ಬೆಂಗಳೂರು : ಶೀಘ್ರದಲ್ಲಿ ಬಾರ್, ಕ್ಲಬ್ ಮತ್ತು ಪಬ್ ಓಪನ್ ಆಗುವ ಸಾಧ್ಯತೆ ಇದೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ತಿಳಿಸಿದ್ದಾರೆ.
ನೆಲಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬಾರ್, ಕ್ಲಬ್ ಮತ್ತು ಪಬ್ ಓಪನ್ ಮಾಡುವ ಬಗ್ಗೆ ಸಿಎಂ ಜೊತೆಗೆ ನಾನು ಚರ್ಚೆ ಮಾಡುವೆ. ಬಾರ್ ಮತ್ತು ಪಬ್ ಕಾರ್ಮಿಕರಿಗೆ ತೊಂದರೆಯಾಗಿದೆ. ಕ್ಲಬ್ ಗಳಲ್ಲಿ ಸ್ಪೋಟ್ರ್ಸ್ ಚಟುವಟಿಕೆಯನ್ನು ಇಂದಿನಿಂದ ಆರಂಭವಾಗಿದೆ. ಅಲ್ಲಿ ಪಾರ್ಸಲ್ ಗಳಿಗೆ ಮಾತ್ರ ಅನುಮತಿ ನೀಡಲಾಗಿದೆ ಎಂದರು.
![]()
ಅಬಕಾರಿ ಇಲಾಖೆಗೆ ಲಾಕ್ ಡೌನ್ ನಿಂದ 3,000 ಕೋಟಿ ನಷ್ಟವಾಗಿತ್ತು. ಈಗ ಅದು 2,000 ಕೋಟಿಗೆ ಬಂದು ನಿಂತಿದೆ ಎಂದು ತಿಳಿಸಿದ ನಾಗೇಶ್, ಮುಂದಿನ 8 ತಿಂಗಳಲ್ಲಿ ನಷ್ಟವನ್ನ ಸರಿದೂಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಬಾರ್, ಕ್ಲಬ್ ಓಪನ್ ಆದರೆ ವ್ಯಾಪಾರ ಆಗಬಹುದು. ಆಗ ಲಾಕ್ ಡೌನ್ ನಲ್ಲಿ ಉಂಟಾದ ನಷ್ಟವನ್ನು ಭರಿಸಬಹುದು. ಹೀಗಾಗಿ ನಮ್ಮ ಇಲಾಖೆಯ ಅಧಿಕಾರಿಗಳು ಚರ್ಚೆ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಅಕ್ರಮ ಮದ್ಯ ಮಾರಾಟದ ಬಗ್ಗೆ ಮಾತನಾಡಿದ ಅವರು, ಅಕ್ರಮವಾಗಿ ಮನೆ, ಅಂಗಡಿಗಳಲ್ಲಿ ಮಧ್ಯ ಮಾರಾಟ ಮಾಡುತ್ತಿರುವವವ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಈ ಕುರಿತು ತನಿಖೆ ನಡೆಯುತ್ತಿದೆ. ಒಂದು ವೇಳೆ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದರೆ ನಿರ್ದಾಕ್ಷಿಣ್ಯವಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.









