ಹರಿಯಾಣ : ಕತ್ತೆ ಹಾಲಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆ ದೇಶದಲ್ಲಿ ಮೊದಲ ಬಾರಿಗೆ ಹರಿಯಾಣದ ಹಿಸಾರ್‍ನಲ್ಲಿ ಕತ್ತೆ ಹಾಲಿನ ಡೈರಿ ಶುರುವಾಗ್ತಿದೆ. ಕತ್ತೆ ಹಾಲಿನ ಈ ಡೈರಿ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಒಂದು ಲೀಟರ್ ಹಾಲಿಗೆ 7000 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.
ಕತ್ತೆ ಹಾಲು ಮನುಷ್ಯನಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸರಿಪಡಿಸುವಲ್ಲಿ ಕತ್ತೆ ಹಾಲು ದೊಡ್ಡ ಪಾತ್ರವನ್ನು ವಹಿಸುತ್ತದೆ. ಅಲ್ಲದೆ ಸೌಂದರ್ಯ ಉತ್ಪನ್ನಗಳ ತಯಾರಿಕೆಯಲ್ಲೂ ಇದನ್ನು ಬಳಸಲಾಗುತ್ತದೆ. ಹೀಗಾಗಿ ಕತ್ತೆ ಹಾಲಿಗೆ ಭಾರಿ ಬೇಡಿಕೆ ಬಂದಿದೆ.
ಎನ್‍ಆರ್‍ಸಿಇ ಹಿಸಾರ್ ನಲ್ಲಿ ಕತ್ತೆ ಹಾಲಿನ ಡೈರಿ ಶುರು ಮಾಡಲಿದ್ದು, ಈಗಾಗಲೇ 10 ಹಲಾರಿ ತಳಿ ಕತ್ತೆಗಳನ್ನು ಖರೀದಿಸಿದೆ.









