ಬೆಂಗಳೂರು : ಇತ್ತೀಚೆಗೆ ಮೃತಪಟ್ಟ ಯುವ ನಟನ ಶವಪರೀಕ್ಷೆ ಯಾಕೆ ಮಾಡಿಲ್ಲ ಎಂಬ ಇಂದ್ರಜಿತ್ ಲಂಕೇಶ್ ಹೇಳಿಕೆ ಸ್ಯಾಂಡಲ್ ವುಡ್ ನಲ್ಲಿ ಭಾರಿ ಸಂಚಲನ ಸೃಷ್ಠಿ ಮಾಡಿದೆ. ಚಂದನವನದ ನಟ -ನಟಿಯರು ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿದ್ದಾರಾ ಎಂಬ ಪ್ರಶ್ನೆಗೆ ಇಂದ್ರಜಿತ್ ಅವರ ಈ ಹೇಳಿಕೆ ರೆಕ್ಕೆಪುಕ್ಕಗಳನ್ನು ನೀಡಿದೆ.
ಈ ಮಧ್ಯೆ ‘ಇತ್ತೀಚೆಗೆ ಮೃತಪಟ್ಟ ಯುವ ನಟನ ಶವಪರೀಕ್ಷೆ ಯಾಕೆ ಮಾಡಿಲ್ಲ’ ಎಂಬ ಇಂದ್ರಜಿತ್ ರ ಈ ಹೇಳಿಕೆಗೆ ಇದೀಗ ಸರ್ಜಾ ಫ್ಯಾಮಿಲಿ ಪ್ರತಿಕ್ರಿಯಿಸಿದ್ದು, ಚಿರು ನಿಧನವಾಗಿರೋದು ಹೃದಯಾಘಾತದಿಂದ. ಕೋವಿಡ್ ಇದ್ದದ್ದರಿಂದ ಪೋಸ್ಟ್ ಮಾರ್ಟಮ್ ಮಾಡಲಿಲ್ಲ’ ಎಂದು ಸ್ಪಷ್ಟನೆ ನೀಡಿದೆ.
ಇಂದ್ರಜಿತ್ ಆರೋಪದ ಬಗ್ಗೆ ಸುದ್ದಿ ಸಂಸ್ಥೆ ಜೊತೆಗೆ ಮಾತನಾಡಿದ ದಿವಂಗತ ಚಿರಂಜೀವಿ ಸರ್ಜಾ ಅವರ ಮಾವ ಸುಂದರ್ ರಾಜ್, ‘ನಾವು ಡಾ.ರಾಜ್ ಕುಮಾರ್ ಪಾಲಿಸಿ ಬೆಳೆಸಿಕೊಂಡು ಬಂದವರು, ನಮ್ಮ ಕುಟುಂಬದಲ್ಲಿ ಅಂತಹ ದುರಾಭ್ಯಾಸ ಯಾರಿಗೂ ಇಲ್ಲ. ಮುಂಬೈ ಇಂಡಸ್ಟ್ರಿಯೇ ಬೇರೆ, ಸ್ಯಾಂಡಲ್ ವುಡ್ ಇಂಡಸ್ಟ್ರಿಯೇ ಬೇರೆ. ಚಿರು ನಿಧನವಾಗಿರೋದು ಹೃದಯಾಘಾತದಿಂದ. ಕೋವಿಡ್ ಇದ್ದದ್ದರಿಂದ ಪೋಸ್ಟ್ ಮಾರ್ಟಮ್ ಮಾಡಲಿಲ್ಲ’ ಎಂದಿದ್ದಾರೆ.









