ತಾವು ಸಾಕಿದ ಸಿಂಹಗಳಿಂದ ಕೊಲ್ಲಲ್ಪಟ್ಟ ಪ್ರಾಣಿ ಸಂರಕ್ಷಣಾಕಾರ
ಕೇಪ್ ಟೌನ್, ಅಗಸ್ಟ್30: ದಕ್ಷಿಣ ಆಫ್ರಿಕಾದ ಪ್ರಾಣಿ ಸಂರಕ್ಷಣಾಕಾರರೊಬ್ಬರು ತಾವು ಸಾಕಿದ ಸಿಂಹದಿಂದ ಕೊಲ್ಲಲ್ಪಟ್ಟಿದ್ದಾರೆ. 69 ರ ಹರೆಯದ ವೆಸ್ಟ್ ಮ್ಯಾಥ್ಯೂಸನ್ ಬುಧವಾರ ಎರಡು ಬಿಳಿ ಸಿಂಹಿಣಿಗಳ ಜೊತೆ ನಡೆದುಕೊಂಡು ಹೋಗುತ್ತಿದ್ದಾಗ ಏಕಾಏಕಿ ಅವುಗಳು ದಾಳಿ ಮಾಡಿ ಕೊಂದಿದೆ ಎಂದು ಅವರ ಕುಟುಂಬ ಗುರುವಾರ ತಿಳಿಸಿದೆ.
ದಕ್ಷಿಣ ಆಫ್ರಿಕಾದ ಉತ್ತರ ಲಿಂಪೊಪೊ ಪ್ರಾಂತ್ಯದ ಕುಟುಂಬ ಸ್ವಾಮ್ಯದ ಲಯನ್ ಟ್ರೀ ಟಾಪ್ ಲಾಡ್ಜ್‌ನ ಆವರಣದಲ್ಲಿ ಈ ಘಟನೆ ನಡೆದಿದೆ. ಅಂಕಲ್ ವೆಸ್ಟ್ ಎಂದು ಕರೆಯಲ್ಪಡುವ ಮ್ಯಾಥ್ಯೂಸನ್ ಸಿಂಹಗಳನ್ನು ಮರಿಗಳಾಗಿದ್ದರಿಂದ ಬೆಳೆಸಿದರು ಮತ್ತು ಅದರೊಂದಿಗೆ ಆತ್ಮೀಯರಾಗಿದ್ದರು .
ಸಿಂಹ ದಾಳಿ ಮಾಡಿದಾಗ ಮ್ಯಾಥ್ಯೂಸನ್ ಅವರ ಪತ್ನಿ 65 ವರ್ಷ ಪ್ರಾಯದ ಗಿಲ್, ತನ್ನ ಗಂಡನ ರಕ್ಷಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ ಎಂದು ಕುಟುಂಬದ ವಕೀಲ ಮರೀನಾ ಬೋಥಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
2017 ರಲ್ಲಿ, ಎರಡು ಬಿಳಿ ಸಿಂಹಗಳು ಲಾಡ್ಜ್ನಿಂದ ತಪ್ಪಿಸಿಕೊಂಡು ನೆರೆಯ ಆಸ್ತಿಯಾದ ಎನ್ಗಮಾ ಲಾಡ್ಜ್ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಕೊಂದವು ಎಂದು ವರದಿಯಾಗಿದೆ. ಆ ಸಮಯದಲ್ಲಿ ಸಿಂಹಗಳು ಆಕ್ರಮಣಕಾರಿ ಅಲ್ಲ ಮತ್ತು ಅವರು ದಿನಕ್ಕೆ ಮೂರರಿಂದ ನಾಲ್ಕು ಗಂಟೆಗಳ ಕಾಲ ನಡೆಯುತ್ತವೆ ಎಂದು ಮ್ಯಾಥ್ಯೂಸನ್ ಹೇಳಿದ್ದರು.
ಮ್ಯಾಥ್ಯೂಸನ್ ಸಿಂಹದ ಮರಿಗಳನ್ನು ಪ್ರಾಣಿಗಳು ಸುತ್ತುವರಿದ ಪ್ರದೇಶದಲ್ಲಿ ರಕ್ಷಿಸಿದ್ದಾರೆಂದು ಹೇಳಲಾಗಿದೆ. ಮ್ಯಾಥ್ಯೂಸನ್ ಮತ್ತು ಅವರ ಪತ್ನಿಗೆ ನಾಲ್ಕು ಗಂಡು ಮತ್ತು ಆರು ಮೊಮ್ಮಕ್ಕಳು ಇದ್ದಾರೆ.