ಬಹುನಿರೀಕ್ಷಿತ ಕೆ ಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಇತ್ತೀಚೆಗೆ ನಾಯಕರ ಬದಲಾವಣೆ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.
ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಆರಂಭವಾಗಿದ್ದು, ಚಾಪ್ಟರ್ 1ರಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದ ಅನಂತ್ ನಾಗ್ ಪಾತ್ರವನ್ನು ಚಾಪ್ಟರ್ 2ರಲ್ಲಿ ಪ್ರಕಾಶ್ ರಾಜ್ ಅವರು ಮುಂದುವರೆಸಿಕೊಂಡು ಹೋಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಈ ವದಂತಿಗೆ ತೆರೆ ಎಳೆದಿದ್ದ ನಿರ್ದೇಶಕ ಪ್ರಶಾಂತ್ ನೀಲ್ ಅವರು ಇದು ಅನಂತ್ ನಾಗ್ ಅವರನ್ನು ಬದಲಿಸುವ ಪಾತ್ರವಲ್ಲ, ಬದಲಾಗಿ ಇದು ಮತ್ತೊಂದು ಪ್ರಮುಖ ಪಾತ್ರ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಎಲ್ಲಾ ಬದಲಾವಣೆಗಳ ಬೆನ್ನಲ್ಲೇ ಇದೀಗ ಮತ್ತೊಬ್ಬ ಯುವ ನಟ ಸೆಟ್ ನಲ್ಲಿ ಕಾಣಿಸಿಕೊಂಡಿರುವುದು ಹಲವರ ಹುಬ್ಬೇರುವಂತೆ ಮಾಡಿದೆ. ಶೂಟಿಂಗ್ ಸೆಟ್‌ನಿಂದ ಬಿಡುಗಡೆಯಾದ ಫೋಟೋವೊಂದರಲ್ಲಿ RJ ರೋಹಿತ್ ಸಹ ಕಾಣಿಸಿಕೊಂಡಿರುವುದು ಸದ್ಯ ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಬೆಂಗಳೂರಿನಲ್ಲಿ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ನಡೆಯುತ್ತಿದ್ದು, ಮಿನರ್ವ್ ಮಿಲ್‌ನಲ್ಲಿ ಬೃಹತ್ ಸೆಟ್ ಹಾಕಲಾಗಿದೆ.
![]()








