ಮೈಸೂರು : ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಲು ನಾನು ಮುಖ್ಯಮಂತ್ರಿಯಲ್ಲ, ಈ ಬಗ್ಗೆ ನನ್ನನ್ನು ಏಕೆ ಪ್ರಶ್ನೆ ಮಾಡುತ್ತಿದ್ದೀರಾ.? ಎಂದು ಸಂಪುಟ ವಿಸ್ತರಣೆ ಬಗೆಗಿನ ಪ್ರಶ್ನೆಗೆ ಮಾಜಿ ಸಚಿವ ಹೆಚ್.ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಡಿಯೂರಪ್ಪನವರ ಬಿಜೆಪಿ ಸರ್ಕಾರ ಬರಲು ನನ್ನ ಪಾತ್ರ ದೊಡ್ಡದಿದೆ. ಸಹಜವಾಗಿಯೇ ಸಂಪುಟ ವಿಸ್ತರಣೆಯಾದರೆ ಅದರಲ್ಲಿ ಸ್ಥಾನ ಪಡೆಯುತ್ತೇನೆ ಅನ್ನುವ ವಿಶ್ವಾಸ ಇದೆ. ನಾನೂ ಸಹ ಸಚಿವ ಸಂಪುಟದ ಆಕಾಂಕ್ಷಿಯಾಗಿದ್ದು, ಇದು ಮುಖ್ಯಮಂತ್ರಿಗಳಿಗೆ ಮತ್ತು ಬಿಜೆಪಿ ಹೈಕಮಾಂಡ್ ಗೆ ಸಂಬಂಧಿಸಿದ ವಿಷಯ ಎಂದು ಹೇಳಿದ್ದಾರೆ.
ಇದೇ ವೇಳೆ ನಂಜನಗೂಡು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ವಿಶ್ವನಾಥ್, ಐಎಎಸ್ ಅಧಿಕಾರಿಗಳು ಸರ್ವಜ್ಞರಲ್ಲ, ಐಎಎಸ್ ಅಧಿಕಾರಿಗಳು ಪಿಪಿಇ ಕಿಟ್‍ಗಳನ್ನು ಹಾಕಿಕೊಂಡರೆ ವೈದ್ಯರ ಕಷ್ಟ ಏನೆಂಬುದು ಅವರಿಗೆ ಗೊತ್ತಾಗುತ್ತೆ. ಕೆಲವೊಂದು ವಿಚಾರದಲ್ಲಿ ವೈದ್ಯರಿಗೆ ಮುಕ್ತ ಅವಕಾಶ ನೀಡಬೇಕಿದೆ ಎಂದರು.
![]()








