ಚನ್ನಪಟ್ಟಣ : ‘ಡಿ.ಕೆ.ಶಿವಕುಮಾರ್ ಒಬ್ಬ ದೊಡ್ಡ ಕಳ್ಳ’. ಅವರ ಫೋನ್ ಕದ್ದಾಲಿಕೆ ಮಾಡಿ ನಮ್ಮ ಸರ್ಕಾರ ಯಾವ ರಾಜ್ಯ ಗೆಲ್ಲಬೇಕಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಸಿ.ಪಿ.ಯೋಗೇಶ್ವರ್ ವಾಕ್ ಸಮರ ಮುಂದುರಿಸಿದ್ದಾರೆ.
ಚನ್ನಪಟ್ಟಣದಲ್ಲಿ ಡಿ.ಕೆ ಶಿವಕುಮಾರ್ ರ ಫೋನ್ ಕದ್ದಾಲಿಕೆ ಆರೋಪದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಪಿ ಯೋಗೇಶ್ವರ್, ‘ಡಿಕೆಶಿ ಫೋನ್ ಟ್ಯಾಪಿಂಗ್ ಆರೋಪ ಮಾಡುತ್ತಿದ್ದಾರೆ. ಆದರೆ, ಅವರೇ ಒಬ್ಬ ಕಳ್ಳ. ಅವರು ಇನ್ನೊಬ್ಬರ ಮೇಲೆ ಆರೋಪ ಮಾಡೋಕೆ ಏನಿದೆ. ಫೋನ್ ಕದ್ದಾಲಿಕೆ ಆರೋಪ ಶುದ್ಧಸುಳ್ಳು. ಅವರ ಫೋನನ್ನು ಯಾವ ಉದ್ದೇಶಕ್ಕಾಗಿ ಕದ್ದಾಲಿಕೆ ಮಾಡಬೇಕು..? ಅದರ ಅಗತ್ಯ ಏನಿದೆ..? ಅವರ ಫೋನ್ ಕದ್ದಾಲಿಕೆ ಮಾಡಿ ಯಾವ ರಾಜ್ಯ ಗೆಲ್ಲಬೇಕಾಗಿದೆ..?’ ಎಂದು ತಿರುಗೇಟು ನೀಡಿದರು.
‘ಡಿಕೆಶಿವಕುಮಾರ್ ಅವರೇ ಈ ಹಿಂದೆ ಫೋನ್ ಟ್ಯಾಪಿಂಗ್ ಮಾಡಿಸಿ, ಅದನ್ನು ನಮ್ಮ ಪಕ್ಷದ ಮೇಲೆ ಆರೋಪ ಹೊರಿಸಿದ್ದರು ಎಂದು ಆರೋಪಿಸಿದ ಸಿಪಿವೈ, ರಾಜ್ಯದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶದಿಂದ ಅವರು ಇಂತಹ ಆರೋಪ ಮಾಡುತ್ತಿದ್ದಾರೆ. ಫೋನ್ ಕದ್ದಾಲಿಕೆ ಮಾಡುವುದರಲ್ಲಿ ಡಿಕೆಶಿ ಅನುಭವಿ’ ಎಂದು ಕುಟುಕಿದರು.