ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಮತ್ತೆ ಫೋನ್ ಟ್ಯಾಪಿಂಗ್ ಸದ್ದು ಮಾಡುತ್ತಿದೆ. ನನ್ನ ಫೋನ್ ಟ್ಯಾಪಿಂಗ್ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಆರೋಪಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಫೋನ್ ಟ್ಯಾಪಿಂಗ್ ಆಗಿದೆ. ಇಲ್ಲಿಯವರೆಗೆ ಚೆನ್ನಾಗಿತ್ತು, ಇಂದು ಬೆಳಗ್ಗೆಯಿಂದ ಫೋನ್ ಕರೆಗಳು ಬರುತ್ತಿಲ್ಲ. ಇದರ ಬಗ್ಗೆ ದೂರು ಕೊಡುತ್ತೇನೆ ಎಂದು ತಿಳಿಸಿದ್ದಾರೆ.
ಬೆಳಿಗ್ಗೆಯಿಂದ ನಮ್ಮ ಸುದರ್ಶನ್ ನನಗೆ 25 ಬಾರಿ ಕಾಲ್ ಮಾಡಿದ್ದಾರೆ. ಆದರೆ ಒಮ್ಮೆಯೂ ನನಗೆ ಕಾಲ್ ಬಂದಿಲ್ಲ. ಪಾಪ ಏನು ಬೇಕೋ ಅವರು ಮಾಡಿಕೊಳ್ಳಲಿ. ಆದರೆ ನನ್ನ ಫೋನ್ ಟ್ಯಾಪಿಂಗ್ ಆಗುತ್ತಿರುವುದು ನಿಜ. ಹಿಂದೆಯೂ ಆಗುತ್ತಿತ್ತು,ಈಗ ಮತ್ತೆ ಆಗುತ್ತಿದೆ ಎಂದು ಟ್ರಬಲ್ ದೂರಿದ್ದಾರೆ. 








