ಕೊರೊನಾ ಹಾವಳಿಯಿಂದಾಗಿ ಲಾಕ್ ಡೌನ್ ಆದ ಪರಿಣಾಮ ಕೆಲ ತಿಂಗಳುಗಳಿಂದ ಧಾರವಾಹಿ, ಸಿನೆಮಾಗಳ ಶೂಟಿಂಗ್ ಸಂಪೂರ್ಣವಾಗಿ ಸ್ಥಗಿತವಾಗಿತ್ತು. ಇದೀಗ ನಿಧಾನವಾಗಿಯೇ ಒಂದೊಂದೇ ಚಿತ್ರದ ಸೂಟಿಂಗ್ ಗಳು ಶುರುವಾಗುತ್ತಿದೆ. ಅದರಂತೆ ಬಹುನಿರೀಕ್ಷಿತ ಚಿತ್ರವಾದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ ಜಿ ಎಫ್ ಚಾಪ್ಟರ್ 2 ನ ಶೂಟಿಂಗ್ ಇಂದಿನಿಂದ ಶುರುವಾಗಿದೆ. ಬೆಂಗಳೂರಿನ ಮಿನರ್ವ ಮಿಲ್ನಲ್ಲಿಯೇ ಬೃಹತ್ ಸೆಟ್ ಹಾಕಲಾಗಿದ್ದು, ಇಡೀ ತಂಡ ಶೂಟಿಂಗ್ನಲ್ಲಿ ಪಾಲ್ಗೊಳ್ಳಲು ಉತ್ಸುಕವಾಗಿದೆ. ಈಗಾಗಲೇ ಚಿತ್ರದ ಬಹುತೇಕ ಶೂಟಿಂಗ್ ಮುಗಿದಿದ್ದು, ಶೇ 90 ಭಾಗ ಚಿತ್ರೀಕರಣ ಮುಕ್ತಾಯವಾಗಿದೆ.
![]()
ಇತ್ತ ಚಿತ್ರದ ವಿಲನ್ ಅಧೀರ ( ಸಂಜಯ್ ದತ್ ) ನ ಭಾಗದ ಶೂಟಿಂಗ್ ಬಾಕಿ ಉಳಿದಿದೆ. ಆದರೆ ಸಂಜು ಬಾಬ ಅವರು ಕ್ಯಾನ್ಸರ್ ನಿಂದಾಗಿ ಬಳಲುತ್ತಿದ್ದು, ಚಿತ್ರೀಕರಣದಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಅವರು ಗುಣಮುಖರಾದ ಬಳಿಕ ಅವರ ಭಾಗದ ಚಿತ್ರೀಕರಣ ಮಾಡಿಕೊಳ್ಳಲು ಚಿತ್ರತಂಡ ಯೋಜನೆ ರೂಪಿಸಿದೆ. ರಾಕಿಂಗ್ ಯಶ್ ನಾಯಕತ್ವದಲ್ಲಿ ಮೂಡಿಬರುತ್ತಿರುವ ಚಿತ್ರಕ್ಕೆ ಪ್ರಶಾಂತ್ ನೀಲ್ ಅವರು ಆಕ್ಷನ್ ಕಟ್ ಹೇಳುತ್ತಿದ್ದು, ವಿಜಯ್ ಕಿರಗಂದೂರು ಅವರು ಬಂಡವಾಳ ಹೂಡುತ್ತಿದ್ದಾರೆ.









