ತ್ರಿಶೂರ್ : ಕೇರಳದ ತ್ರಿಶೂರ್ ನಲ್ಲಿರುವ ಕುಟ್ಟುಮುಕ್ಕು ಮಹಾದೇವ ದೇವಸ್ಥಾನದ ಟಾಯ್ಲೆಟ್ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ದೇಗುಲದ ಮುಖ್ಯ ಆವರಣದ ಒಂದು ಬದಿಯಲ್ಲಿ ಮೂರು ಶೌಚಗೃಹಗಳಿದ್ದು, ಅದರಲ್ಲಿ ಒಂದರ ಮೇಲೆ ‘ಪುರುಷರಿಗೆ’, ಮತ್ತೊಂದರ ಮೇಲೆ ‘ಮಹಿಳೆಯರಿಗೆ’ ಎಂದು ಬೋರ್ಡ್ ಹಾಕಲಾಗಿದೆ. ಆದರೆ ಮೂರನೇ ಟಾಯ್ಲೆಟ್ ಮೇಲೆ ಬ್ರಾಹ್ಮಣರಿಗೆ ಮಾತ್ರ’ ಎಂದು ಬರೆದುಕೊಂಡಿರುವ ಫಲಕ ಇದೆ. ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಂದಾಣಿಕೆ ರಾಜಕೀಯದ ಗುಟ್ಟು ರಟ್ಟಾಗುವ ಭೀತಿ? ಅಡ್ಡ ಮತದಾನ ಮಾಡಿದವರ ವಿರುದ್ಧ ಮೌನಕ್ಕೆ ಶರಣಾದ ಬಿಜೆಪಿ ನಾಯಕರು – ಅಡ್ಡ ಮತದಾನ ಪತ್ತೆಯಾದರೂ ಕೈಕಟ್ಟಿ ಕುಳಿತ ಬಿಜೆಪಿ ಹೈಕಮಾಂಡ್
ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ ಸಂಭವಿಸಿದ ಅಡ್ಡ ಮತದಾನದ ಪ್ರಹಸನ ಈಗ ಹೈಕಮಾಂಡ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪಕ್ಷದ್ರೋಹಿಗಳು ಯಾರು ಎಂಬುದು ಸಾಕ್ಷಿ ಸಮೇತ ಸಾಬೀತಾಗಿದ್ದರೂ, ಅವರ...








