ಮಹೇಂದ್ರ ಕುಮಾರ್ ನಿರ್ದೇಶನದ ತುಳು ಸಿನಿಮಾ ಕಾರ್ನಿಕದ ಕಲ್ಲುರ್ಟಿ ಏಪ್ರಿಲ್ 3 ರಂದು ತೆರೆಕಾಣಲಿದೆ. ಫೆನೋಕ್ಸ್ ಫಿಲ್ಮ್ಸ್ ಬ್ಯಾನರ್‌ನಡಿಯಲ್ಲಿ ಮೂಡಿ ಬಂದಿರುವ ಈ ಸಿನಿಮಾವು ಕಲ್ಲುರ್ಟಿ ದೈವದ ಕಥೆಯಾಗಿದೆ. ಚಿತ್ರಕ್ಕೆ ನಿರ್ದೇಶಕ ಮಹೇಂದ್ರ ಕುಮಾರ್ ಅವರೇ ಕಥೆ ಬರೆದಿದ್ದು, ಗಂಗಾಧರ್ ಕಿರೋಡಿಯನ್ ಅವರು ಸಂಭಾಷಣೆ ಹಾಗೂ ಹಾಡುಗಳಿಗೆ ಸಾಹಿತ್ಯ ನೀಡಿದ್ದಾರೆ. ಹಿತೇನ್ ಹಾಸನ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಶೈಲೇಂದ್ರ ಡಿ.ಜೆ. ಚಾಂದಿನಿ ಅಂಚನ್, ಮಹೇಂದ್ರ ಕುಮಾರ್, ಶಾಲಿನಿ ಮರ್ಕಡ ಹಾಗೂ ಮೊದಲಾದ ಕಲಾವಿದರು ಈ ಸಿನಿಮಾದಲ್ಲಿದ್ದಾರೆ.
ಡಿಕೆಶಿ ಮನಗೆಲ್ಲಲು ಹೊಸ ಅಸ್ತ್ರ: ‘ಭಾವಿ ಸಿಎಂ’ ಎಂದಾಕ್ಷಣ 50 ಕೋಟಿ ಅನುದಾನ ಮಂಜೂರು! ವಿಧಾನಸಭೆಯಲ್ಲಿ ಬಟಾ ಬಯಲಾಯ್ತು ‘BJP’ ಸೀಕ್ರೆಟ್
ಬೆಂಗಳೂರು: ರಾಜಕಾರಣದಲ್ಲಿ ಕೆಲಸ ಆಗಬೇಕೆಂದರೆ ಸಾಮ, ದಾನ, ಭೇದ, ದಂಡ ಎಲ್ಲವನ್ನೂ ಬಳಸಬೇಕು ಎಂಬ ಮಾತಿದೆ. ಆದರೆ, ಹಾಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್...








