ಯಾದಗಿರಿ : ಟಿಪ್ಪು ಈ ನೆಲದ ಮಗ ವೀರ ಹೋರಾಟಗಾರ. ಟಿಪ್ಪು ಸುಲ್ತಾನ್ ಯಾವುದೇ ಪಕ್ಷ, ಜಾತಿ ಹಾಗೂ ಧರ್ಮಕ್ಕೆ ಸೇರಿದವನಲ್ಲ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಹೇಳಿಕೆಗೆ ಕಂದಾಯ ಸಚಿವ ಆರ್. ಅಶೋಕ್ ಪ್ರತಿಕ್ರಿಯಿಸಿ, ಟಿಪ್ಪುವಿನ ಮತಾಂತರ, ಕೊಡಗಿನಲ್ಲಿ ನಡೆಸಿದ ಕಗ್ಗೊಲೆ ಎಲ್ಲವೂ ಕಣ್ಣ ಮುಂದೆಯೇ ಇದೆ. ಬಿಜೆಪಿ ನಿಲುವು ಟಿಪ್ಪು ಬಗ್ಗೆ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
ಯಾದಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೊ ಗೊತ್ತಿಲ್ಲ, ಆದ್ರೆ ಕೊಡಗಿನಲ್ಲಿ ಟಿಪ್ಪು ನಡೆಸಿದ ಕಗ್ಗೊಲೆ ಎಲ್ಲವೂ ಕಣ್ಣ ಮುಂದೆಯೇ ಇದೆ. ಟಿಪ್ಪು ಬಗ್ಗೆ ಬಿಜೆಪಿ ನಿಲುವು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಪ್ರವಾಹದ ಬಗ್ಗೆ ಮಾತನಾಡಿದ ಸಚಿವರು, ರಾಜ್ಯದಲ್ಲಾಗಿರುವ ಪ್ರವಾಹ ಪರಿಹಾರವಾಗಿ 4 ಸಾವಿರ ಕೋಟಿ ರೂಪಾಯಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ರಾಜ್ಯದಲ್ಲಿ ಪ್ರವಾಹದಿಂದಾಗಿರುವ ಹಾನಿಗೆ ಎಷ್ಟೇ ಖರ್ಚಾದರು ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಲಿದೆ. ಈಗಾಗಲೇ ಎನ್‍ಡಿಆರ್‍ಎಫ್ 2ನೇ ಕಂತು 319 ಕೋಟಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. 3ನೇ ಕಂತು ಕೇಳಿದ್ದೇವೆ, ಕೇಂದ್ರ ಸರ್ಕಾರ ನಮ್ಮ ಜತೆಯಲ್ಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಪ್ರವಾಹದ ಬಗ್ಗೆ ಏನೇನು ಕ್ರಮಕೈಗೊಳ್ಳಬೇಕೊ ಅದನ್ನು ಮಾಡುತ್ತೆ ಎಂದು ತಿಳಿಸಿದರು.








