ಮುಂಬೈ: ದೇಶಿ ಕ್ರಿಕೆಟ್ ನ ರನ್ ಮಿಷನ್, ರಣಜಿ ಕ್ರಿಕೆಟ್ ನ ‘ಡಾನ್ ಬ್ರಾಡ್ಮನ್’ ಟೀಂ ಇಂಡಿಯಾದ ಮಾಜಿ ಆಟಗಾರ ವಾಸಿಂ ಜಾಫರ್ ಅವರು ಎಲ್ಲಾ ಮಾದರಿಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ.
ಆರಂಭಿಕ ಬ್ಯಾಟ್ಸ್ ಮನ್ ಆಗಿ ಆಡುತ್ತಿದ್ದ ಜಾಫರ್ 2000 ಹಾಗೂ 2008ರ ಮಧ್ಯೆ 31 ಟೆಸ್ಟ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 5 ಶತಕ ಹಾಗೂ 11 ಅರ್ಧಶತಕಗಳ ಸಹಿತ ಒಟ್ಟು 1,944 ರನ್ ಗಳಿಸಿದ್ದರು. 2006ರಲ್ಲಿ ವೆಸ್ಟ್ಇಂಡೀಸ್ ವಿರುದ್ಧ ದ್ವಿಶತಕ(212)ಗಳಿಸಿದ್ದು ಇದು ಅವರ ಗರಿಷ್ಠ ವೈಯಕ್ತಿಕ ಸ್ಕೋರಾಗಿತ್ತು. ಭಾರತದ ಪರ ಕೇವಲ 2 ಏಕದಿನ ಪಂದ್ಯವನ್ನಾಡಿದ್ದರು.
ಇನ್ನು 1996-97ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ವಾಸಿಂ ಜಾಫರ್, 260 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ. 50.67ರ ಸರಾಸರಿಯಲ್ಲಿ ಜಾಫರ್ ಬರೋಬ್ಬರಿ 19,410 ರನ್ ಗಳಿಸಿದ್ದಾರೆ. 57 ಶತಕಗಳು ಮತ್ತು 91 ಅರ್ಧಶತಕ ಬಾರಿಸಿರುವ ವಾಸೀಂ ಜಾಫರ್ ರ ಹೈಯೆಸ್ಟ್ ಸ್ಕೋರ್ 314 ರನ್.
ಮುಂಬೈ ಪರವಾಗಿ ಆಡುತ್ತಿದ್ದ ಜಾಫರ್ ಇತ್ತೀಚಿನ ವರ್ಷಗಳಲ್ಲಿ ವಿದರ್ಭ ಪರವಾಗಿ ಆಡುತ್ತಿದ್ದರು.
ಅದೃಷ್ಟದ ಹಣ ನಿಮ್ಮ ಬಳಿ ಬರಬೇಕು ಅಂದ್ರೆ ಬಿಳಿಹಾಳೆಯ ಮೇಲೆ ಈ ಯಂತ್ರವನ್ನು ಬರೆದು ನಿಮ್ಮ ಬಳಿ ಇಟ್ಟುಕೊಳ್ಳಿ
ಅದೃಷ್ಟದ ಹಣ ನಿಮ್ಮ ಬಳಿ ಬರಬೇಕು ಅಂದ್ರೆ ಬಿಳಿಹಾಳೆಯ ಮೇಲೆ ಈ ಯಂತ್ರವನ್ನು ಬರೆದು ನಿಮ್ಮ ಬಳಿ ಇಟ್ಟುಕೊಳ್ಳಿ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್...








