ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿಕ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಹಾಗೂ ಪ್ರೇಯಸಿ ರಿಯಾ ಚಕ್ರವರ್ತಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಒಂದೆಡೆ ರಿಯಾ ಚಕ್ರವರ್ತಿ ವಿರುದ್ಧ ಕೇವಲ ಕುಟುಂಬಸ್ಥರು ಮಾತ್ರವಲ್ಲದೇ ಸುಶಾಂತ್ ಅಭಿಮಾನಿಗಳು, ನೆಟ್ಟಿಗರು ಎಲ್ಲರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಸುಶಾಂತ್ ಹಾಗೂ ರಿಯಾ ನಡುವಿನ ಸಂಬಂಧ ಸರಿಯಿರಲಿಲ್ಲ ಎಂದು ಇತ್ತೇಚೆಗಷ್ಟೇ ಸುಶಾಂತ್ ಮಾಜಿ ಪ್ರೇಯಸಿ ಅಂಕಿತಾ ಹೊಸ ಬಾಂಬ್ ಸಿಡಿಸಿದ್ದರು. ಅಲ್ಲದೇ ಸುಶಾಂತ್ ಸಾವಿನ ಪ್ರಕರಣದಲ್ಲಿ ರಿಯಾ ವಿರುದ್ಧ ಶಂಕೆ ಹೊರಹಾಕಿದ್ದರು.
ಇದೀಗ ಈ ಪ್ರಕರಣ ಸಂಬಂಧ ಖುದ್ದು ರಿಯಾ ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿರುವ ರಿಯಾ ಸುಶಾಂತ್ ಖರೀದಿ ಮಾಡಿದ್ದ ಫ್ಲಾಟ್ ನಲ್ಲಿ ಅಂಕಿತಾ ಲೋಖಂಡೆ ಇನ್ನೂ ಹೇಗೆ ವಾಸಿಸುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ಅಂಕಿತಾ, ವಿಕ್ಕಿ ಜೈನ್ ಜೊತೆ ರಿಲೇಶನ್ ಶಿಪ್ ನಲ್ಲಿದ್ದರೂ ಸುಶಾಂತ್ ಗೆ ತುಂಬಾ ಆಪ್ತರಾಗಿದ್ದಾರೆ. ಈಗ ಅದ್ಭುತ ವ್ಯಕ್ತಿಯಂತೆ ನಟಿಸುತ್ತಾ ಹೊರ ಬಂದಿದ್ದಾರೆ ಕಿಡಿಕಾರಿದ್ದಾರೆ.
ಇದೇ ವೇಳೆ ಸುಶಾಂತ್ ಗೆ ರಿಯಾ ಕಿರುಕುಳ ನೀಡುತ್ತಿದ್ದರು ಎಂಬ ಅಂಕಿತಾ ಆರೋಪಕ್ಕೆ ತಿರುಗೇಟು ನೀಡಿರುವ ರಿಯಾ ಸುಶಾಂತ್ ಸಿಂಗ್ ಜೊತೆ ಬ್ರೇಕ್ ಅಪ್ ಮಾಡಿಕೊಂಡ ಬಳಿಕ ಅಂಕಿತಾ ಸುಶಾಂತ್ ಫ್ಲಾಟ್ ನ ಗೋಡೆ ಒಡೆದು ಜಾಗ ಮಾಡಿಕೊಂಡು ವಾಸಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ರಿಯಾ ಮಾತನ್ನು ಸುಶಾಂತ್ ಕುಟುಂಬದವರು ಅಲ್ಲಗಳೆದಿದ್ದಾರೆ. ಅಲ್ಲದೇ ನಿನಗೆ ಸ್ಕ್ರಿಪ್ಟ್ ಬರೆದು ಕೊಟ್ಟಿದ್ದು ಯಾರು? ಎಂದು ಪ್ರಶ್ನಿಸಿದ್ದಾರೆ.