ಭಾರತ-ಪಾಕಿಸ್ತಾನ ಗಡಿಯ ಬಳಿ ಐವರು ನುಸುಳುಕೋರರ ಹತ್ಯೆ ಮಾಡಿದ ಬಿಎಸ್ಎಫ್ ಯೋಧರು
ಪಂಜಾಬ್, ಅಗಸ್ಟ್22: ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ ಬಳಿ ಐವರು ನುಸುಳುಕೋರರು ಇಂದು ಮುಂಜಾನೆ ಬಿಎಸ್ಎಫ್ ಯೋಧರ ಗುಂಡಿನ ದಾಳಿಗೆ ಸಾವನ್ನಪ್ಪಿದ್ದಾರೆ.
ಇಂದು ಮುಂಜಾನೆ ಪಂಜಾಬ್ ಅಂತಾರಾಷ್ಟ್ರೀಯ ಗಡಿಯ ಬಳಿ ಗಡಿ ಭದ್ರತಾ ಪಡೆಯ 103ನೇ ಬೆಟಾಲಿಯನ್ ಯೋಧರು ಅನುಮಾನಾಸ್ಪದವಾಗಿ ಒಳ ನುಸುಳುತ್ತಿದ್ದವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಬಿಎಸ್ಎಫ್ ಯೋಧರು ನುಸುಳುಕೋರರು ಒಳನುಸುಳುವುದನ್ನು ಗಮನಿಸಿ, ಅವರನ್ನು ತಡೆಯಲು ಪ್ರಯತ್ನಿಸಿದರು.
ಆಗ ನುಸುಳುಕೋರರು ಯೋಧರ ಮೇಲೆ ಗುಂಡು ಹಾರಿಸಲು ಪ್ರಯತ್ನಿಸಿದ್ದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಯೋಧರು ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಮುಂಜಾನೆ ಸುಮಾರು 4.45ರ ವೇಳೆಯಲ್ಲಿ ನಡೆದಿದೆ.