ಬೆಂಗಳೂರು : ಆಗಸ್.2ರಂದು ಸಿಎಂ ಬಿಎಸ್ ಯಡಿಯೂರಪ್ಪನವರಿಗೆ ಕೊರೋನಾ ಪಾಸಿಟಿವ್ ಬಂದ ನಂತರ ಸೀಲ್ ಡೌನ್ ಮಾಡಲಾಗಿದ್ದ ಸಿಎಂ ಗೃಹ ಕಚೇರಿ ಕೃಷ್ಣಾ ಇದೀಗ ಮೂರು ವಾರದ ಬಳಿಕ ಮತ್ತೆ ಒಪನ್ ಆಗಿದೆ. ಅಲ್ಲದೇ ಸಿಎಂ ಕಚೇರಿಯಲ್ಲಿ ಮತ್ತೆ ಚಟುವಟಿಕೆಗಳು ಎಂದಿನಂತೆ ಪುನರಾರಂಭಗೊಂಡಿದೆ.
ಸಿಎಂ ಹಾಗೂ ಗೃಹ ಕಚೇರಿ ಕೃಷ್ಣಾ ಹಾಗೂ ಸಿಎಂ ಅಧಿಕೃತ ನಿವಾಸ ಕಾವೇರಿಯ ಕೆಲ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ತಗುಲಿದ್ದು ದೃಢವಾದ ಬೆನ್ನಲ್ಲೇ ಮುಂಜಾಗ್ರತಾ ಕ್ರಮವಾಗಿ ಸಿಎಂ ಗೃಹ ಕಚೇರಿ ಕೃಷ್ಣಾ ಹಾಗೂ ಸಿಎಂ ಅಧಿಕೃತ ನಿವಾಸ ಕಾವೇರಿಯನ್ನು ಸೀಲ್ ಡೌನ್ ಮಾಡಲಾಗಿತ್ತು. ಇದೀಗ ಸಿಎಂ ಯಡಿಯೂರಪ್ಪನವರು ಸಂಪೂರ್ಣವಾಗಿ ಗುಣಮುಖರಾಗಿರುವ ಹಿನ್ನೆಲೆ ಬರೋಬ್ಬರಿ ಮೂರು ವಾರದ ಬಳಿಕ ಸಿಎಂ ಗೃಹ ಕಚೇರಿ ಕೃಷ್ಣಾ ಓಪನ್ ಮಾಡಲಾಗಿದೆ.









