ಬೆಂಗಳೂರು : ಟಿಪ್ಪು ಈ ನೆಲದ ಮಗ ವೀರ ಹೋರಾಟಗಾರ. ಟಿಪ್ಪು ಸುಲ್ತಾನ್ ಯಾವುದೇ ಪಕ್ಷ, ಜಾತಿ ಹಾಗೂ ಧರ್ಮಕ್ಕೆ ಸೇರಿದವನಲ್ಲ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಬೆಳಗಾವಿ ಸುವರ್ಣ ಸೌಧದಲ್ಲಿ ಸಂಗ್ಗೊಳ್ಳಿ ರಾಯಣ್ಣ ಪ್ರತಿಮೆಗೆ ಸ್ಥಾಪನೆ ಮಾಡುವ ಬಗ್ಗೆ ಮಾತನಾಡುತ್ತ ವಿಶ್ವನಾಥ್, ಟಿಪ್ಪು ಸುಲ್ತಾನ್ ರನ್ನು ಹೊಗಳಿದ್ದಾರೆ. ಸಂಗ್ಗೊಳ್ಳಿ ರಾಯಣ್ಣ ಬ್ರಿಟಿಷ್ ವಿರುದ್ಧ ಹೋರಾಡಿದ ಕಮಾಂಡರ್. ಅದೇ ರೀತಿ ಟಿಪ್ಪು ಸುಲ್ತಾನ್ ಕೂಡ ಎಂದರು.
![]()
ಇದೇ ವೇಳೆ ಟಿಪ್ಪು ಸುಲ್ತಾನ್ ಅವರನ್ನು ನಿಮ್ಮ ಪಕ್ಷ ಒಪ್ಪಿಕೊಳ್ಳಲ್ಲ ಅಲ್ವ ಎಂಬ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ್, ಅದು ಬೇರೆ ವಿಚಾರ. ಟಿಪ್ಪು ಸುಲ್ತಾನ್ ಯಾವುದೇ ಪಕ್ಷ, ಜಾತಿ ಹಾಗೂ ಧರ್ಮಕ್ಕೆ ಸೇರಿದವನಲ್ಲ. ಟಿಪ್ಪು ಸುಲ್ತಾನ್ ಈ ನೆಲದ ಮಣ್ಣಿನ ಮಗ. ಹೀಗಾಗಿ ಟಿಪ್ಪು ಸುಲ್ತಾನ್ ನನ್ನು ಸಣ್ಣವನಾಗಿ ಮಾಡಬಾರದು. ಪಠ್ಯದಲ್ಲಿ ಟಿಪ್ಪು ಪಾಠ ಕೈ ಬಿಟ್ಟಿಲ್ಲ. ಐದನೇ ತರಗ ತಿಯಿಂದ ಏಳನೇ ತರಗತಿಗೆ ಹಾಕಿದ್ದಾರೆ. ಗಾಂಧೀಜಿ ಇಂದ ಟಿಪ್ಪು ತನಕ ವಿದ್ಯಾರ್ಥಿಗಳು ಎಲ್ಲವನ್ನೂ ಓದಬೇಕು. ಆಗಲೇ ರಕ್ತ ಒಂಥರಾ ಆಗೋದು ಎಂದರು.








