ಬೆಂಗಳೂರು : ಇಂದು ಟಾಲಿವುಡ್ ನ ದಿಗ್ಗಜ ಮೆಗಾಸ್ಟಾರ್ ಚಿರಂಜೀವಿ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ನಟ ಕಿಚ್ಚ ಸುದೀಪ್ ಟ್ವಿಟ್ಟರ್ ನಲ್ಲಿ ಶುಭ ಕೋರಿದ್ದಾರೆ.
ಹುಟ್ಟುಹಬ್ಬದ ವಿಶೇಷವಾಗಿ ಚಿರಂಜೀವಿ ಅವರ ಕಾಮನ್ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಈ ಟೀಸರ್ ಶೇರ್ ಮಾಡಿರುವ ಸುದೀಪ್, ‘ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು’. ‘ನೀವು ಸದಾ ಆರೋಗ್ಯದಿಂದ ಹಾಗೂ ಸಂತೋಷದಿಂದ ಇರಲಿ ಎಂದು ಬಯಸುತ್ತೇನೆ” ಎಂದು ಚಿರಂಜೀವಿ ಅವರಿಗೆ ಶುಭ ಕೋರಿದ್ದಾರೆ.
ನಟಿ ಸುಮಲತಾ ಟ್ವೀಟ್ ಮಾಡಿ, ಅದ್ಭುತ ಪ್ರದರ್ಶನಕಾರ, ಅದ್ಭುತ ಮೆಗಾ ಸ್ಟಾರ್ಡಮ್, ಸರಳ ವ್ಯಕ್ತಿತ್ವ, ಉತ್ತಮ ಕುಟುಂಬ ವ್ಯಕ್ತಿ, ಅದ್ಭುತ ಸ್ನೇಹಿತ ಮತ್ತು ಸಹೋದ್ಯೋಗಿ, ನೀವೊಬ್ಬ ಪರಿಪೂರ್ಣ ವ್ಯಕ್ತಿ ಎಂದು ಚಿರಂಜೀವಿಯ ಬಗ್ಗೆ ಬರೆದುಕೊಂಡಿದ್ದಾರೆ.









