ನವದೆಹಲಿ: ಬಿಹಾರದ ಚುನಾವಣೆ ರದ್ದುಪಡಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ವಜಾಗೊಳಿಸಿದೆ. ಅಲ್ಲದೇ ಕೊರೊನಾ ನೆಪದಲ್ಲಿ ಬಿಹಾರ ವಿಧಾನಸಭಾ ಚುನಾವಣೆಯನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಈ ಮೂಲಕ ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
![]()
ಇನ್ನೂ ಈ ವಿಚಾರವಾಗಿ ಏನು ಮಾಡಬೇಕು ಎಂಬುದನ್ನು ಮುಖ್ಯ ಚುನಾವಣಾಧಿಕಾರಿಗೆ ಸುಪ್ರೀಂಕೋರ್ಟ್ ಹೇಳಲು ಆಗುವುದಿಲ್ಲ. ಕೇಂದ್ರ ಚುನಾವಣಾಧಿಕಾರಿ ಎಲ್ಲವನ್ನು ಪರಿಗಣಿಸಲಿದ್ದಾರೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ಇದಲ್ಲದೆ ಬಿಹಾರ ಚುನಾವಣೆ ಮುಂದೂಡಿಕೆ ಮಾಡಲು ಕೊರೊನಾ ಸಮರ್ಪಕವಾದ ಕಾರಣವಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.









