ರಿಲಯನ್ಸ್ ಇಂಡಸ್ಟ್ರೀಸ್ ಗೆ ಸಮೂಹ ಅಧ್ಯಕ್ಷರಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ನ ಮಾಜಿ ಅಧ್ಯಕ್ಷರಾದ ಸಂಜೀವ್ ಸಿಂಗ್ ಅವರು ಸೇರ್ಪಡೆಯಾಗಿದ್ದಾರೆ. ಇದರ ಜೊತೆಗೆ O2C ವ್ಯವಹಾರದ ನಾಯಕತ್ವ ತಂಡದ ಸದಸ್ಯರಾಗಿಯೂ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
![]()
ನಿಯಮದ ಪ್ರಕಾರ, ಅಧ್ಯಕ್ಷ ಅಥವಾ ನಿರ್ದೇಶಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುವವರು ಅಲ್ಲಿಂದ ನಿರ್ಗಮಿಸಿದ ನಂತರ ಆರು ತಿಂಗಳು ಬೇರೆಲ್ಲೂ ಕಾರ್ಯ ನಿರ್ವಹಿಸುವಂತಿಲ್ಲ. ಆದರೆ ಸಂಜೀವ್ ಸಿಂಗ್ ಅವರು ನಿವೃತ್ತರಾಗಿ ಕೇವಲ ಎರಡು ತಿಂಗಳಾಗಿದೆ. ಅಷ್ಟರಲ್ಲೇ ರಿಲಯನ್ಸ್ ಗೆ ಸಂಜೀವ್ ಸಿಂಗ್ ಅವರ ನೇಮಕ ಮಾಡಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.









