ಭದ್ರಕೋಟೆ ಭೇದಿಸಲು ಡಿ ಕೆ ಶಿವಕುಮಾರ್ ಮಾಸ್ಟರ್ ಪ್ಲಾನ್

by Shwetha
October 21, 2026
0

ಉಡುಪಿ: ಕರ್ನಾಟಕದ ಕರಾವಳಿ ಭಾಗದಲ್ಲಿ ಬಿಜೆಪಿಯ ಭದ್ರಕೋಟೆ ಎಂದೇ ಕರೆಯಲ್ಪಡುವ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಈಗ ರಾಜಕೀಯ ಕಂಪನ ಶುರುವಾಗಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಇನ್ನು ಸಾಕಷ್ಟು...

ಕಾಲಜ್ಞಾನಿಯ ದಸರಾ ಭವಿಷ್ಯ: ಕರ್ನಾಟಕ ರಾಜಕೀಯದ ದಿಕ್ಸೂಚಿ ಬದಲಾಗಲಿದೆಯೇ? ಕೋಡಿಮಠ ಶ್ರೀಗಳ ಸ್ಫೋಟಕ ನುಡಿ

ಕಾಲಜ್ಞಾನಿಯ ದಸರಾ ಭವಿಷ್ಯ: ಕರ್ನಾಟಕ ರಾಜಕೀಯದ ದಿಕ್ಸೂಚಿ ಬದಲಾಗಲಿದೆಯೇ? ಕೋಡಿಮಠ ಶ್ರೀಗಳ ಸ್ಫೋಟಕ ನುಡಿ

by Shwetha
October 21, 2026
0

ಧಾರವಾಡ: ದಸರಾ ಸಮಯದಲ್ಲಿ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ನುಡಿದಿರುವ ಭವಿಷ್ಯ ಈಗ ರಾಜ್ಯ ರಾಜಕೀಯ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ....

ಡಿಕೆಶಿ ಆಪ್ತೆ ಲಕ್ಷ್ಮಿ ಸೇರ್ಪಡೆಗೆ ಸಿದ್ದರಾಮಯ್ಯ ಬಣದ ತೀವ್ರ ಪ್ರತಿರೋಧ: ಸಂಪುಟ ವಿಸ್ತರಣೆ ಕಸರತ್ತು ಈಗ ಹೈಕಮಾಂಡ್ ಅಂಗಳಕ್ಕೆ

ಡಿಕೆಶಿ ಆಪ್ತೆ ಲಕ್ಷ್ಮಿ ಸೇರ್ಪಡೆಗೆ ಸಿದ್ದರಾಮಯ್ಯ ಬಣದ ತೀವ್ರ ಪ್ರತಿರೋಧ: ಸಂಪುಟ ವಿಸ್ತರಣೆ ಕಸರತ್ತು ಈಗ ಹೈಕಮಾಂಡ್ ಅಂಗಳಕ್ಕೆ

by Shwetha
October 21, 2026
0

ಬೆಂಗಳೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯ ಪ್ರಕ್ರಿಯೆ ಈಗ ಅಕ್ಷರಶಃ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಣಗಳ ನಡುವಿನ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಖಾಲಿ...

ಬಿವೈ ವಿಜಯೇಂದ್ರ ಮತ್ತು ಯತ್ನಾಳ್ ನಡುವಿನ ರಹಸ್ಯ ಭೇಟಿ: ಹೊಸ ರಾಜಕೀಯ ಮನ್ವಂತರದ ಮುನ್ನುಡಿಯೇ? ಕಾದು ನೋಡೋಣ ಎನ್ನುವ ಮೂಲಕ ಕುತೂಹಲ ಹೆಚ್ಚಿಸಿದ ವಿಜಯೇಂದ್ರ

ಬಿವೈ ವಿಜಯೇಂದ್ರ ಮತ್ತು ಯತ್ನಾಳ್ ನಡುವಿನ ರಹಸ್ಯ ಭೇಟಿ: ಹೊಸ ರಾಜಕೀಯ ಮನ್ವಂತರದ ಮುನ್ನುಡಿಯೇ? ಕಾದು ನೋಡೋಣ ಎನ್ನುವ ಮೂಲಕ ಕುತೂಹಲ ಹೆಚ್ಚಿಸಿದ ವಿಜಯೇಂದ್ರ

by Shwetha
October 21, 2026
0

ಬೆಂಗಳೂರು: ರಾಜ್ಯ ಬಿಜೆಪಿಯ ಇಬ್ಬರು ಧ್ರುವಗಳಂತಿದ್ದ ಬಿವೈ ವಿಜಯೇಂದ್ರ ಮತ್ತು ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಅನಿರೀಕ್ಷಿತ ಭೇಟಿ ರಾಜ್ಯ ರಾಜಕೀಯದಲ್ಲಿ ಸೃಷ್ಟಿಸಿರುವ ಕಂಪನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram