ನವದೆಹಲಿ : ಭಾರತದಲ್ಲಿ ಹಲವಾರು ಮುನ್ನೆಚರಿಕಾ ಕ್ರಮಗಳ ಹೊರತಾಗಿ ಕೊರೊನಾ ರಣಕೇಕೆ ಹಾಕುತ್ತಾ ಸಾಗಿದೆ. ಪ್ರತಿದಿನ ದೇಶದಲ್ಲಿ ಕೊರೊನಾ ಸ್ಫೋಟವಾಗುತ್ತಿದ್ದು, ಇದೀಗ ದೇಶದಾದ್ಯಂತ ಒಟ್ಟು ಸೋಂಕಿತರ ಸಂಖ್ಯೆ 34 ಲಕ್ಷ ಗಡಿ ದಾಟಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ಪ್ರಕಾರ ಕಳೆದ 24 ಗಂಟೆಗಳಲ್ಲಿ 76 ಸಾವಿರದ 472 ಮಂದಿಯಲ್ಲಿ ಹೆಮ್ಮಾರಿ ವೈರಸ್ ದೃಢಪಟ್ಟಿದ್ದು, ಒಂದು ಸಾವಿರದ 021 ಮಂದಿ ಮಹಾಮಾರಿ ವೈರಸ್ ಗೆ ಬಲಿಯಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 34,63,973ಕ್ಕೆ ಕೊರೊನಾಗೆ ಮೃತಪಟ್ಟವರ ಸಂಖ್ಯೆ 62,550ಕ್ಕೆ ಏರಿಕೆಯಾಗಿದೆ.
ಈ ನಡುವೆ 34,63,973 ಮಂದಿ ಸೋಂಕಿತರ ಪೈಕಿ 26,48,999 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನುಳಿದಂತೆ ದೇಶದಲ್ಲಿ 7,52,424 ಸಕ್ರಿಯ ಕೇಸುಗಳಿವೆ.









