ಮಹಿಳೆಯೊಬ್ಬರು ಅಮೆರಿಕಾದ ಅಧ್ಯಕ್ಷ ಗಾದಿಗೆ ಏರಬೇಕೆಂಬ ಮಾತಿಗೆ ನಾನೂ ಸಹ ಬೆಂಬಲ ಸೂಚಿಸುತ್ತೇನೆ. ಆದರೆ ಆ ಸ್ಥಾನಕ್ಕೆ ಕಮಲಾ ಹ್ಯಾರಿಸ್ ಸಮರ್ಥರಲ್ಲ. ನನ್ನ ಮಗಳು ಇವಾಂಕ್ ಟ್ರಂಕ್ ಆ ಗಾದಿಗೆ ಸೂಕ್ತ ಎಂದು ಟ್ರಂಪ್ ಹೇಳಿದ್ದಾರೆ. ರಿಪಬ್ಲಿಕ್ ಪಕ್ಷದ ಪ್ರಚಾರ ರ್ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ಟ್ರಂಪ್ ಅವರು ಅಧ್ಯಕ್ಷ ಸ್ಥಾನದಲ್ಲಿ ಮಹಿಳೆಯೊಬ್ಬರನ್ನು ನೋಡುವ ಆಸೆ ನನಗೂ ಇದೆ. ನೀವೆಲ್ಲಾ ಇವಾಂಕ್ ಹೆಸರನ್ನು ಹೇಳುತ್ತಿದ್ದೀರಿ.
ಅಲ್ದೇ ಕಮಲಾ ಹ್ಯಾರಿಸ್ ಅವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು 1 ವರ್ಷದ ಹಿಂದೆ ಹೇಳಲಾಗಿತ್ತು. ಆದರೆ ಹಾಗೆ ಹೇಳಿದ ಐದೇ ತಿಂಗಳಲ್ಲಿ ಅವರ ಜನಪ್ರಿಯತೆಯು ತಳಮಟ್ಟಕ್ಕೆ ಕುಸಿದಿತ್ತು ಎಂದು ಟ್ರಂಪ್ ವ್ಯಂಗ್ಯವಾಡಿದ್ದು, ಅಧ್ಯಕ್ಷ ಹುದ್ದೆಗೆ ಕಮಲಾ ಸೂಕ್ತರಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇನ್ನೂ ಮುಂದುವರೆದು ಮಾತನಾಡಿರುವ ಟ್ರಂಪ್, ಕಮಲಾ ಅವರಿಗೆ ತಾವು ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿಯಾದರೆ ಯಾರೂ ಮತ ಹಾಕುವುದಿಲ್ಲ ಎಂಬುದು ಅರಿವಾಗಿದೆ. ಹೀಗಾಗಿಯೇ ಅವರು ಅಧ್ಯಕ್ಷೀಯ ಸ್ಥಾನದ ರೇಸ್‌ನಿಂದ ಹಿಂದೆ ಸರಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.