ಕೊರೊನಾ ಆತಂಕದಿಂದಾಗಿ ಇಡೀ ದೇಶಾದ್ಯಂತ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದ್ದು, ವಿದ್ಯಾರ್ಥಿಗಳಿಗೆ ಆನ್ ಲೈನ್ ಲೈನ್ ಮೂಲಕವೇ ಶಿಕ್ಷಣಕ್ಕೆ ಒತ್ತು ನಿಡಲಾಗಿದೆ. ಆದರೆ ಬಡ ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣ ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ RSS ಬಡ ಮಕ್ಕಳಿಗೆ ನೆರರವಾಗಲು ಮುಂದಾಗಿದೆ.
ಶಿಕ್ಷಣರಿಂದ ವಂಚಿತರಾಗುತ್ತಿರುವ ಬಡ ಮಕ್ಕಳಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಲ್ಯಾಪ್ ಟಾಪ್ ಸೇರಿದಂತೆ ಆನ್ಲೈನ್ ಶಿಕ್ಷಣಕ್ಕೆ ಬೇಕಾಗುವ ಸೌಲಭ್ಯ ನೀಡಲು ಮುಂದಾಗಿದೆ. ಅಂಗ ಸಂಸ್ಥೆಗಳ ಜೊತೆ ಸೇರಿ ಬಡ ಮಕ್ಕಳನ್ನು ಗುರುತಿಸಿ ಅವ್ರಿಗೆ ಕಂಪ್ಯೂಟರ್ ನೀಡಲಿದ್ದು, ಇದರಿಂದ ಅನೇಕ ವಿದ್ಯಾರ್ಥಿಗಳಿಗೆ ನೆರವಾಗಲಿದೆ.