ಇಪಿಎಫ್‌ಒ ಯುಎಎನ್ ಪೋರ್ಟಲ್‌ನಲ್ಲಿ ಕೆವೈಸಿ ವಿವರಗಳನ್ನು ನವೀಕರಿಸುವುದು ಹೇಗೆ? ಇಲ್ಲಿದೆ ಮಾಹಿತಿ
ಹೊಸದಿಲ್ಲಿ, ಅಗಸ್ಟ್27: ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪ್ರಕಾರ, ನೌಕರರ ಭವಿಷ್ಯ ನಿಧಿ ಸಂಸ್ಥೆ ಇಪಿಎಫ್‌ಒ ತನ್ನ ಚಂದಾದಾರರ ಯುನಿವರ್ಸಲ್ ಅಕೌಂಟ್ ನಂಬರ್ (ಯುಎಎನ್) ನಲ್ಲಿ 2.39 ಲಕ್ಷ ಆಧಾರ್ ಸಂಖ್ಯೆಗಳು, 4.28 ಲಕ್ಷ ಮೊಬೈಲ್ ಸಂಖ್ಯೆಗಳು ಮತ್ತು 5.26 ಲಕ್ಷ ಬ್ಯಾಂಕ್ ಖಾತೆಗಳನ್ನು ಯಶಸ್ವಿಯಾಗಿ ನವೀಕರಿಸಿದೆ.

ಕೆವೈಸಿ ನವೀಕರಣವು ಏಕೀಕೃತ ಸದಸ್ಯರ ಪೋರ್ಟಲ್ ಮೂಲಕ ಆನ್‌ಲೈನ್ ಸೇವೆಗಳನ್ನು ಪಡೆಯಲು ಸದಸ್ಯರನ್ನು ಶಕ್ತಗೊಳಿಸುತ್ತದೆ. ಅಂತಿಮ ವಾಪಸಾತಿ ಮತ್ತು ಮುಂಗಡಗಳಿಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಪ್ಯಾನ್, ಆಧಾರ್ ಮತ್ತು ಬ್ಯಾಂಕ್ ಖಾತೆ ವಿವರಗಳು ಸೇರಿದಂತೆ ನೌಕರರ ದತ್ತಾಂಶವೇ ಕೆವೈಸಿ ವಿವರಗಳು. ನೀವು ಇನ್ನೂ ಇಪಿಎಫ್‌ಒ ಸದಸ್ಯ ಪೋರ್ಟಲ್‌ನಲ್ಲಿ ಈ ವಿವರಗಳನ್ನು ನವೀಕರಿಸದಿದ್ದರೆ, ಇಪಿಎಫ್‌ಒನ ಯುಎಎನ್ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಅವುಗಳನ್ನು ಪೂರ್ಣಗೊಳಿಸಿ.
ಇಪಿಎಫ್‌ಒ ಸದಸ್ಯರಿಗೆ ಯುಪಿಎನ್‌ಗೆ ಇಪಿಎಫ್‌ಒ ಯುಎಎನ್ ಪೋರ್ಟಲ್‌ನಲ್ಲಿ ಕೆವೈಸಿ ವಿವರವನ್ನು ನವೀಕರಿಸಲು ಅಥವಾ ಬದಲಾಯಿಸಲು ಅಗತ್ಯವಿದೆ.
ಕೆವೈಸಿ ವಿವರಗಳನ್ನು ನವೀಕರಿಸುವ ಪ್ರಕ್ರಿಯೆ ಇಲ್ಲಿದೆ:

1) ನವೀಕರಣದ ಸಲುವಾಗಿ ಕೆವೈಸಿ ವಿವರಗಳನ್ನು ಮೊದಲು ನಿಮ್ಮ ಯುಎಎನ್ ಮತ್ತು ಪಾಸ್‌ವರ್ಡ್ ಬಳಸಿ ನಿಮ್ಮ ಇಪಿಎಫ್ ಖಾತೆಗೆ ಲಾಗಿನ್ ಆಗಬೇಕು.
2) ನಂತರ ‘ಮ್ಯಾನೇಜ್’ ವಿಭಾಗದ ಅಡಿಯಲ್ಲಿ ಡ್ರಾಪ್ ಡೌನ್ ಮೆನುವಿನಿಂದ ‘ಕೆವೈಸಿ’ ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ ನೀವು ಪ್ಯಾನ್, ಆಧಾರ್, ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್ (ಡಿಎಲ್), ರೇಷನ್ ಕಾರ್ಡ್, ಎಲೆಕ್ಷನ್ ಕಾರ್ಡ್, ಮತ್ತು ಬ್ಯಾಂಕ್ ವಿವರಗಳನ್ನು ಸಲ್ಲಿಸಿ.
3) ವಿವರಗಳನ್ನು ಭರ್ತಿ ಮಾಡಿದ ಕೂಡಲೇ, ನೀವು ನವೀಕರಿಸಲು ಬಯಸುವ ಡಾಕ್ಯುಮೆಂಟ್‌ನ ಮುಂಭಾಗದ ಪೆಟ್ಟಿಗೆಯ ಮೇಲೆ ಟಿಕ್ ಮಾಡಿ. ಡಾಕ್ಯುಮೆಂಟ್ ಪ್ರಕಾರ ಡಾಕ್ಯುಮೆಂಟ್ ಸಂಖ್ಯೆ ಮತ್ತು ನಿಮ್ಮ ಹೆಸರನ್ನು ನಮೂದಿಸಿ.
4) ಬ್ಯಾಂಕ್ ವಿವರಗಳ ಸಂದರ್ಭದಲ್ಲಿ ಐಎಫ್‌ಎಸ್‌ಸಿ, ಪಾಸ್‌ಪೋರ್ಟ್ ಮತ್ತು ಡಿಎಲ್ ಸಂದರ್ಭದಲ್ಲಿ ಮುಕ್ತಾಯ ದಿನಾಂಕದಂತಹ ಹೆಚ್ಚುವರಿ ವಿವರಗಳನ್ನು ನೀಡಿ.

5) ಇದರ ನಂತರ, ‘ಸೇವ್’ ಬಟನ್ ಕ್ಲಿಕ್ ಮಾಡಿ.
6) ಇಪಿಎಫ್‌ಒ ನಂತರ ನಿಮ್ಮ ವಿವರಗಳನ್ನು ಪರಿಶೀಲಿಸುತ್ತದೆ ಮತ್ತು ವಿವರಗಳು ಹೊಂದಿಕೆಯಾದ ನಂತರ, ಡಾಕ್ಯುಮೆಂಟ್ ಅನ್ನು ಪರಿಶೀಲಿಸಿದೆ ಎಂದು ಗುರುತಿಸಲಾಗುತ್ತದೆ.








