ಜೋ ಬಿಡನ್ ಗೆದ್ದರೆ ಅಮೆರಿಕ ಸಂಪೂರ್ಣವಾಗಿ ಚೀನಾ ನಿಯಂತ್ರಣಕ್ಕೆ ಬರಲಿದೆ : ಟ್ರಂಪ್
ವಾಷಿಂಗ್ಟನ್, ಅಗಸ್ಟ್25: ನವೆಂಬರ್ 3 ರ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಡೆಮಾಕ್ರಟಿಕ್ ಪ್ರತಿಸ್ಪರ್ಧಿ ಬಿಡೆನ್ ಚುನಾಯಿತರಾದರೆ ಅಮೆರಿಕ ಚೀನಾದ ಪಾಲಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೋ ಬಿಡನ್ ವಿರುದ್ಧ ವಾಗ್ದಾಳಿ ನಡೆಸಿದರು.
77 ವರ್ಷದ ಬಿಡೆನ್, ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಪ್ರಸ್ತುತ 74 ವರ್ಷದ ಅಧ್ಯಕ್ಷ ಟ್ರಂಪ್ ಅವರಿಗೆ ಪ್ರತಿಸ್ಪರ್ಧಿಯಾಗಿ ಕಣದಲ್ಲಿದ್ದಾರೆ.
ಈ ಬಾರಿ ಅಧ್ಯಕ್ಷೀಯ ಚುನಾವಣೆಯಲ್ಲಿ ಬಿಡೆನ್ ಅವರನ್ನು ಗೆಲ್ಲಿಸಲು ಚೀನಾ ಪ್ರಯತ್ನಿಸುತ್ತಿದೆ ಎಂದು ಅಮೆರಿಕನ್ ಗುಪ್ತಚರ ಇಲಾಖೆ ವರದಿ ಮಾಡಿದ್ದು, ನನ್ನ ಅಧಿಕಾರಾವಧಿಯಲ್ಲಿ ಚೀನಕ್ಕೆ ನಾನು ಸೆಡ್ಡು ಹೊಡೆಯುತ್ತಾ ಬಂದಿದ್ದೇನೆ. ಹೀಗಾಗಿ ಚೀನಾಕ್ಕೆ ಚುನಾವಣೆಯಲ್ಲಿ ನಾನು ಗೆಲುವು ಸಾಧಿಸುವುದು ಬೇಕಿಲ್ಲ ಎಂದು ಟ್ರಂಪ್ ಹೇಳಿದರು.
ಕಳೆದ ರಾತ್ರಿಯ ಭಾಷಣದಲ್ಲಿ ಜೋ ಬಿಡೆನ್ ಚೀನಾದ ಬಗ್ಗೆ ಏನು ಮಾತನಾಡಲಿಲ್ಲ, ಅವರ ವಿರುದ್ಧ ಕಾನೂನು ಜಾರಿಗೊಳಿಸುವ ಬಗ್ಗೆ ಮಾತನಾಡಲಿಲ್ಲ. ಪ್ರಜಾಪ್ರಭುತ್ವವಾದಿ ನಗರಗಳಿಗೆ ಸುರಕ್ಷತೆಯನ್ನು ತರುವ ಬಗ್ಗೆ ಅವರು ಮಾತನಾಡಲಿಲ್ಲ ಎಂದ ಡೊನಾಲ್ಡ್ ಟ್ರಂಪ್ ಬಿಡೆನ್ ಗೆದ್ದರೆ ಅಮೆರಿಕ ಸಂಪೂರ್ಣವಾಗಿ ಚೀನಾ ನಿಯಂತ್ರಣಕ್ಕೆ ಬರಲಿದೆ ಎಂದು ಟ್ರಂಪ್ ತಮ್ಮ 2020 ರಾಷ್ಟ್ರೀಯ ನೀತಿ ಮಂಡಳಿಯ ಭಾಷಣದಲ್ಲಿ ಹೇಳಿದರು.