ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 5 ತಿಂಗಳ ಗರಿಷ್ಠ ಮಟ್ಟ ತಲುಪಿದೆ. ಏಷ್ಯಾದ ಮಾರುಕಟ್ಟೆಯಲ್ಲಿನ ಗಳಿಕೆಯಿಂದ ರೂಪಾಯಿ ಮೌಲ್ಯವರ್ಧನೆ ಆಗುವ ಜೊತೆಗೆ ಷೇರು ಮಾರುಕಟ್ಟೆಯಲ್ಲಿ ಡಾಲರ್ ಒಳಹರಿವು ಹೆಚ್ಚಳ ಆಗಿದೆ.
![]()
ಗುರುವಾರದ ವಹಿವಾಟಿನ ಅಂತ್ಯದ ವೇಳೆ ರೂಪಾಯಿ ಮೌಲ್ಯ 73.83 ಇದ್ದ ರೂಪಾಯಿ ಮೌಲ್ಯ ಇದೀಗ ಡಾಲರ್ ಎದುರು 73.51 ತಲುಪಿದೆ. ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಹೆಚ್ಚಿನ ಏರಿಳಿತ ಕಾಣದಂತೆ ಆರ್‌ಬಿಐ ಮಧ್ಯಪ್ರವೇಶಿಸುವ ಕುರಿತಾಗಿಯೂ ಹೂಡಿಕೆದಾರರು ಮತ್ತು ವರ್ತಕರು ಗಮನಿಸುತ್ತಿದ್ದಾರೆ.









