ನವದೆಹಲಿ : ಸೆ. 13 ರಂದು ನಡೆಯಲಿರುವ ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ಮುಂದೂಡುವಂತೆ ಇಡೀ ದೇಶಾದ್ಯಂತ ಒತ್ತಡಗಳು ಕೇಳಿಬಂದಿವೆ. ಇದೀಗ ಎರಡು ಪರೀಕ್ಷೆಗಳನ್ನು ಕೇಂದ್ರ ಸರ್ಕಾರ ಕೂಡಲೇ ಮುಂದೂಡಬೇಕು ಎಂದು ಒತ್ತಾಯಿಸಿ ಇಂದು ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ.
![]()
ದೇಶದ ಎಲ್ಲಾ ರಾಜ್ಯಗಳ ಕಾಂಗ್ರೆಸ್ ಘಟಕವೂ ಸ್ಥಳೀಯ ಸರ್ಕಾರಿ ಕಚೇರಿಗಳ ಮುಂಭಾಗ 11 ಗಂಟಗೆ ಸರಿಯಾಗಿ ಪ್ರತಿಭಟನೆ ಮಾಡಲಿದ್ದು, ಸೆ. 13 ರಂದು ನಡೆಯಲಿರುವ ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ಮುಂದೂಡುವಂತೆ ಒತ್ತಾಯಿಸಲಿವೆ. ಇನ್ನೂ ಪ್ರತಿಭಟನೆಗೆ ಡಿಎಂಕೆ, ಆಪ್ ಸೇರಿದಂತೆ ಎಡ ಪಕ್ಷಗಳು ಸಾಥ್ ನೀಡಲಿವೆ.









