ADVERTISEMENT
Friday, July 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸಟ್ಟನ್ ಮನೆತನದವರು ನೀಡಿದ ವಿಚಿತ್ರ ದೂರು ಹಾಗೂ ಅಂತರಿಕ್ಷದ ಭಯಾನಕ (ಹಸಿರು ಕುಳ್ಳ ಮಾನವರು) ಜೀವಿಗಳೂ‌!’

admin by admin
August 26, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಈ ಘಟನೆ ಸಂಭವಿಸಿದ್ದು ಅಮೇರಿಕಾ ಸಂಸ್ಥಾನದ ಕೆಂಟುಕಿ ಪ್ರಾಂತ್ಯದ ಕೆಲ್ಲಿ ಅಥವಾ ಹಾಪ್ಕಿನ್ ವಿಲ್ಲಾದ ಒಂದು ಮನೆಯಲ್ಲಿ. ಅದು 1955 ನೇ ಇಸವಿಯ ಮಧ್ಯ ಬೇಸಗೆಯ ಒಂದು ದಿನ. ಆ ದಿನದ ಬೆಳಗಿನ ಜಾವದ ಐದಾರು ಗಂಟೆಯ ಸಮಯವಿರಬೇಕು. ಹತ್ತಿರದ ಷೆರೀಫ್ ಅಥವಾ ಪೋಲಿಸ್ ಕೇಂದ್ರಕ್ಕೆ ಒಂದೇ ಕುಟುಂಬದ ಏಳೆಂಟು ಜನ ಒಂದು ಕಾರಿನಲ್ಲಿ ಬಂದಿಳಿದರು. ಕೆಳಗಿಳಿದು ದೂರು ಕೊಡಲು ಓಡೋಡಿ ಬಂದ ಅವರ ಮುಖ ಬೆವರಿನಿಂದ ತೋಯ್ದಿದ್ದು ಅವರೆಲ್ಲರೂ ಏನೋ ಭಯಂಕರವಾದುದನ್ನ ಕಂಡು ಭಯದಿಂದ ಕಂಪಿಸುತ್ತಿದ್ದರು.

ಅವರನ್ನ ಕೂರಿಸಿ ಕುಡಿಯಲು ನೀರು ಕೊಟ್ಟು ಸಮಾಧಾನ ಮಾಡಿ ನಡೆದದ್ದೇನೆಂದು ವಿವರಿಸಲು ಕೇಳಿಕೊಳ್ಳಲಾಯ್ತು. ಅದೇ ದಿನದ ರಾತ್ರಿ ಊಟದ ಬಳಿಕ ನಡೆದ ಆ ಬಹು ವಿಚಿತ್ರ ಹಾಗೂ ನಂಬಲಸಾಧ್ಯವಾದ ತಮ್ಮ ಆ ಅನುಭವವನ್ನ ಅವರು ಈ ಮುಂದಿನಂತೆ ಹಂಚಿಕೊಂಡರು.

Related posts

ಕಿವಿಯಲ್ಲಿ ದಾಸವಾಳ ಇಟ್ಟುಕೊಂಡಿದ್ದೀವಾ? ನಾಯಿಗಳ ಸಂಖ್ಯೆಗಿಂತ ಸಂತಾನಹರಣ ಚಿಕಿತ್ಸೆಯೇ ಹೆಚ್ಚು!: ಅಧಿಕಾರಿಗಳ ಬೆವರಿಳಿಸಿದ ಸಚಿವ ಕೃಷ್ಣಭೈರೇಗೌಡ- ಅಂಕಿಅಂಶಗಳ ಗೋಲ್ಮಾಲ್ ಕಂಡು ಸಚಿವರು ಗರಂ!

ಬೀದಿಬದಿ ವ್ಯಾಪಾರಿಗಳ ತೆರವು ಇಲ್ಲ, ಕೇವಲ ಸ್ಥಳಾಂತರ: ಸಚಿವ ಕೃಷ್ಣ ಬೈರೇಗೌಡ ಯೂಟರ್ನ್, ಜುಲೈ 10ರಿಂದ ಅನಾಥ ವಾಹನಗಳ ಸಫಾಯಿ ಶುರು

July 3, 2026
ವಿಧಿ-ವಿಧಾನವಿಲ್ಲದ ಹಿಂದೂ ವಿವಾಹ ಮಾನ್ಯವಲ್ಲ: ಗುಜರಾತ್ ಹೈಕೋರ್ಟ್

ವಿಧಿ-ವಿಧಾನವಿಲ್ಲದ ಹಿಂದೂ ವಿವಾಹ ಮಾನ್ಯವಲ್ಲ: ಗುಜರಾತ್ ಹೈಕೋರ್ಟ್

July 3, 2026

ಆವತ್ತು ಬಿಲ್ ಟೇಲರ್ ಎಂಬ ಇನ್ನೊಬ್ಬ ಈ ಕುಟುಂಬದ ಸ್ನೇಹಿತ ಅಲ್ಲಿ ನೀರು ತುಂಬಿಸಿಕೊಳ್ಳಲು ಬಂದಾಗ ಸಟನ್ಸ್ ಮನೆಯವರ ಮನೆಯ ಪಕ್ಕದಲ್ಲೇ ಒಂದು ವಿಚಿತ್ರ ಆಕಾಶಯಂತ್ರವೊಂದು ನಿಧಾನವಾಗಿ ಪ್ರಭೆ ಸೂಸುತ್ತಾ ಕೆಳಗಿಳಿಯುತ್ತಿರುವುದನ್ನ ಗಮನಿಸ್ತಾನೆ. ಅದನ್ನ ಹೇಳಲು ಮನೆಯವರ ಬಳಿ ಸಾರುತ್ತಿದ್ದಂತೆ, ಆ ಆಕಾಶಯಂತ್ರದಿಂದ ಇಳಿದ ಕೆಲ ವಿಚಿತ್ರ ದಿರಿಸಿನ ಚಿಕ್ಕ ಸೈಜಿನ ಕುಬ್ಜ ಅಪರಿಚಿತ ಜೀವಿಗಳು ಸಟನ್ ಮನೆಯ ಬಳಿಗೇ ನಡೆದು ಬರುತ್ತಿದ್ದುದನ್ನ ಕಂಡು ಮನೆಯವರೆಲ್ಲ ಕಂಗಾಲಾದರು.

ಒಳ ಬಂದ ಅವುಗಳು ಅನಾಮತ್ತು ಮನೆಯ ಒಳಗೆಲ್ಲಾ ಇಷ್ಟ ಬಂದಂತೆ ಓಡಾಡುತ್ತಾ ಕೈಗೆ ಸಿಕ್ಕ ವಸ್ತು ಮುಂತಾದವುಗಳನ್ನ ಮುಟ್ಟುತ್ತಾ ಓಡಾಡಲಾರಂಭಿಸಿದವು. ಆ ವಿಚಿತ್ರ ಜೀವಿಗಳ ಭಯಾನಕ ರೂಪ ಹಾಗೂ ಆಕಾರಕ್ಕೆ ಹೆದರಿದ ಮನೆಯವರು ಮನೆಯಲ್ಲಿದ್ದ ತೋಟಾದ ಕೋವಿಗಳನ್ನ ಹಿಡಿದು ಅವುಗಳತ್ತ ಗುಂಡು ಹಾರಿಸಿ ನಿಯಂತ್ರಿಸಲು ಯತ್ನಿಸಿದರು.

ಗುಂಡೇಟು ಬಿದ್ದರೂ ಸಹ ಅದು ಈ ಜೀವಿಗಳಿಗೆ ಯಾವ ಹಾನಿಯನ್ನೂ ಮಾಡಲಿಲ್ಲ. ಪ್ರತಿ ಬಾರಿ ಗುಂಡೇಟು ಬಿದ್ದಾಗಲೂ ಸಹ ನೀರು ತುಂಬಿದ ಡ್ರಮ್ ಗೊ ಅಥವಾ ನೀರಿನ ಬಲೂನ್ ಗೊ ಏಟು ತಾಗಿದಂತೆ ಸದ್ದು ಹೊರಡುತ್ತಿತ್ತು. ಮನೆಯವರು ಎಷ್ಟೇ ಪ್ರತಿಭಟಿಸಿದರೂ ಆ ಜೀವಿಗಳ ಉಪಟಳ ನಿಲ್ಲಲಿಲ್ಲ. ಆದರೆ ಅವು ಮನೆಯವರ ವರ್ತನೆಗೆ ಯಾವ ಕೋಪವನ್ನಾಗಲೀ, ದಾಳಿಯನ್ನಾಗಲೀ ಮಾಡಲಿಲ್ಲ.

ಮನಸು ಮಾಡಿದ್ದರೆ ಹುಲಿಯುಗಿರಿನಂಥ ನಖಗಳಲ್ಲಿ ಮನೆಯವರ ದೇಹವನ್ನ‌ ಛಿದ್ರ ಛಿದ್ರ ಮಾಡಬಹುದಿತ್ತು. ಆದರೆ ಆ ಜೀವಿಗಳು ಈ ಹೊಸ ದೃಶ್ಯಾವಳಿಗಳನ್ನ ನೋಡಿ ಎಕ್ಸೈಟ್ ಆದಂತೆ ಕಂಡವು ಹಾಗೂ ಕುತೂಹಲಗೊಂಡಂತಿದ್ದವು. ಅವುಗಳು ಹೆಚ್ಚೇನೂ ಭಾರವಿದ್ದಂತೆ ತೋರಲಿಲ್ಲ. ನಡೆಯುವಾಗ ದ್ವಿಪಾದಿಗಳಂತೆ ನಡೆದರೂ. ಆಗೀಗ ಉದ್ದನೆಯ ಕೈಗಳನ್ನೂ ಸಹ ಬಳಸುತ್ತಿದ್ದವು. ಓಡಾಡುವಾಗ ಅಂತರಿಕ್ಷಯಾನಿಗಳ ಹಾಗೆ ತೇಲಿ ತೇಲಿ ಕೆಳಗಿಳಿಯುತ್ತಿದ್ದವು.

ಈ ಜೀವಿಗಳು ಮನೆಯವರ ಭ್ರಮೆ ಮಾತ್ರವಾಗಿರಲಿಲ್ಲ ಎಂಬುದಕ್ಕೆ ಒಮ್ಮೆ ಮನೆಯ ಒಬ್ಬ ಸದಸ್ಯನನ್ನು‌ ಸ್ಪರ್ಶಿಸಿ ಆತನ ತಲೆಯನ್ನ ನೇವರಿಸಿದವು. ಆ ಸ್ಪರ್ಶಜ್ಞಾನದ ಭೌತಿಕ ಅನುಭವಕ್ಕೊಳಗಾದ ಆತ ಆ ಜೀವಿಯೆಡೆಗು ಗುಂಡು ಹಾರಿಸಿದ. ಆಗ ಅದು ಕೆಳಗೆ ಬಿದ್ದು ಉರುಳುರುಳಿ ಕಣ್ಮರೆಯಾಯ್ತು. ಅಂತೂ ಕೆಲವಾರು ಗಂಟೆಗಳ ಈ ಘರ್ಣೆಯ ಬಳಿಕ ಜೀವಿಗಳಿಂದ ಪಾರಾಗಿ ಕಾರ್ ತೆಗೆದು ಸ್ಟೇಷನ್ನಿನತ್ತ ಧಾವಿಸಿ ಬಂದರು.

ಅವರ ಕತೆ ಕೇಳಿ ಅವಾಕ್ಕಾದ ಪೋಲಿಸರು ಘಟನೆಯ ಸ್ಥಳಕ್ಕೆ ಬಂದು ನೋಡಿದಾಗ ಅಲ್ಲಿ ಯಾರೂ ಇರಲಿಲ್ಲ. ಆದರೂ ಮನೆಯೆಲ್ಲ ಚೆಲ್ಲಾಪಿಲ್ಲಿಯಾಗಿತ್ತು. ಆಗ ಮನೆಯವರು ಎಲ್ಲೆಲ್ಲಿ ಏನೇನು ಗಲಭೆ ನಡೆಯಿತು ಎಂಬುದನ್ನ ತೋರಿಸುತ್ತಾ ಪೋಲಿಸರಿಗೆ ಸವಿಸ್ತಾರವಾಗಿ ವಿಶ್ಲೇಷಿಸಿದರು. ಗಲಭೆ ನಡೆದ ಕುರುಹುಗಳು ಸ್ಪಷ್ಟವಾಗಿದ್ದರೂ ಸಹ ಅದಕ್ಕೆ ಕಾರಣೀಭೂತವಾದ ಆ ನಿಗೂಢ ಜೀವಿಗಳು ಎಲ್ಲಿಯೂ ಕಾಣಲಿಲ್ಲ. ಆ ಯಂತ್ರವೂ ಸಹ ಕಣ್ಮರೆಯಾಗಿತ್ತು.

 

ಸುತ್ತೆಲ್ಲಾದರೂ ಸರ್ಕಸ್ ನಡೆಯಿತೇ ಎಂದು ಕೆದಕಿದಾಗಲೂ ಸಹ ಯಾವ ಸರ್ಕಸ್ ಹತ್ತಿರದಲ್ಲಿ ನಡೆದಿರಲಿಲ್ಲ. ಈ ಘಟನೆಯನ್ನ ಯುಫಾಲಿಜಿ ಕೇಂದ್ರಕ್ಕೆ ಕೊಟ್ಟು ಮಬೆಯವರೆಲ್ಲರನ್ನೂ ಸಹ ಸಂದರ್ಶಿಸಿ ದಾಖಲಿಸಲಾಗಿದೆ. ಇದು ಐದನೇ ದರ್ಜೆಯ ಮುಖಾಮುಖಿಗೊಂದು (Close encounters of the Fifth kind) ಸ್ಪಷ್ಟ ಹಾಗೂ ಪ್ರಮುಖ ಸಾಕ್ಷಿ ಎಂದು ಪ್ರಾಜೆಕ್ಟ್ ಬ್ಲೂ ಬುಕ್ ಹಾಗೂ ಅಮೇರಿಕದ ಏಲಿಯನ್ ರಿವ್ಯೂನಲ್ಲಿ ಈ ಕೇಸನ್ನ ದಾಖಲಿಸಲಾಗಿದೆ.

ಸಂಗ್ರಹ ಲೇಖನ:-
-ಇಂದೂದರ್ ಒಡೆಯರ್ ಚಿತ್ರದುರ್ಗ
(ಡುಗ್ಗು)

Tags: # Kentucky.#Saaksha TVBill TaylorSutton
ShareTweetSendShare
Join us on:

Related Posts

ಕಿವಿಯಲ್ಲಿ ದಾಸವಾಳ ಇಟ್ಟುಕೊಂಡಿದ್ದೀವಾ? ನಾಯಿಗಳ ಸಂಖ್ಯೆಗಿಂತ ಸಂತಾನಹರಣ ಚಿಕಿತ್ಸೆಯೇ ಹೆಚ್ಚು!: ಅಧಿಕಾರಿಗಳ ಬೆವರಿಳಿಸಿದ ಸಚಿವ ಕೃಷ್ಣಭೈರೇಗೌಡ- ಅಂಕಿಅಂಶಗಳ ಗೋಲ್ಮಾಲ್ ಕಂಡು ಸಚಿವರು ಗರಂ!

ಬೀದಿಬದಿ ವ್ಯಾಪಾರಿಗಳ ತೆರವು ಇಲ್ಲ, ಕೇವಲ ಸ್ಥಳಾಂತರ: ಸಚಿವ ಕೃಷ್ಣ ಬೈರೇಗೌಡ ಯೂಟರ್ನ್, ಜುಲೈ 10ರಿಂದ ಅನಾಥ ವಾಹನಗಳ ಸಫಾಯಿ ಶುರು

by Shwetha
July 3, 2026
0

ಬೆಂಗಳೂರು: ಸಿಲಿಕಾನ್ ಸಿಟಿಯ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ವಿಚಾರದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಮಹತ್ವದ ಯೂಟರ್ನ್ ತೆಗೆದುಕೊಂಡಿದ್ದಾರೆ. ಗ್ರೇಟರ್ ಬೆಂಗಳೂರು...

ವಿಧಿ-ವಿಧಾನವಿಲ್ಲದ ಹಿಂದೂ ವಿವಾಹ ಮಾನ್ಯವಲ್ಲ: ಗುಜರಾತ್ ಹೈಕೋರ್ಟ್

ವಿಧಿ-ವಿಧಾನವಿಲ್ಲದ ಹಿಂದೂ ವಿವಾಹ ಮಾನ್ಯವಲ್ಲ: ಗುಜರಾತ್ ಹೈಕೋರ್ಟ್

by Shwetha
July 3, 2026
0

ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪೊಂದರಲ್ಲಿ, ಕೇವಲ ವಿವಾಹ ನೋಂದಣಿ ಮಾಡಿಕೊಂಡರೆ ಮಾತ್ರ ಹಿಂದೂ ವಿವಾಹವು ಕಾನೂನುಬದ್ಧವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಇಲೇಶ್ ವೋರಾ ಮತ್ತು ಆ‌ರ್.ಟಿ. ವಚ್ಛಾನಿ...

ಬಸ್ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸಾರಿಗೆ ಸಂಸ್ಥೆಗಳ ಉಳಿವಿಗೆ ದರ ಏರಿಕೆ ಅನಿವಾರ್ಯ – ಡಿಕೆ ಶಿವಕುಮಾರ್

ಖಾಸಗಿ ಲೇಔಟ್ ರಸ್ತೆಗಳು ಇನ್ಮುಂದೆ ಸರ್ಕಾರಿ ಸ್ವತ್ತು: ಲೇಔಟ್ ರಸ್ತೆಗಳ ಮೇಲೆ ಖಾಸಗಿ ಹಕ್ಕಿಗೆ ಬ್ರೇಕ್ ಹಾಕಿದ ರಾಜ್ಯ ಸರ್ಕಾರ

by Shwetha
July 3, 2026
0

ಬೆಂಗಳೂರು: ರಾಜ್ಯದ ರಿಯಲ್ ಎಸ್ಟೇಟ್ ಮತ್ತು ನಗರ ಪ್ರದೇಶದ ಪಾದಚಾರಿ ಹಿತದೃಷ್ಟಿಯಿಂದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಎರಡು ಅತ್ಯಂತ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಇನ್ಮುಂದೆ ಖಾಸಗಿ...

ವಿಜಯ್ ಸರ್ಕಾರ ಅಸ್ಥಿರಗೊಳಿಸುವ ಸಂಚು ಆರೋಪ; 6 ಮಂದಿ ಬಂಧನ

ವಿಜಯ್ ಸರ್ಕಾರ ಅಸ್ಥಿರಗೊಳಿಸುವ ಸಂಚು ಆರೋಪ; 6 ಮಂದಿ ಬಂಧನ

by Shwetha
July 3, 2026
0

ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರವನ್ನು ಅಸ್ಥಿರಗೊಳಿಸಲು ಸಂಚು ರೂಪಿಸಲಾಗಿದೆ ಎಂಬ ಆರೋಪದಡಿ ಮಹತ್ವದ ಬೆಳವಣಿಗೆ ನಡೆದಿದೆ. ವರದಿಗಳ ಪ್ರಕಾರ, ವಿಧಾನಸಭೆಯ ಸ್ಪೀಕರ್ ವಿರುದ್ಧದ ಅವಿಶ್ವಾಸ...

30 ದಿನ ಜೈಲಿನಲ್ಲಿದ್ದರೆ ಅಧಿಕಾರ ಗೋವಿಂದ -ಜೈಲಿನಿಂದ ಆಡಳಿತ ನಡೆಸುವ ಆಟಕ್ಕೆ ಬೀಳಲಿದೆ ಬ್ರೇಕ್:30 ದಿನ ಜೈಲಿನಲ್ಲಿದ್ದರೆ ಸಿಎಂ ಮತ್ತು ಪ್ರಧಾನಿ ಪಟ್ಟಕ್ಕೆ ಕುತ್ತು;ವಿರೋಧ ಪಕ್ಷಗಳ ನಿದ್ದೆಗೆಡಿಸಿದ ಕೇಂದ್ರದ ಹೊಸ ಪ್ಲಾನ್

30 ದಿನ ಜೈಲಿನಲ್ಲಿದ್ದರೆ ಅಧಿಕಾರ ಗೋವಿಂದ -ಜೈಲಿನಿಂದ ಆಡಳಿತ ನಡೆಸುವ ಆಟಕ್ಕೆ ಬೀಳಲಿದೆ ಬ್ರೇಕ್:30 ದಿನ ಜೈಲಿನಲ್ಲಿದ್ದರೆ ಸಿಎಂ ಮತ್ತು ಪ್ರಧಾನಿ ಪಟ್ಟಕ್ಕೆ ಕುತ್ತು;ವಿರೋಧ ಪಕ್ಷಗಳ ನಿದ್ದೆಗೆಡಿಸಿದ ಕೇಂದ್ರದ ಹೊಸ ಪ್ಲಾನ್

by Shwetha
July 3, 2026
0

ನವದೆಹಲಿ: ಭ್ರಷ್ಟಾಚಾರ ಅಥವಾ ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿ ಜೈಲು ಪಾಲಾಗುವ ಉನ್ನತ ಹುದ್ದೆಯಲ್ಲಿರುವವರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಲು ಮುಂದಾಗಿದೆ. ಯಾವುದೇ ಸಚಿವರು, ಮುಖ್ಯಮಂತ್ರಿ ಅಥವಾ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram