ADVERTISEMENT
Monday, February 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಸಂಗೀತ ಲೋಕದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಗಾನಗಂಧರ್ವ ಎಸ್ ಪಿಬಿ..!

admin by admin
August 25, 2020
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಭಾರತದ ಸುಪ್ರಸಿದ್ಧ ಹಿನ್ನೆಲೆ ಗಾಯಕರೆನಿಸಿಕೊಂಡಿರುವ ಗಾನಗಂಧರ್ವ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಕೇವಲ ಸಂಗೀತ ಜಗತ್ತಿನಲ್ಲಷ್ಟೇ ಅಲ್ಲ, ನಟನೆ, ಸಂಗೀತ ಸಂಯೋಜನೆಯಲ್ಲೂ ತಮ್ಮ ಪ್ರವೀಣತೆಯ ಝಳಕ್ ತೋರಿಸಿ ಕೋಟ್ಯಾಂತರ ಅಭಿಮಾನಿಗಳ ಮನದಲ್ಲಿ ನೆಲೆಸಿದ ಸಂಗೀತ ಮಾಂತ್ರಿಕರು. ಅದರಲ್ಲೂ ದಕ್ಷಿಣ ಭಾರತದಲ್ಲಿ ಎಸ್ ಪಿಬಿ ಅವರ ಕೊಡುಗೆ ಅಪಾರ. ನಟನೆ, ಚಲನಚಿತ್ರ ಸಂಯೋಜನೆ, ಸಿನೆಮಾ ನಿರ್ಮಾಣ ಹೀಗೆ ಸಕಲ ಕಲಾ ವಲ್ಲಭರಾಗಿದ್ದ ಎಸ್ ಪಿಬಿ ಅವರ ಸಾಧನೆ ಹೇಳುತ್ತಾ ಹೋದರೆ ಪದಗಳು ಸಾಕಾಗುವುದಿಲ್ಲ.

ಹೌದು ಮೂಲತಃ ತೆಲುಗಿನವರಾದರೂ ಕನ್ನಡದ ಬಗ್ಗೆ ಅತಿ ಹೆಚ್ಚು ಒಲವಿಟ್ಟುಕೊಂಡಿದ್ದಾರೆ. ಧ್ವನಿ ದಾನ , ಸಂಗೀತ ಕಾರ್ಯಕ್ರಮಗಳ ನಿರ್ವಣೆಯಲ್ಲೂ ನಿರಂತರವಾಗಿ ಸಾಧನೆ ಮಾಡಿದವರು ಎಸ್ ಪಿ ಬಿ. ಇನ್ನೂ ಕನ್ನಡದಲ್ಲಿ ಒಂದೇ ದಿನ 17 ಗೀತೆಗಳನ್ನು ಧ್ವನಿಮುದ್ರಿಸಿದ್ದರು, ಹಿಂದಿಯಲ್ಲಿ ಒಂದೇ ದಿನ 16 ಹಾಡುಗಳನ್ನು ಧ್ವನಿಮುದ್ರಿಸಿದ್ದರು. ಇದು ಎಸ್ ಪಿ ಬಿ ಅವರ ಸಾಮರ್ಥ್ಯ, ಅವರಿಗಿದ್ದ ಬೇಡಿಕೆ, ಅವರಿಗಿರುವ ವೈಶಾಲ್ಯತೆಗಳಿಗಿರುವ ನಿದರ್ಶನ. ಸಂಗೀತ ಪ್ರಧಾನವಾದ ಭಾರತೀಯ ಚಿತ್ರರಂಗದಲ್ಲಿ ಒಂದು ರೀತಿಯಲ್ಲಿ ಹಿನ್ನೆಲೆ ಗಾಯಕರು ಅಭಿನಯಿಸುವವರ ಆತ್ಮವಿದ್ದಂತೆ. ಇದೇ ವಿಚಾರವಾಗೇ ವರನಟ ದಿವಂಗತ. ಡಾ ರಾಜ್ ಕುಮಾರ್ ಅವರು ಒಮ್ಮೆ ಉಲ್ಲೇಖಿಸಿ ನೀಡಿದ್ದ  ಹೇಳಿಕೆ ಲಕ್ಷಾಂತರ ಜನರ ಮನಸ್ಸು ಮುಟ್ಟಿತ್ತು. ಹೌದು ರಾಜಣ್ಣ ಅವರು ಒಂದೊಮ್ಮೆ ಎಸ್ ಪಿ ಬಿ ಅವರ ಬಗ್ಗೆ ಮಾತನಾಡುವಾಗ ‘ ಎಸ್ ಪಿ ಬಿ ನನ್ನ ಆತ್ಮ , ನಾನು ಶರೀರ ‘ ಎಂದು ಹೇಳಿದ್ದರು. ಬಳಿಕ ಹಲವೆಡೆ ಇದೇ ಮಾತನ್ನೇ ಮತ್ತೆ ಮತ್ತೆ ಹೇಳುತ್ತಿದ್ದರು.

Related posts

If you cut your nail and place it here, it will bring you money and also ward off the evil eye.

ಉಗುರನ್ನು ಕತ್ತರಿಸಿ ಇಲ್ಲಿ ಹಾಕಿದರೆ ಹಣದ ಮಳೆಯ ಜೊತೆಗೆ ಕೆಟ್ಟ ದೃಷ್ಟಿಯು ಕೂಡ ದೂರವಾಗುತ್ತದೆ..

February 16, 2026
ishan kishan

ಶ್ರೀಲಂಕಾದಲ್ಲಿ ಹರ ಹರ ಮಹದೇವ..! ಭಾರತದಲ್ಲಿ ಓಂ ನಮಃ ಶಿವಾಯಃ..! ಪಾಕಿಸ್ತಾನದಲ್ಲಿ ಓಂ ಶಾಂತಿಃ ಶಾಂತಿಃ..ಶಾಂತಿಃ..!

February 16, 2026

ಕನ್ನಡದಲ್ಲಿ ಎಸ್ ಪಿಬಿ ಅವರು ಧ್ವನಿಯಾಗಿರುವ ಹಾವಿನ ದ್ವೇಶ 12 ವರ್ಷ, ಸ್ನೇಹದ ಕಡಲಲ್ಲಿ, ಎಲ್ಲಿರುವೇ ಮನವ ಕಾಡುವ ರೂಪಸಿಯೇ, ನಲಿವ ಗುಲಾಬಿ ಹೂವೇ ಹಾಡುಗಳು ಇಂದಿಗೂ ಜನರ ಬಾಯಲ್ಲಿ ರಾರಾಜಿಸುತ್ತವೆ. ಎಂದೆಂದಿಗೂ ಎವರ್ ಗ್ರೀನ್ ಪಟ್ಟಿಯಲ್ಲೇ ಇರಲಿವೆ. ಎಸ್ ಪಿ ಬಿ ಅವರ ಹಾಡಿನ ಮೋಡಿಗೆ ಮನಸೋಲದವರೇ ಇಲ್ಲ. ದೊಡ್ಡ ದೊಡ್ಡ ಸ್ಟಾರ್ ಗಳಿಂದ ಹಿಡಿದು ಎಲ್ಲರೂ ಎಸ್ ಪಿ ಬಿ ಅವರ ಸಾಧನೆಗೆ ಮೂಕವಿಸ್ಮಿತರಾಗುವುದರಲ್ಲಿ ಅನುಮಾನವೇ ಇಲ್ಲ.

ಸಂಗೀತ ಲೋಕದಲ್ಲಿ ಮಹತ್ಸಾಧನೆ ಮಾಡಿರುವ ಗಾನಗಂಧರ್ವ , ಸಂಗೀತ ಮಾಂತ್ರಿಕ ಎಸ್ ಪಿ ಬಿ ಅವರು 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಮಹಾನ್ ಕಲಾವಿಧರು. ಶಂಕರಾಭರಣಂ, ಪಂಚಾಕ್ಷರಿ ಗವಾಯಿ, ಸಾಗರ ಸಂಗಮಂ, ಸ್ವಾತಿ ಮುತ್ಯಂ, ರುದ್ರವೀಣ, ಏಕ್ ದೂಜೇ ಕೇಲಿಯೇ ಚಿತ್ರಗಳ ಹಾಡುಗಳಿಗೆ ಬಾಲು ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಪದ್ಮಶ್ರೀ , ಹಲವು ಡಾಕ್ಟರೇಟ್ ಪದವಿಗಳು, ಸಾವಿರಾರು ಇನ್ನಿತರ ಗೌರವ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ.

ಅಪ್ರತಿಮ ಸಾಧನೆ ಮಾಡಿ ಸಂಗೀತ , ನಟನೆ ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆಗೈದಿದ್ದಾರೆ ಎಸ್ ಪಿ ಬಿ. ವಿವಿಧ ಭಾಷೆಗಳ ಪರಿಧಿಯಲ್ಲಿ ಇಷ್ಟೊಂದು ಹಾಡಿರುವವರು ಇವರೊಬ್ಬರೇ. ಸಂಗೀತ ನಿರ್ದೇಶಕರಾಗಿ, ಹಲವಾರು ನಾಯಕರಿಗೆ ಕಂಠದಾನ ಕಲಾವಿದರಾಗಿ, ನಟರಾಗಿ, ನಿರ್ಮಾಪಕರಾಗಿ ಕೂಡಾ ಬಾಲು ಚಿತ್ರರಂಗದಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಹಾಸ್ಯ ಪಾತ್ರಗಳಿಗೆ ಹೇಳಿ ಮಾಡಿಸಿದಂತಹ ಶಾರೀರಿಕ ಭಾಷಾಭಿವ್ಯಕ್ತಿ ಅವರದ್ದು.

ಸಂಗೀತ ಮಾಂತ್ರಿಕ ಎಸ್ ಪಿಬಿ ಅವರಿಗೆ ಆಗಸ್ಟ್ 5 ರಂದು ಕೊರೊನಾ ಪಾಸಿಟಿವ್ ಇರುವುದು ಪತ್ತೆಯಾಗಿತ್ತು. ಇದಾದ ಬಳಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಎಸ್ ಪಿ ಬಿ ಅವರ ಆರೋಗ್ಯ ಸ್ಥಿತಿ ತೀವ್ರ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ತೀವ್ರ ನಿಘಾ ಘಟಕದಲ್ಲಿ  ವೆಂಟಿಲೇಟರ್ ನಲ್ಲೇ ಇರಿಸಿ ಎಸ್ ಪಿಬಿ ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಮತ್ತೊಂದೆಡೆ ಎಸ್ ಪಿ ಬಿ ಅವರು ಆರೋಗ್ಯವಾಗಿರಲಿ ಬೇಗ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ.

 

Tags: Coronasinger balasubrhmanyamsp balasubrhmanyam
ShareTweetSendShare
Join us on:

Related Posts

If you cut your nail and place it here, it will bring you money and also ward off the evil eye.

ಉಗುರನ್ನು ಕತ್ತರಿಸಿ ಇಲ್ಲಿ ಹಾಕಿದರೆ ಹಣದ ಮಳೆಯ ಜೊತೆಗೆ ಕೆಟ್ಟ ದೃಷ್ಟಿಯು ಕೂಡ ದೂರವಾಗುತ್ತದೆ..

by admin
February 16, 2026
0

ಇದರಲ್ಲಿ ನಿಮ್ಮ ಬೆರಳಿನ ಉಗುರನ್ನು ಕತ್ತರಿಸಿ ಹಾಕಿ ಪವಾಡ ನೋಡಿ ಇದರ ಬಗ್ಗೆ ಕನಸಿನಲ್ಲೂ ಕಲ್ಪನೆ ಮಾಡಲು ಸಾಧ್ಯವಿಲ್ಲ ಯಾವುದೇ ಕೈಯಲ್ಲಿರುವ ಬೆರಳುಗಳು ಒಂದೇ ರೀತಿ ಇಲ್ಲ,...

ishan kishan

ಶ್ರೀಲಂಕಾದಲ್ಲಿ ಹರ ಹರ ಮಹದೇವ..! ಭಾರತದಲ್ಲಿ ಓಂ ನಮಃ ಶಿವಾಯಃ..! ಪಾಕಿಸ್ತಾನದಲ್ಲಿ ಓಂ ಶಾಂತಿಃ ಶಾಂತಿಃ..ಶಾಂತಿಃ..!

by admin
February 16, 2026
0

ಶ್ರೀಲಂಕಾದಲ್ಲಿ ಹರ ಹರ ಮಹದೇವ..! ಭಾರತದಲ್ಲಿ ಓಂ ನಮಃ ಶಿವಾಯಃ..! ಪಾಕಿಸ್ತಾನದಲ್ಲಿ ಓಂ ಶಾಂತಿಃ ಶಾಂತಿಃ..ಶಾಂತಿಃ..! ಇದೆಂಥಾ ಕಾಕತಾಳೀಯ.. ಹೇಳಿ ಕೇಳಿ.. ಶ್ರೀಲಂಕಾ ಹರ ಹರ ಮಹದೇವನ...

ಸಾರಿಗೆ ಪ್ರಯಾಣಿಕರಿಗೆ ಮತ್ತೊಂದು ಬರೆ: ಕೆಎಸ್ಆರ್‌ಟಿಸಿ ಲಗೇಜ್ ದರ ದಿಢೀರ್ ಏರಿಕೆ ಇಂದಿನಿಂದ ಜಾರಿ

ಸಾರಿಗೆ ಪ್ರಯಾಣಿಕರಿಗೆ ಮತ್ತೊಂದು ಬರೆ: ಕೆಎಸ್ಆರ್‌ಟಿಸಿ ಲಗೇಜ್ ದರ ದಿಢೀರ್ ಏರಿಕೆ ಇಂದಿನಿಂದ ಜಾರಿ

by Shwetha
February 16, 2026
0

ಬೆಂಗಳೂರು: ರಾಜ್ಯದ ಜನತೆಗೆ ಸಾರಿಗೆ ಇಲಾಖೆ ಮತ್ತೊಂದು ಶಾಕ್ ನೀಡಿದೆ. ಸಾರಿಗೆ ಬಸ್ ಪ್ರಯಾಣಿಕರಿಗೆ ಮತ್ತು ಪಾರ್ಸೆಲ್ ಸೇವೆ ಬಳಸುವವರಿಗೆ ದಿಢೀರ್ ಹೊರೆ ಎನ್ನುವಂತೆ, ಕರ್ನಾಟಕ ರಾಜ್ಯ...

ಕರಾವಳಿ ಅಭಿವೃದ್ಧಿಗೆ ಕೋಮು ದ್ವೇಷದ ಗ್ರಹಣ – ಧರ್ಮಗುರುಗಳು, ರಾಜಕಾರಣಿಗಳು ಪ್ರಬುದ್ಧರಾಗದಿದ್ದರೆ ಸಮಾಜ ಉದ್ಧಾರ ಅಸಾಧ್ಯ: ಖರ್ಗೆ ಖಡಕ್ ಮಾತು

ಕರಾವಳಿ ಅಭಿವೃದ್ಧಿಗೆ ಕೋಮು ದ್ವೇಷದ ಗ್ರಹಣ – ಧರ್ಮಗುರುಗಳು, ರಾಜಕಾರಣಿಗಳು ಪ್ರಬುದ್ಧರಾಗದಿದ್ದರೆ ಸಮಾಜ ಉದ್ಧಾರ ಅಸಾಧ್ಯ: ಖರ್ಗೆ ಖಡಕ್ ಮಾತು

by Shwetha
February 16, 2026
0

ಬೆಂಗಳೂರು: ರಾಜ್ಯದ ಪ್ರಮುಖ ವಾಣಿಜ್ಯ ಹಾಗೂ ಶೈಕ್ಷಣಿಕ ತಾಣವಾಗಿರುವ ಕರಾವಳಿ ಕರ್ನಾಟಕದಲ್ಲಿ (ದಕ್ಷಿಣ ಕನ್ನಡ) ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಕೋಮುವಾದ ಮತ್ತು ಅಸಹಿಷ್ಣುತೆಯ ವಾತಾವರಣವು ಆ ಭಾಗದ...

ಸಿದ್ದರಾಮಯ್ಯ ಸರ್ಕಾರಕ್ಕೆ ಗುತ್ತಿಗೆದಾರರ ಶಾಕ್:37000 ಕೋಟಿ ಬಾಕಿ ಪಾವತಿಸದಿದ್ದರೆ ರಾಜ್ಯಾದ್ಯಂತ ಕಾಮಗಾರಿ ಬಂದ್ ಗುತ್ತಿಗೆದಾರರ ಸಂಘದ ಖಡಕ್ ಎಚ್ಚರಿಕೆ

ಸಿದ್ದರಾಮಯ್ಯ ಸರ್ಕಾರಕ್ಕೆ ಗುತ್ತಿಗೆದಾರರ ಶಾಕ್:37000 ಕೋಟಿ ಬಾಕಿ ಪಾವತಿಸದಿದ್ದರೆ ರಾಜ್ಯಾದ್ಯಂತ ಕಾಮಗಾರಿ ಬಂದ್ ಗುತ್ತಿಗೆದಾರರ ಸಂಘದ ಖಡಕ್ ಎಚ್ಚರಿಕೆ

by Shwetha
February 16, 2026
0

ಶಿವಮೊಗ್ಗ: ರಾಜ್ಯ ಸರ್ಕಾರವು ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬಾಕಿ ಉಳಿಸಿಕೊಂಡಿರುವ ಬರೋಬ್ಬರಿ 37,000 ಕೋಟಿ ರೂ. ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು, ಇಲ್ಲದಿದ್ದರೆ ಮಾರ್ಚ್ 5 ರಂದು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram