ನವಿಲುಗಳೊಂದಿಗಿನ ‘ಅಮೂಲ್ಯ ಕ್ಷಣ’ಗಳ ವೀಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹೊಸದಿಲ್ಲಿ, ಅಗಸ್ಟ್23: ಪ್ರಧಾನಿ ನರೇಂದ್ರ ಮೋದಿಯವರ ಪ್ರಕೃತಿಯ ಮೇಲಿನ ಪ್ರೀತಿ ಎಲ್ಲರಿಗೂ ತಿಳಿದ ವಿಷಯವೇ ಆಗಿದೆ ಮತ್ತು ಅವರು ಈ ಬಗ್ಗೆ ಹಲವಾರು ಸಂದರ್ಭಗಳಲ್ಲಿ ಪ್ರಸ್ತಾಪಿಸಿದ್ದಾರೆ ಕೂಡ. ಇದೀಗ ಪ್ರಧಾನಿ ಮೋದಿ ತಮ್ಮ ನಿವಾಸದಲ್ಲಿ ವಾಸವಾಗಿರುವ ನವಿಲುಗಳೊಂದಿಗೆ ತಾವು ಹೊಂದಿರುವ ವಿಶೇಷ ಬಾಂಧವ್ಯದ ವೀಡಿಯೊವನ್ನು ಅಮೂಲ್ಯ ಕ್ಷಣಗಳು ಎಂಬ ಶೀರ್ಷಿಕೆಯೊಂದಿಗೆ ಭಾನುವಾರ (ಆಗಸ್ಟ್ 23) ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಯವರು ತಮ್ಮ ಬೆಳಗಿನ ವಾಡಿಕೆಯ ವ್ಯಾಯಾಮದ ಸಮಯದಲ್ಲಿ ದೇಶದ ರಾಷ್ಟ್ರೀಯ ಪಕ್ಷಿಗೆ ಧಾನ್ಯಗಳನ್ನು ಕೊಡುವ ಕ್ಷಣಗಳ ವಿವಿಧ ತುಣುಕುಗಳನ್ನು ಈ ವಿಡಿಯೋ ಒಳಗೊಂಡಿದೆ.
भोर भयो, बिन शोर,
मन मोर, भयो विभोर,
रग-रग है रंगा, नीला भूरा श्याम सुहाना,
मनमोहक, मोर निराला।रंग है, पर राग नहीं,
विराग का विश्वास यही,
न चाह, न वाह, न आह,
गूँजे घर-घर आज भी गान,
जिये तो मुरली के साथ
जाये तो मुरलीधर के ताज। pic.twitter.com/Dm0Ie9bMvF— Narendra Modi (@narendramodi) August 23, 2020
ಜೊತೆಗೆ ಪ್ರಧಾನಿ ಮೋದಿ ಅವರು ಹಿಂದಿಯಲ್ಲಿ ಬರೆದ ಕವಿತೆಯೊಂದನ್ನು ಹಂಚಿಕೊಂಡಿದ್ದು, ಅದು ಅವರ ನೀಲಿ ಗರಿಯನ್ನು ಹೊಂದಿರುವ ಸ್ನೇಹಿತನ ಬಗ್ಗೆ ಹೇಳುತ್ತದೆ.
ಇದೀಗ ಈ ವಿಡಿಯೋ ವೈರಲ್ ಆಗಿದ್ದು ಅಪಾರ ಜನಮೆಚ್ಚುಗೆ ಪಡೆದಿದೆ. ಪ್ರಧಾನಿ ಮೋದಿ ಅವರ ನಿವಾಸದಲ್ಲಿ ನವಿಲುಗಳು ಸೇರಿದಂತೆ ಹಲವು ಪಕ್ಷಿಗಳಿಗೆ ಆಶ್ರಯ ಕಲ್ಪಿಸಲಾಗಿದೆ.