ಅಮೆರಿಕ ಅಧ್ಯಕ್ಷೀಯ ಚುನಾವಣೆ – ಮುಖಾಮುಖಿ ಚರ್ಚೆಯ ಮೊದಲು ಡ್ರಗ್ಸ್ ಪರೀಕ್ಷೆಗೆ ಒಳಗಾಗಿ – ಬಿಡೆನ್ ಗೆ ಟ್ರಂಪ್ ಕರೆ
ವಾಷಿಂಗ್ಟನ್, ಅಗಸ್ಟ್29: ಅಮೆರಿಕ ಅಧ್ಯಕ್ಷೀಯ ಪ್ರಚಾರ ಚರ್ಚೆಯ ಮುಖಾಮುಖಿಯ ಮೊದಲು ಜೋ ಬಿಡನ್‌ಗೆ ಡ್ರಗ್ಸ್ ಪರೀಕ್ಷೆಗೆ ಒಳಗಾಗುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ ಅವರ ಡೆಮಾಕ್ರಾಟಿಕ್ ಎದುರಾಳಿಯ ಬಗ್ಗೆಗಿನ ಅನುಮಾನಗಳಿಗೆ ಯಾವುದೇ ಪುರಾವೆಗಳನ್ನು ನೀಡಿಲ್ಲ.
ವಾಷಿಂಗ್ಟನ್ ಎಕ್ಸಾಮಿನರ್‌ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಅವರು ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿ ಬಿಡೆನ್ ಅವರು ಅತ್ಯುತ್ಸಾಹದಿಂದ ಇರುವಂತೆ ಕಾಣುತ್ತಿದ್ದಾರೆ ಎಂದು ಹೇಳಿದರು.
ಅವರ ಹೇಳಿಕೆಯನ್ನು ಬೆಂಬಲಿಸಲು ಟ್ರಂಪ್ ಬಳಿ ಯಾವುದೇ ದೃಡವಾದ ಪುರಾವೆಗಳಿಲ್ಲ, ಆದರೆ ನಾನು ನಿಮಗೆ ಹೇಳಬಲ್ಲೆ ಎಂದರೆ ನನಗೆ ಈ ವಿಷಯದಲ್ಲಿ ತುಂಬಾ ತಿಳುವಳಿಕೆ ಇದೆ. ನಾನು ಅವರನ್ನು ವಿಭಿನ್ನ ಜನರೊಂದಿಗೆ ಚರ್ಚೆಗಳಲ್ಲಿ ನೋಡಿದ್ದೇನೆ ಎಂದು ಟ್ರಂಪ್ ಹೇಳಿದ್ದು, ಈ ಮೊದಲ ಚರ್ಚೆಗಳಲ್ಲಿ ಬಿಡೆನ್ ಉತ್ಸಾಹದಾಯಕವಾಗಿ ಕಂಡು ಬಂದಿರಲಿಲ್ಲ. ಇತ್ತೀಚೆಗಿನ ಪ್ರಚಾರದಲ್ಲಿ ಬಿಡೆನ್ ಅತ್ಯುತ್ಸಾಹದಿಂದ ಇರುವಂತೆ ಕಾಣುತ್ತಿದೆ. ಇದು ಹೇಗೆ ಸಂಭವಿಸಿತು ಎಂದು ಕೇಳಿದರು.
ಟ್ರಂಪ್ 2016 ರ , ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ, ಆಗಿನ ಎದುರಾಳಿಯನ್ನು ಹೀಗೆ ಟೀಕಿಸಿದ್ದರು. ಹಿಲರಿ ಕ್ಲಿಂಟನ್ ಡ್ರಗ್ಸ್ ಸೇವಿಸಿದ್ದು ಪ್ರಚಾರದ ಮೊದಲು ನಾವು ಡ್ರಗ್ಸ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ ಎಂದು ಅವರು ನ್ಯೂ ಹ್ಯಾಂಪ್ಶೈರ್ನಲ್ಲಿ ನಡೆದ ಚುನಾವಣಾ ಜಾಥಾದಲ್ಲಿ ಹೇಳಿದ್ದರು.
ಟ್ರಂಪ್ ಮತ್ತು ಬಿಡೆನ್ ನಡುವಿನ ಮೊದಲ ಚರ್ಚೆಯನ್ನು ಸೆಪ್ಟೆಂಬರ್ 29 ರಂದು ನಿಗದಿಪಡಿಸಲಾಗಿದೆ. ನಂತರದ ಎರಡು ಚರ್ಚೆಗಳು ಅಕ್ಟೋಬರ್ 15 ಮತ್ತು 22 ರಂದು ನಡೆಯಲಿವೆ.