ಕೊರೋನಾ ಭೀತಿಯ ನಡುವೆ ಪ್ರಯಾಣಿಕರ ಸುರಕ್ಷತೆಗಾಗಿ KSRTC ಅನೇಕ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ. ಇದಕ್ಕಾಗಿ ಬಸ್ ಗಳ ಸೀಟಗಳ ವಿನ್ಯಾನಸದಲ್ಲೇ ಬದಲಾವಣೆ ತರಲು ಹೊರಟಿದೆ ಕೆ ಎಸ್ ಆರ್ ಟಿ ಸಿ ನಿಗಮ.
ಪ್ರಯಾಣಿಕರನ್ನು ಸೆಳೆಯುವ ಹೊಸ ತಂತ್ರಕ್ಕೆ ಕೈಹಾಕಿರುವ ನಿಗಮ ಆಸನ ವ್ಯವಸ್ಥೆಯಲ್ಲಿ ಪುನರ್ ವಿನ್ಯಾಸಗೊಳಿಸಿ ಪ್ರಯಾಣಿಕರ ಸುರಕ್ಷೆತೆಗೆ ಆದ್ಯತೆ ನಿಡಿದೆ. ಹೌದು ಈಗಾಗಲೇ ಪ್ರಾಯೋಗಿಕವಾಗಿ ಬೆಂಗಳೂರು ಕೇಂದ್ರ ವಿಭಾಗದ 2×2 ವಿನ್ಯಾಸದ ಎರಡು ಸಾಲಿನ 39 ಆಸನ ಸಾಮರ್ಥ್ಯದ ರಾಜಹಂಸ ಬಸ್ ಅನ್ನು ವಿನ್ಯಾಸಗೊಳಿಸಿದೆ.
ಬಸ್ ನಲ್ಲಿ ಎರೆಡೆರಡು ಸೀಟ್ ನಲ್ಲಿ ನಾಲ್ಕು ಪ್ರಯಾಣಿಕರು ಸಾಗುತ್ತಿದ್ದ ಕ್ರಮಕ್ಕೆ ಬಂದಲಾಗಿ 2×2 ಅಳತೆಯಲ್ಲಿ ಮೂರು ಸೀಟ್ ಆಸನದ ವ್ಯವಸ್ಥೆಯನ್ನು ಮಾಡಿದೆ. ಇದರಿಂದಾಗಿ ಈ ಮೊದಲು 39 ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ 29 ಪ್ರಯಾಣಿಕರು ಪ್ರಯಾಣಿಸುವಂತ ಆಸನ ವ್ಯವಸ್ಥೆಯ ವಿನ್ಯಾಸವನ್ನು ಕೆ ಎಸ್ ಆರ್ ಟಿ ಸಿ ಮಾಡಿದೆ.









