ಬೆಂಗಳೂರು : ಸಂಸದ ನಳಿನ್ ಕುಮಾರ್ ಕಟೀಲ್ ರಾಜ್ಯ ಬಿಜೆಪಿ ಸಾರಥಿಯಾಗಿ ಇಂದಿಗೆ ಇಂದು ವರ್ಷ ಪೂರೈಸಿದ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಶುಭಾಶಯ ತಿಳಿಸಿದ್ದಾರೆ.
ಉತ್ತಮ ಸಂಘಟಕ ಎಂಬ ಹೆಗ್ಗಳಿಕೆ ಪಡೆದಿರುವ ಕಟೀಲ್ ಅವರು ಕಳೆದ ಒಂದು ವರ್ಷದಿಂದ ರಾಜ್ಯವನ್ನ ಎರಡು ಮೂರು ಬಾರಿ ಸುತ್ತಿದ್ದಾರೆ. ರಾಜ್ಯದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಉತ್ಸಾಹ, ಆತ್ಮವಿಶ್ವಾಸ ಮೂಡಿಸುವ ಒಳ್ಳೆಯ ಕೆಲಸ ಮಾಡಿದ್ದಾರೆ. ಅನೇಕ ಚುನಾವಣೆಗಳಲ್ಲೂ ಪಕ್ಷದ ಯಶಸ್ಸಿಗೆ ನಳಿನ್ ಕುಮಾರ್ ಕಾರಣಕರ್ತರಾಗಿದ್ದಾರೆ. ಬರುವಂತಹ ದಿನಗಳಲ್ಲಿ ಇನ್ನಷ್ಟು ಶ್ರಮದಿಂದ ಕೆಲಸ ಮಾಡಿ ಪಕ್ಷವನ್ನ ಕಟ್ಟುವಂತಹ ಕೆಲಸ ಮಾಡಲು ದೇವರು ಶಕ್ತಿ ಕೊಡಲಿ ಎಂದು ನಾನು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಬಿಎಸ್ ವೈ ಶುಭಕೋರಿದ್ದಾರೆ.
ನಳಿನ್ ಕುಮಾರ್ ಕಟೀಲ್ ಅವರು ಆರ್ ಎಸ್ ಎಸ್ ಸಂಘಟನೆಯಲ್ಲಿ ಬೆಳೆದವರು. ಹೀಗಾಗಿ ಅವರಿಗೆ ಪಕ್ಷವನ್ನು ಹೇಗೆ ಬೆಳೆಸಬೇಕು ಎಂದು ಚೆನ್ನಾಗಿದೆ ಗೊತ್ತಿದೆ. ಆದ್ದರಿಂದ ಪಕ್ಷ, ಸಂಘಟನೆಯಲ್ಲೂ ಕಟೀಲ್ ಯಶಸ್ವಿಯಾಗಿದ್ದಾರೆ ಎಂಬುದು ಸಂತಸ ತರುವ ವಿಚಾರವಾಗಿದೆ. ಕಟೀಲ್ ಅವರು ಒಂದು ವರ್ಷದ ಕಾಲ ಪಕ್ಷದ ರಥವನ್ನ ಯಶಸ್ವಿಯಾಗಿ ಮುಂದಕ್ಕೆ ಎಳೆದಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ಕಟ್ಟುವ ಶಕ್ತಿ, ಚೈತನ್ಯ ಇನ್ನಷ್ಟು ಕೊಡಲಿ ಎಂದು ಬಿಎಸ್ ವೈ, ನಳಿನ್ ಕುಮಾರ್ ಅವರಿಗೆ ಶುಭಾಶಯ ಕೋರಿದ್ದಾರೆ.









